Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 26.01.2024
Share:

By Village Missionary Movement

Friday, 26-Jan-2024

ಧೈನಂದಿನ ಧ್ಯಾನ(Kannada) – 26.01.2024

 

ಎಚ್ಚರಿಕೆಯನ್ನು ನಿರ್ಲಕ್ಷಿಸಿದಾಗ…

 

"...ನಿಂತಿದ್ದೇನೆಂದು ನೆನಸುವವನು ಬೀಳದಂತೆ ಎಚ್ಚರಿಕೆಯಾಗಿರಲಿ" - 1 ಕೊರಿಂಥ. 10:12

 

ಹಡಗಿನಲ್ಲಿ ಇದ್ದಕ್ಕಿದ್ದಂತೆ ಭಯಾನಕ ಸ್ಫೋಟದ ಸದ್ದು ಕೇಳಿಸಿತು. ಎಂಜಿನಿಯರ್‌ಗಳು ಮತ್ತು ಸಿಬ್ಬಂದಿ ತಮ್ಮ ಕೆಲಸದಲ್ಲಿ ತೊಡಗಿದ್ದಾಗ ಕೋಣೆಯೊಳಗೆ ನೀರು ನುಗ್ಗಿದ್ದರಿಂದ ಹಡಗಿನ ಎಂಜಿನ್ ಬಾಯ್ಲರ್ ಸ್ಫೋಟಗೊಂಡಿದ್ದೇ ಇದಕ್ಕೆ ಕಾರಣ. ಅಯ್ಯೋ ಇದು ಸಾವಿನ ಸೂಚನೆಯೇ ಎಂದು ಇಂಜಿನಿಯರ್ ಗಳು ಬೆಚ್ಚಿಬಿದ್ದರು. ಬೃಹತ್ ಟೈಟಾನಿಕ್ ಎಂಬ ಹಡಗು ಎರಡಾಗಿ ಮುರಿದು ನಿಧಾನವಾಗಿ ಗಾಢವಾದ ಸಮುದ್ರದ ನೀರಿನಲ್ಲಿ ಮುಳುಗಿತು. ಸಮುದ್ರಯಾನದ ಇತಿಹಾಸದಲ್ಲಿ ಇದು ಅತ್ಯಂತ ದೊಡ್ಡ ದುರಂತಗಳಲ್ಲಿ ಒಂದಾಗಿದೆ.

 

ಆ ಕರಾಳ ರಾತ್ರಿಯಲ್ಲಿ, ಮಂಜುಗಡ್ಡೆಯಿಂದ ಆವೃತವಾದ ಸಮುದ್ರದ ನೀರಿನಲ್ಲಿ ಸಾವಿನೊಂದಿಗೆ ಹೋರಾಡುತ್ತಿದ್ದ ನೂರಾರು ಜನರ ಕೂಗನ್ನು ನಾವು ಇಂದು ಯೋಚಿಸಿದರೆ, ಅದು ನಮ್ಮನ್ನು ಒಂದು ನಿಮಿಷ ಸ್ತಬ್ಧವಾಗುವಂತೆ ಮಾಡಿಬಿಡುತ್ತದೆ. ಅತ್ಯಂತ ಗಟ್ಟಿಮುಟ್ಟಾಗಿ, ಉತ್ತಮವಾಗಿ ನಿರ್ಮಿಸಲಾದ ಮತ್ತು ಮುಳುಗಲಾರದ ಹಡಗು ಎಂದು ಘೋಷಿಸಲ್ಪಟ್ಟ ಟೈಟಾನಿಕ್ ತನ್ನ ಮೊದಲ ಪ್ರಯಾಣದಲ್ಲೇ ಮುಳುಗಿ ಹೋಯಿತು! ಇದಕ್ಕೆ ಕಾರಣವೇನು ಎಂದು ತನಿಖೆ ನಡೆಸಿದಾಗ ಅವರಿಗೆ ಒಂದು ವಿಷಯ ಸ್ಪಷ್ಟವಾಗಿ ಅರ್ಥವಾಯಿತು. ಅಂದರೆ, ಟೈಟಾನಿಕ್‌ಗಿಂತ ಮುಂದೆ ಸಾಗುತ್ತಿದ್ದ ಕ್ಯಾಲಿಫೋರ್ನಿಯನ್ ಹಡಗು ಸಮೀಪದಲ್ಲಿ ಮಂಜುಗಡ್ಡೆಯ ದೃಶ್ಯಗಳನ್ನು ವರದಿ ನೀಡಿತು. ಮುಂದೆ ಹವಾಮಾನ ಮಾಪಕವು ಕಡಿಮೆ ತಾಪಮಾನದ ಬಗ್ಗೆ ಎಚ್ಚರಿಕೆ ನೀಡಿತು. ಆದರೆ ಎಚ್ಚರಿಕೆಯನ್ನು ನಿರ್ಲಕ್ಷಿಸಿತು. ಮುಳುಗಲಾರದ ಬೃಹತ್ ಹಡಗು ಎಂದು ಘೋಷಿಸಲ್ಪಟ್ಟ ಟೈಟಾನಿಕ್ ಅಪಾಯದ ವಲಯದಲ್ಲಿ, ಮಧ್ಯರಾತ್ರಿಯಲ್ಲಿ ಪೂರ್ಣ ವೇಗದಲ್ಲಿ ಓಡಿಸಲಾಯಿತು. ಎಷ್ಟು ಶೋಚನೀಯ!

 

ನಮ್ಮ ಆಂತರಿಕ ಮತ್ತು ಬಾಹ್ಯ ಪಾಪದ ಪರಿಣಾಮಗಳ ಬಗ್ಗೆ ದೇವರು ನಮಗೆ ಒಮ್ಮೆಯಲ್ಲ! ಎರಡು ಬಾರಿ ಅಲ್ಲ! ಅನೇಕ ಬಾರಿ ಎಚ್ಚರಿಸುತ್ತಾರೆ. ಆದರೆ ನಮಗೆ ಬಹು ಮನೋಧೈರ್ಯ, ನಿರ್ಲಕ್ಷ್ಯ ! ನಾವು ದೇವರ ಬಳಿಯಿಂದ ಬರುವ ಎಚ್ಚರಿಕೆಗಳನ್ನು ನಿರ್ಲಕ್ಷಿಸುತ್ತಲೇ ಇರುತ್ತೇವೆ. "ನನ್ನ ಜೀವನದ ಮಾರ್ಗವೆಲ್ಲಾ ಸರಿಯೇ, ಈ ಪಾಪಗಳೆಲ್ಲಾ ನನ್ನಲ್ಲಿಲ್ಲ. ಈ ಸಂದೇಶವು ನನಗೆ ಅಲ್ಲ" ಎಂದು ನಾವು ಭಾವಿಸುತ್ತೇವೆ. "ನಾನು ವಂಶಪಾರಂಪರ್ಯ ಕ್ರೈಸ್ತನು, ಎರಡನೆಯ ಬರುವಿಕೆಯಲ್ಲಿ ಕೈಬಿಡಲ್ಪಡುತ್ತೇನೋ? ಅದು ಎಂದಿಗೂ ಸಂಭವಿಸುವುದಿಲ್ಲ" ಎಂದು ನಾವು ನಮ್ಮ ಬಗ್ಗೆ ಮಿತಿ ಮೀರಿ ಯೋಚಿಸುತ್ತೇವೆ.

 

ಪ್ರಿಯರೇ! ಮರಣ ಮತ್ತು ನ್ಯಾಯತೀರ್ಪು ನಮ್ಮ ಮುಂದೆ ಕಾಯುತ್ತಿದ್ದರೂ, ನಾವು ಪೂರ್ಣ ವೇಗವಾಗಿ ನಮ್ಮನ್ನು ಹುಡುಕಿ ಬರುವ ಎಚ್ಚರಿಕೆಗಳನ್ನು ನಿರ್ಲಕ್ಷಿಸಿ ಬಿಟ್ಟು ಧೈರ್ಯವಾಗಿ ಮುಂದೆ ಸಾಗುತ್ತೇವೆ. ಒಂದು ವಿಷಯವನ್ನು ನೆನಪಿಸಿಕೊಳ್ಳೋಣ. ಮರಣವು ಪಕ್ಷಪಾತವಿಲ್ಲದ್ದು. ಆದ್ದರಿಂದ ನಮ್ಮ ಸ್ವಂತ ಶಕ್ತಿಯನ್ನು ಅವಲಂಬಿಸದೆ ದೇವರ ಕೃಪೆಯ ಮೇಲೆ ಅವಲಂಬಿತರಾಗೋಣ. ನಮ್ಮನ್ನು ತಗ್ಗಿಸಿಕೊಂಡು, ದೇವರ ಮಾರ್ಗದರ್ಶನಕ್ಕೆ ಕಿವಿಗೊಡಲು ನಿರ್ಧರಿಸೋಣ. ದುರಹಂಕಾರದಿಂದ ವರ್ತಿಸಿ ವಿನಾಶವನ್ನು ಸಂಧಿಸದಂತೆ ಎಚ್ಚರಿಕೆ ವಹಿಸೋಣ.

- Mrs. ಜೆಬಾ ಡೇವಿಡ್ ಗಣೇಶನ್ 

 

ಪ್ರಾರ್ಥನಾ ಅಂಶ:

ಈ ಹೊಸ ವರ್ಷದಲ್ಲಿ ಎಲ್ಲಾ 38 ಜಿಲ್ಲೆಗಳಲ್ಲಿ ಯೌವನಸ್ಥರ ಕೂಟಗಳು ನಡೆಯುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al