Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 25.01.2024
Share:

By Village Missionary Movement

Thursday, 25-Jan-2024

ಧೈನಂದಿನ ಧ್ಯಾನ(Kannada) – 25.01.2024

 

ಕ್ರಯಧನವು ವ್ಯರ್ಥವಲ್ಲ

 

"…ಆ ತೈಲದ ಪರಿಮಳವು ಮನೆಯಲ್ಲೆಲ್ಲಾ ತುಂಬಿಕೊಂಡಿತು" - ಯೋಹಾನ 12:3

 

ಪಂಜಾಬ್‌ನಲ್ಲಿ ಒಂದು ಮತ ವೈರಾಗ್ಯವುಳ್ಳ ಸಿಖ್ ಕುಟುಂಬದಲ್ಲಿ ಜನಿಸಿದವರು ಭಕ್ತಸಿಂಗ್. ಅವರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕೆನಡಾಕ್ಕೆ ಹೋಗಿ ಇಂಜಿನಿಯರಿಂಗ್ ಪದವಿ ಪಡೆದರು. ಅಲ್ಲಿ ಅವರು ಕರ್ತನಾದ ಯೇಸುಕ್ರಿಸ್ತನನ್ನು ತಮ್ಮ ದೇವರಾಗಿ ಅಂಗೀಕರಿಸಿದರು. ಹಡಗಿನಲ್ಲಿ ಭಾರತಕ್ಕೆ ಹಿಂತಿರುಗಿದ ಅವರು ದೇವರ ಸೇವೆ ಮಾಡಲು ನಿರ್ಧರಿಸಿ ಅವರ ಭವಿಷ್ಯದ ಪುರಾವೆಯಾಗಿದ್ದ ಎಂಜಿನಿಯರಿಂಗ್ ಪ್ರಮಾಣಪತ್ರವನ್ನು ಹರಿದು ಸಮುದ್ರಕ್ಕೆ ಎಸೆದು, ತಾನು ಮತ್ತು ತನ್ನಲ್ಲಿದ್ದ ಎಲ್ಲವೂ ದೇವರಿಗೆ ಸ್ವಂತ ಎಂದು ಕೊಟ್ಟುಬಿಟ್ಟರು. ನಂತರ ವಿಶ್ವದಾದ್ಯಂತ 10,000 ಸಭೆಗಳನ್ನು ಸ್ಥಾಪಿಸಲು ದೇವರು ಅವರನ್ನು ಉಪಯೋಗಿಸಿದರು. ಅವರ ಪವಿತ್ರ ಜೀವನ ಮತ್ತು ಸೇವೆ ಇಂದು ಕ್ರೈಸ್ತರಿಗೆ ಒಂದು ಸವಾಲಾಗಿದೆ. ಅವರು ಬರೆದಿರುವ ಪುಸ್ತಕಗಳು ಇಂದಿಗೂ ಸೇವಕರನ್ನು ಮತ್ತು ವಿಶ್ವಾಸಿಗಳನ್ನು ಉತ್ಸಾಹಗೊಳ್ಳುವಂತೆ ಮಾಡುತ್ತಿದೆ. ಹೌದು, ಆತನ ಸಮರ್ಪಣೆ ಮತ್ತು ತ್ಯಾಗ ದೇವರ ದೃಷ್ಟಿಯಲ್ಲಿ ಅಮೂಲ್ಯವೆಂದೆಣಿಸಲ್ಪಟ್ಟಿತು. ಆದ್ದರಿಂದ ದೇವರು ಅವರನ್ನು ಇಡೀ ಲೋಕಕ್ಕೆ ಬೆಳಕಾಗಿ ಉಪಯೋಗಿಸಿದರು.

 

ಸತ್ಯವೇದದಲ್ಲಿ, ಯೇಸು ಸೀಮೋನನ ಮನೆಯಲ್ಲಿ ಊಟ ಮಾಡುತ್ತಿದ್ದಾಗ, ಮರಿಯಳೆಂಬ ಸ್ತ್ರೀಯು, ತಾನು ಇಲ್ಲಿಯವರೆಗೆ ಪಾಡುಪಟ್ಟು ಸಂಪಾದಿಸಿ ಇಟ್ಟಿದ್ದ ಬೆಲೆಬಾಳುವ ಅಚ್ಚಜಟಾಮಾಂಸಿ ತೈಲವನ್ನು ತಂದು ತೆರೆದು ಯೇಸುವಿನ ತಲೆಯ ಮೇಲೆ ಸುರಿದಳು. ಇದನ್ನು ನೋಡಿದ ಇತರರು ಆಕೆಯನ್ನು ಬೈದರು. ಇದು ವ್ಯರ್ಥವಾದ ಖರ್ಚು ಎಂದರು. ಆದರೆ ಇತರರು ಹೇಳುವುದರ ಬಗ್ಗೆ ಆಕೆ ಚಿಂತಿಸಲಿಲ್ಲ. ಬದಲಾಗಿ, ದೇವರು ಏನು ಹೇಳುತ್ತಾರೆಂಬುದೇ ಅವಳ ಯೋಚನೆಯಾಗಿತ್ತು. ಮರಿಯಳ ಬಗ್ಗೆ ಕರ್ತನು ಏನು ಹೇಳಿದರೆಂದು ಗಮನಿಸಿ. * ಇವಳು ನನಗೆ ಒಳ್ಳೆಯ ಕೆಲಸ ಮಾಡಿದ್ದಾಳೆ. (ದೇವರಿಗೆ ಕೊಡುವುದು ವ್ಯರ್ಥವಲ್ಲ, ಆಶೀರ್ವಾದ) * ಇವಳು ತನ್ನ ಕೈಲಾದಷ್ಟು ಮಾಡಿದಳು. (ಅಸಾಧ್ಯವಾದುದನ್ನು ಮಾಡಲು ಅವರು ನಿರೀಕ್ಷಿಸುವುದಿಲ್ಲ. ಮಾಡುವುದನ್ನು ಮನಃಪೂರ್ವಕವಾಗಿ ಮಾಡಬೇಕು) * ಅವಳು ನನ್ನ ದೇಹಕ್ಕೆ ತೈಲವನ್ನು ಹಚ್ಚಲು ಮುಂದಾದಳು. (ನಮಗೆ ಸಿಗುವ ಅವಕಾಶಗಳನ್ನು ಬಳಸಿಕೊಳ್ಳಬೇಕು) ದೇವರು ಕೊಟ್ಟ ಪುರಾವೆಗಳನ್ನು ನೋಡುದ್ರಾ!

 

ಪ್ರಿಯರೇ! ನಿಮಗೆ ಮರಿಯಳು ಪಡೆದುಕೊಂಡ ಆಶೀರ್ವಾದ ಬೇಡವೇ? ನಿಮ್ಮಲ್ಲಿರುವದನ್ನು ದೇವರಿಗೆ ಮತ್ತು ಅವರ ಕೆಲಸಕ್ಕೆ ಕೊಟ್ಟು ಆಶೀರ್ವಾದವನ್ನು ಪಡೆದುಕೊಂಡಿದ್ದೀರಾ? ಇಲ್ಲದಿದ್ದರೆ, ಇಂದೇ ಅದನ್ನು ಮಾಡಲು ನಿರ್ಧರಿಸಿ. ನೀವು ದೇವರಿಗಾಗಿ ಅರ್ಪಿಸುವಾಗ ನಿಮ್ಮ ಮನೆಯು ಆಶೀರ್ವಾದಗಳಿಂದ ತುಂಬುತ್ತದೆ. ಕೊಡುವಂಥದ್ದು ನೀವು ಇಷ್ಟಪಡುವ ವಸ್ತುವಾಗಿಯೋ, ಸಮಯವಾಗಿಯೋ ಇರಬಹುದು ಅಥವಾ ಪ್ರತಿಭೆಯಾಗಿರಬಹುದು. ಅದನ್ನು ಮನಃಪೂರ್ವಕವಾಗಿ ದೇವರಿಗೆ ಕೊಟ್ಟು ನೋಡಿರಿ. ಮೇಲ್ಕಂಡ ದೇವಮನುಷ್ಯನು ತನ್ನನ್ನು ಮತ್ತು ತನ್ನಲ್ಲಿರುವ ಎಲ್ಲವನ್ನೂ ದೇವರಿಗೆ ಕೊಟ್ಟುಬಿಟ್ಟರು. ಸುತ್ತಮುತ್ತಲಿನ ಜನರು ನಿನ್ನ ಜೀವನವನ್ನು ವ್ಯರ್ಥ ಮಾಡಿಬಿಟ್ಟೆ ಎಂದು ಹೇಳಿರಬಹುದು. ಆದರೆ ದೇವರು ಅವರನ್ನು ಲೋಕಕ್ಕೆ ಸುಗಂಧ ಹರಡುವವರಾಗಿ ಮಾಡಿದರು. ಹೌದು, ಕ್ರಯಧನವು ವ್ಯರ್ಥವಲ್ಲ; ಗೆಲುವೇ!

- Bro. ಡೇವಿಡ್ ತವಮಣಿ

 

ಪ್ರಾರ್ಥನಾ ಅಂಶ:

ಮೋಕ್ಷ ಪ್ರಯಾಣ ಪತ್ರಿಕೆ ಸೇರಿದಂತೆ ನಮ್ಮ ಎಲ್ಲಾ ಪತ್ರಿಕಾ ಸೇವೆಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin