Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 22.01.2024
Share:

By Village Missionary Movement

Monday, 22-Jan-2024

ಧೈನಂದಿನ ಧ್ಯಾನ(Kannada) – 22.01.2024

 

ಅಳುತ್ತಾ ಬಿತ್ತಿರಿ

 

"ಅಳುತ್ತಾ ಬಿತ್ತುವವರು ಹಾಡುತ್ತಾ ಕೊಯ್ಯುವರು" - ಕೀರ್ತನೆ 126:5

 

ಒಬ್ಬ ವ್ಯಕ್ತಿ ಚೈನೀಸ್ ಬಿದಿರು ಎಂಬ ಬಿದಿರನ್ನು ಬೆಳೆಸಿದರು. ನೆಟ್ಟಾಗಿನಿಂದಲೇ ಅದಕ್ಕೆ ನೀರು ಹಾಕಿ ಆರೈಕೆ ಮಾಡುತ್ತಿದ್ದರು. ಎಷ್ಟೇ ನೀರು ಹಾಕಿದರೂ ಬಿದಿರು ಚಿಗುರಿದ ಪಾಡಿಲ್ಲ. ದಿನಗಳು ಕಳೆದವು, ತಿಂಗಳುಗಳು ಕಳೆದವು; ಅಷ್ಟೇ ಏಕೆ ವರ್ಷಗಳೇ ಉರುಳಿದವು? ಅವರ ಜಮೀನಿನ ಸುತ್ತ ಇತರೆ ಬೆಳೆಗಳನ್ನು ಬೆಳೆದವರು ಅದರ ಫಲವನ್ನು ಅನುಭವಿಸುತ್ತಿದ್ದರು. ಸುತ್ತಮುತ್ತಲಿನವರಿಂದ ಗೇಲಿ ಮತ್ತು ಪರಿಹಾಸ್ಯಕ್ಕೆ ಒಳಗಾದರು. ನಾಲ್ಕು ವರ್ಷಗಳ ಕಾಯುವಿಕೆಯ ನಂತರ, ಅವರ ಭೂಮಿಯಲ್ಲಿ ಬಿದಿರುಗಳು ಮೊಳಕೆಯೊಡೆದವು. ಅದರ ವೇಗ ದಿನದಿಂದ ದಿನಕ್ಕೆ ಹೆಚ್ಚಾಯಿತು. ಇದು ಸುಮಾರು ಆರು ವಾರಗಳಲ್ಲಿ 90 ಅಡಿಗಳಷ್ಟು ಬ್ರಹ್ಮಾಂಡವಾಗಿ ಬೆಳೆಯಿತು. ಇದು ನೋಡುಗರನ್ನು ಬೆಚ್ಚಿ ಬೀಳುವಂತೆ ಮಾಡಿತು. "ಅಳುತ್ತಾ ಬಿತ್ತುವವರು

ಹಾಡುತ್ತಾ ಕೊಯ್ಯುವರು" (ಕೀರ್ತನೆ 126: 6) ಎಂಬ ವಾಕ್ಯ ಎಷ್ಟು ಸತ್ಯವಾಗಿದೆ.

 

ಸತ್ಯವೇದದಲ್ಲಿ ಹನ್ನ ಎಂಬ ಮಹಿಳೆಯನ್ನು ನಾವು ನೋಡುತ್ತೇವೆ. ಹನ್ನ ಮಕ್ಕಳಿಲ್ಲದವಳು, ಮತ್ತು ಇದರಿಂದಾಗಿ ಅವಳ ಸವತಿ ಅವಳನ್ನು ಖಿನ್ನತೆಗೆ ಒಳಪಡಿಸುತ್ತಿದ್ದಳು. ಹನ್ನ ಆಲಯಕ್ಕೆ ಹೋಗಿ ತನ್ನ ಮನದೊಳಗಿನ ಚಿಂತೆಯನ್ನು ದೇವರ ಮುಂದೆ ಸುರಿಯುತ್ತಾಳೆ. ದೇವರು ಸಹ ಹನ್ನಳ ಪ್ರಾರ್ಥನೆಗೆ ಕಿವಿಗೊಟ್ಟು ಆಕೆಗೆ ಒಂದು ಗಂಡು ಮಗುವನ್ನು ಕೊಟ್ಟರು. ಹಲವು ವರ್ಷಗಳ ಕಣ್ಣೀರಿನ ಪ್ರಾರ್ಥನೆಯು ಅದ್ಭುತವನ್ನು ಹೊತ್ತು ತಂದಿತು. ಪರಿಣಾಮವಾಗಿ, ಅನೇಕ ರೀತಿಯ ಸೇವೆಯನ್ನು ಮಾಡುವ ಸಮುವೇಲನು ಜನಿಸಿದರು. ಆಕೆ ಇಸ್ರಾಯೇಲಿಗೆ ಒಂದು ದೇವರ ಪ್ರವಾದಿಯನ್ನು ಕೊಟ್ಟಳು. (1 ಸಮುವೇಲ 3:20) ಸಮುವೇಲನು ಸೌಲ ಮತ್ತು ದಾವೀದರನ್ನು ಇಸ್ರಾಯೇಲ್ಯರಲ್ಲಿ ರಾಜರಾಗಿ ಅಭಿಷೇಕಿಸಿದ ಪ್ರವಾದಿ. ಇಸ್ರಾಯೇಲ್ಯರಿಗೆ ನ್ಯಾಯತೀರಿಸುವ ನ್ಯಾಯಸ್ಥಾಪಕರೂ ಆಗಿದ್ದರು. ಹೀಗೆ ಅಭಿಷೇಕಿಸಲ್ಪಟ್ಟ ಒಬ್ಬ ಸಮುವೇಲನು ಹನ್ನಳ ಕಣ್ಣೀರಿನ ಪ್ರಾರ್ಥನೆಯಲ್ಲಿ ಸಿಕ್ಕಿದರು.

 

ನನಗೆ ಪ್ರಿಯವಾದವರೇ, ಚೀನೀ ಬಿದಿರು ಕಲಿಸಿಕೊಡುವುದು ಮತ್ತು ಹನ್ನಳ ಜೀವನದಲ್ಲಿ ನಾವು ಕಲಿತುಕೊಳ್ಳುವುದು ಎರಡೂ ಒಂದೇ. "ದೇವರ ಸಮ್ಮುಖದಲ್ಲಿ ಕಾದಿರು" ಎಂಬುದೇ. ನಿಂದೆ ಮತ್ತು ಅವಮಾನಗಳಲ್ಲಿ ಕಣ್ಣೀರಿನೊಂದಿಗೆ ನಿಮ್ಮ ವಿಜ್ಞಾಪನೆಗಳನ್ನು ಬಿತ್ತಿರಿ. ಅಂತರಂಗದಲ್ಲಿ ನಡೆಯುವದನ್ನು ನೋಡುವ ನಿನ್ನ ತಂದೆಯು ನಿನಗೆ ಫಲಕೊಡುವನು. ಈ ಹೊಸ ವರ್ಷದಲ್ಲಿ ನೀವು ಮಾಡಿದ ಎಲ್ಲಾ ಒಳ್ಳೆಯ ಕಾರ್ಯಗಳ ಪ್ರತಿಫಲವನ್ನು ಸಂಪೂರ್ಣವಾಗಿ ಪಡೆದುಕೊಳ್ಳುತ್ತೀರಿ. ದೇವರೇ ನಿಮ್ಮನ್ನು ಆಶೀರ್ವದಿಸಲಿ.

- Mrs. ದಿವ್ಯಾ ಅಲೆಕ್ಸ್

 

ಪ್ರಾರ್ಥನಾ ಅಂಶ:

ನಮ್ಮ ಉತ್ತರ ಭಾರತದ ಸೇವಾಕ್ಷೇತ್ರದ ಮಿಷನರಿಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş