Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 31.01.2024
Share:

By Village Missionary Movement

Wednesday, 31-Jan-2024

ಧೈನಂದಿನ ಧ್ಯಾನ(Kannada) – 31.01.2024

 

ತ್ಯಾಗವಾ? ಅವಕಾಶವಾ?

 

"ಆತನಿಗೆ ಆಲೋಚನಾ ಕರ್ತನು ಯಾರು? ಮೊದಲು ಆತನಿಗೆ ಕೊಟ್ಟು ಪ್ರತಿಫಲವನ್ನು ತೆಗೆದುಕೊಳ್ಳುವವನು ಯಾರು?" - ರೋಮಾ 11:35

 

ಕ್ರೈಸ್ತ ಜಗತ್ತಿನಲ್ಲಿ, ದೇವರಿಗೆ ಕಾಣಿಕೆಯನ್ನು ಕೊಟ್ಟರೆ ಅದು ತ್ಯಾಗದ ಕಾಣಿಕೆ ಎಂದು ಕರೆಯಲಾಗುತ್ತದೆ. ಒಬ್ಬ ಯುವಕ ಮಿಷನರಿಯಾಗಿ ಹೋದರೆ, ಸಭೆಯ ಜನರು "ಅವನು ತನ್ನ ಜೀವನವನ್ನೇ ದೇವರಿಗೆ ಸಮರ್ಪಿಸಿಬಿಟ್ಟನು" ಎಂದು ಹೇಳುತ್ತಾರೆ. ಒಬ್ಬನು ಬಡವರಿಗೆ ಹೆಚ್ಚು ಸಹಾಯ ಮಾಡಿದರೆ, ತ್ಯಾಗವಾಗಿ ಸಹಾಯ ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ. ಇಂತಹ ತ್ಯಾಗಗಳ ಬಗ್ಗೆ ಮಿಷನರಿ ಡೇವಿಡ್ ಲಿವಿಂಗ್‌ಸ್ಟನ್ ರವರು ಹೇಳಿದ ಅನಿಸಿಕೆಯ ಬಗ್ಗೆ ಇಂದು ಧ್ಯಾನಿಸೋಣ.

 

ಹಲವು ವರ್ಷಗಳಿಂದ ಆಫ್ರಿಕಾದಲ್ಲಿ ತ್ಯಾಗವಾಗಿ ಸೇವೆ ಸಲ್ಲಿಸಿದ ಡೇವಿಡ್ ಲಿವಿಂಗ್ಸ್ಟನ್ ರವರ ವಯಸ್ಸಾದ ಕಾಲದಲ್ಲಿ ಅವರನ್ನು ಭೇಟಿ ಮಾಡಲು ಇಂಗ್ಲೆಂಡ್‌ನಿಂದ ಸ್ಟಾನ್ಲಿ ಎಂಬ ಪತ್ರಕರ್ತರು ಬಂದರು. ಅವರು ಅನೇಕ ವಿಷಯಗಳ ಬಗ್ಗೆ ಮಾತನಾಡುತ್ತಿರುವಾಗ, ಇಂಗ್ಲೆಂಡಿನ ಜನರು ಲಿವಿಂಗ್‌ಸ್ಟನ್‌ನ ಸೇವೆಯ ಬಗ್ಗೆ ತುಂಬಾ ತುಂಬಾ ಉನ್ನತವಾಗಿ ಹೇಳುತ್ತಿದ್ದಾರೆ ಎಂದರು. ನಂತರ ತಾನು ಈಗ ಹೊರಡಲಿರುವ ಹಡಗಿನಲ್ಲಿ ಲಿವಿಂಗ್‌ಸ್ಟನ್‌ನನ್ನು ತನ್ನೊಂದಿಗೆ ಇಂಗ್ಲೆಂಡಿಗೆ ಬರುವಂತೆ ಆಹ್ವಾನಿಸಿದರು. ಈ ಅವಕಾಶವನ್ನು ಕಳೆದುಕೊಂಡರೆ ಲಿವಿಂಗ್‌ಸ್ಟನ್ ಇನ್ನು ಮುಂದೆ ಇಂಗ್ಲೆಂಡ್‌ಗೆ ಬರುವುದು ತುಂಬಾ ಕಷ್ಟ ಎಂದು ಹೇಳಿದರು. ಆದರೆ ಲಿವಿಂಗ್ಸ್ಟನ್ ಅದನ್ನು ನಿರಾಕರಿಸಿ ಆಫ್ರಿಕಾದಲ್ಲೇ ಉಳಿದರು. ಸ್ಟಾನ್ಲಿ ನಿರ್ಗಮಿಸಿದ ಮರುದಿನ ಲಿವಿಂಗ್‌ಸ್ಟನ್ ತನ್ನ ದಿನಚರಿಯಲ್ಲಿ ಇದೇ ರೀತಿಯ ಟಿಪ್ಪಣಿಯನ್ನು ಬರೆದಿದ್ದಾರೆ. "ನಾನು ಆಫ್ರಿಕಾದಲ್ಲಿ ಮಿಷನರಿಯಾಗಿ ನನ್ನ ಜೀವನದ ಬಹುಭಾಗವನ್ನು ಮಹಾತ್ಯಾಗವಾಗಿ ಕಳೆದಿದ್ದೇನೆ ಎಂದು ಜನರು ಮಾತನಾಡುತ್ತಾರೆ, ನಾವು ದೇವರಿಗೆ ಸಲ್ಲಿಸಬೇಕಾದ ಋಣದಲ್ಲಿ ಸ್ವಲ್ಪ ಭಾಗವನ್ನು ಮರುಪಾವತಿಸುವುದು ತ್ಯಾಗವೇ? ಮನಸ್ಸಿಗೆ ತೃಪ್ತಿ ನೀಡುವ ಕೆಲಸವನ್ನು ಮಾಡುವುದು ತ್ಯಾಗವೇ? ನಿತ್ಯತ್ವದಲ್ಲಿ ಬಹು ಫಲವನ್ನು ನೀಡುವ ಕಾರ್ಯವನ್ನು ಮಾಡುವುದು ತ್ಯಾಗವೇ? ಇಲ್ಲ, ಇಲ್ಲ, ಇಲ್ಲವೇ ಇಲ್ಲ! ತ್ಯಾಗ ಎಂಬ ಮಾತನ್ನು ದೂರ ಎಸೆಯೋಣ. ಅದನ್ನು ಅವಕಾಶ ಅಥವಾ ಭಾಗ್ಯ ಎಂದೇ ಕರೆಯೋಣ. ಮಹಿಮಾನ್ವಿತ ತಂದೆಯ ಬಲಪಾರ್ಶ್ವದಲ್ಲಿ ಕೂತುಕೊಳ್ಳುವುದನ್ನು ತ್ಯಜಿಸಿ ನಮಗಾಗಿ ಭೂಮಿಗೆ ಬಂದ ಯೇಸುಕ್ರಿಸ್ತನ ತ್ಯಾಗದ ಮುಂದೆ ನಮ್ಮ ತ್ಯಾಗ ಏನೂ ಅಲ್ಲ. ನಾನು ಯಾವ ತ್ಯಾಗವನ್ನೂ ಮಾಡಿಲ್ಲ,'' ಎಂದು ಬರೆದಿಟ್ಟರು.

 

ಪ್ರಿಯರೇ! ನಾವು ಕರ್ತನಿಗಾಗಿ ಮಾಡುವ ಕೆಲಸಗಳನ್ನು ನಾವು ಹೇಗೆ ನೋಡುತ್ತಿದ್ದೇವೆ? ಕಾಣಿಕೆ ಕೊಡುವುದು, ಸೇವೆ ಮಾಡುವುದು ಇವುಗಳ ಬಗ್ಗೆ ನಾವು ಯಾವ ರೀತಿಯ ಚಿಂತನೆಯನ್ನು ಹೊಂದಿದ್ದೇವೆ? ನಾವು ಅವುಗಳನ್ನು ದೇವರು ನಮಗೆ ನೀಡಿದ ಭಾಗ್ಯವೆಂದು ಭಾವಿಸುತ್ತಿದ್ದೇವಾ ಅಥವಾ ಇಡೀ ಜಗತ್ತಿಗೆ ಏನೋ ಒಂದನ್ನು ಮಾಡಿಬಿಟ್ಟಂತೆ ಹುಡುಗಾಟವಾಗಿ ನೆನೆಸುತ್ತಿದ್ದೇವಾ? ಡೇವಿಡ್ ಲಿವಿಂಗ್ಸ್ಟನ್ ಅವರ ಈ ಉನ್ನತವಾದ ಕ್ರೈಸ್ತ ಚಿಂತನೆಯು ನಿಮ್ಮ ಆಂತರಿಕ ಆಲೋಚನೆಗಳನ್ನು ಉನ್ನತೀಕರಿಸಲಿ.

- J. ಸಂತೋಷ್

 

ಪ್ರಾರ್ಥನಾ ಅಂಶ:

ಗ್ರಾಮ ಸೇವೆಯಲ್ಲಿ ಸುವಾರ್ತೆಗೆ ವಿರೋಧವನ್ನು ವ್ಯಕ್ತಪಡಿಸಿದ ಜನರು ಯೇಸುವಿನ ಪ್ರೀತಿಯನ್ನು ರುಚಿ ನೋಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet grandpashabet jojobet casinoroyal jojobet holiganbet ibizabet holiganbet amkbet sonbahis betgit cratosroyalbet cratosroyalbet tlcasino perabet perabet giriş meritking meritking giriş meritking meritking giriş matbet matbet giriş superbetin superbetin giriş