Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 27.01.2024
Share:

By Village Missionary Movement

Saturday, 27-Jan-2024

ಧೈನಂದಿನ ಧ್ಯಾನ(Kannada) – 27.01.2024

 

ಬೆಂಕಿ ಹೊತ್ತಿಸುವ ಪವಿತ್ರಾತ್ಮನು 

 

"…ತನ್ನ ಸೇವಕರನ್ನು ಅಗ್ನಿಜ್ವಾಲೆಯನ್ನಾಗಿಯೂ ಮಾಡುತ್ತಾನೆ ..." - ಇಬ್ರಿಯ 1:7

 

ಹಲವು ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಕಾರ್ಖಾನೆಯೊಂದನ್ನು ಒಬ್ಬರು ತೆಗೆದುಕೊಂಡು ಸಂಪೂರ್ಣವಾಗಿ ಹೊಸ ಜನರನ್ನು ಕೆಲಸಕ್ಕೆ ನೇಮಿಸಿಕೊಂಡರು. ಅವರು ಅಲ್ಲಿರುವ ಯಂತ್ರಗಳನ್ನು ಚಲಾಯಿಸಲು ಪ್ರಯತ್ನಿಸಿದರು. ಯಾವುದೂ ಓಡಲಿಲ್ಲ. ಅವರು ಚಕ್ರಗಳನ್ನು ಬಿಚ್ಚಿ ನೋಡಿದರು. ರೋಲರುಗಳಿಗೆ ಎಣ್ಣೆ ಹಾಕಿ ನೋಡಿದರು. ಆದರೆ ಯಾವುದೂ ಚಲಿಸಲಿಲ್ಲ. ಕೊನೆಗೆ ಕೆಲವು ಕಾರ್ಮಿಕರು ಬಾಯ್ಲರ್ ಕೊಠಡಿಗೆ ಹೋಗಿ ತೆರೆದು ನೋಡಿದಾಗ, ಅಲ್ಲಿ ಬೆಂಕಿ ಇಲ್ಲದಿರುವುದು ಕಂಡು ಬಂತು. ಕೂಡಲೇ ಒಲೆಯ ಮುಚ್ಚಳ ತೆರೆದು ಕಟ್ಟಿಗೆ, ಇದ್ದಿಲು ಹಾಕಿ ಬೆಂಕಿ ಹಚ್ಚಿದರು. ಶೀಘ್ರದಲ್ಲೇ ಪಿಸ್ಟನ್‌ಗಳು ಮತ್ತು ಸಿಲಿಂಡರ್‌ಗಳ ಮೂಲಕ ಉಗಿ ಹರಿಯಿತು ಮತ್ತು ಒಂದು, ಎರಡು ಗಂಟೆಗಳ ಒಳಗೆ ಕಾರ್ಖಾನೆಯು ಕಾರ್ಯನಿರ್ವಹಿಸಲು ಪ್ರಾರಂಭಿಸಿತು.

 

ಅಂದು 120 ಜನರು ಮೇಲಂತಸ್ತಿನ ಕೋಣೆಯಲ್ಲಿ ಒಟ್ಟುಗೂಡಿದರು, ಆಗ ಬಿರುಗಾಳಿ ಬೀಸಿ ಉರಿಯಂತಿದ್ದ ನಾಲಿಗೆಗಳು ವಿಂಗಡಿಸಿಕೊಳ್ಳುವ ಹಾಗೆ ಪವಿತ್ರಾತ್ಮನು ಇಳಿದು ಅವರನ್ನು ತುಂಬಿಸಿದರು. ಪವಿತ್ರಾತ್ಮನಿಂದ ತುಂಬಿಸಲ್ಪಟ್ಟ ಅವರು ಯೇಸುಕ್ರಿಸ್ತನಿಗೆ ಸಾಕ್ಷಿಗಳಾಗಿ ಎದ್ದೇಳಿದರು. ಅವರನ್ನು ತಿರಸ್ಕರಿಸಿದ ಪೇತ್ರನು ಸಹ ಪವಿತ್ರಾತ್ಮದಿಂದ ತುಂಬಿಸಲ್ಪಟ್ಟ ನಂತರ ಧೈರ್ಯದಿಂದ ಬೋಧಿಸಿದರು. ಅವರ ಧೈರ್ಯಕ್ಕೆ ಜನ ಬೆರಗಾದರು. ಪ್ರಸಂಗವನ್ನು ಕೇಳಿ ಮೂರು ಸಾವಿರ ಜನರು, ಐದು ಸಾವಿರ ಜನರು ಹೀಗೆ ಗುಂಪುಗುಂಪಾಗಿ ದೇವರನ್ನು ಸ್ವೀಕರಿಸಿದರು. ಇದು ಹೇಗಾಯಿತು? ಇದು ದೇವರಾತ್ಮನಿಂದಲೇ ಆಯಿತು. ಹೌದು, ಅವರೊಳಗೆ ಆತ್ಮನ ಅಭಿಷೇಕವು ಹೊತ್ತಿ ಉರಿಯುತ್ತಿತ್ತು.

 

ಆದರೆ ಇಂದು ಅನೇಕ ಸಭೆಗಳಲ್ಲಿ ಬೆಂಕಿಯು ಆರಿಹೋಗಿದೆ. ಇದಕ್ಕಿಂತ ದುಃಖ ಮತ್ತು ಕರುಣಾಜನಕ ಬೇರೊಂದಿಲ್ಲ. ಆದ್ದರಿಂದಲೇ ಯಾವ ಚಲನೆಯನ್ನೂ ಪ್ರಗತಿಯನ್ನೂ ಕಾಣಲು ಸಾಧ್ಯವಾಗುತ್ತಿಲ್ಲ. ಅನೇಕ ಸಭೆಗಳು ಉತ್ತಮ ಗಾಯಕರು, ಅದ್ಭುತ ಸಂಗೀತಗಾರರು ಮತ್ತು ಪ್ರತಿಭಾವಂತ ಬೋಧಕರನ್ನು ಹೊಂದಿವೆ, ಆದರೂ ಏಕೆ ಉಜ್ಜೀವನವಿಲ್ಲ? ಬೆಂಕಿ ಇಲ್ಲ. ಪವಿತ್ರಾತ್ಮದ ಬೆಂಕಿಯು ಅಸ್ತಿತ್ವದಲ್ಲಿದ್ದರೆ, ಖಂಡಿತವಾಗಿಯೂ ಉಜ್ಜೀವನ ಮತ್ತು ಪುನರುಜ್ಜೀವನ ಬಂದುಬಿಡುತ್ತದೆ. ದೊಡ್ಡ ಆಧ್ಯಾತ್ಮಿಕ ಸುಗ್ಗಿಯನ್ನು ಕಾಣಬಹುದು.

 

ಅಭಿಷೇಕ ಹೊಂದಿದವರೇ, ಎದ್ದೇಳಿ! ನಿಮ್ಮ ಬೆಂಕಿ ಇತರರನ್ನು ಜೀವಂತಗೊಳಿಸಲಿ. ನಾವು ಸಭೆಯಾಗಿ ಸೇರಿ ಒಡಕಿನಲ್ಲಿ ನಿಲ್ಲೋಣ. ಹೊಸ ಆತ್ಮಗಳನ್ನು ಪ್ರತಿದಿನವೂ ಸಭೆಯಲ್ಲಿ ಸೇರಿಸೋಣ. ದೇವರ ಬರುವಿಕೆಗೆ ಸಿದ್ಧರಾಗೋಣ. ಮಾರನಾಥ!

- T. ಸಮುವೇಲ್

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್‌ನಲ್ಲಿ ನಡೆಯುವ ಸ್ವಸ್ಥತಾ ಆರಾಧನೆಯಲ್ಲಿ ಭಾಗವಹಿಸುವ ವ್ಯಕ್ತಿಗಳು ಸಂಪೂರ್ಣವಾಗಿ ಗುಣ ಹೊಂದಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al