Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 21.01.2024 (Kids Special)
Share:

By Village Missionary Movement

Sunday, 21-Jan-2024

ಧೈನಂದಿನ ಧ್ಯಾನ(Kannada) – 21.01.2024 (Kids Special)

 

POWER OF PRAYER 

 

"ನೀನು ಕೇಳಿಕೊಂಡರೆ ನಾನು ಅನ್ಯಜನಗಳನ್ನೆಲ್ಲಾ ನಿನಗೆ ಅಧೀನ ಮಾಡುವೆನು; ಭೂವಿುಯ ಕಟ್ಟಕಡೆಯವರೆಗೂ ಇರುವ ಎಲ್ಲಾ ದೇಶಗಳನ್ನೂ ನಿನಗೆ ಸ್ವಾಸ್ತ್ಯವಾಗಿ ಕೊಡುವೆನು" - ಕೀರ್ತನೆ 2:8

 

ಇಂಗ್ಲೆಂಡ್‌ ದೇಶದಲ್ಲಿ ಅಣ್ಣ ಮತ್ತು ತಂಗಿ ಇಬ್ಬರು ವಾಸಿಸುತ್ತಿದ್ದರು. ಅಣ್ಣ ಹಡ್ಸನ್, ತಂಗಿ ಅಮಾಲಿಯಾಗಿಂತ 4 ವರ್ಷ ದೊಡ್ಡವನು. ಅವರು ಚೆನ್ನಾಗಿ ಪ್ರಾರ್ಥಿಸುತ್ತಾ, ಬೈಬಲ್ ಓದುತ್ತಾ ಮತ್ತು ಸಂಡೇ ಸ್ಕೂಲ್ ಗೆ ಹಾಜರಾಗುತ್ತಾ ಹೀಗೆ ಭಕ್ತಿಯಾಗಿ ಜೀವಿಸುತ್ತಿದ್ದರು. ಹಡ್ಸನ್ ಬೆಳೆದು ಕಾಲೇಜು ಶಿಕ್ಷಣ ಮುಗಿಸಿದಾಗ ಅವನಿಗೆ ಬ್ಯಾಂಕಿನಲ್ಲಿ ಕೆಲಸ ಸಿಕ್ಕಿತು. ಬೇರೆ ಊರಿಗೆ ಹೋಗಿ ಅಲ್ಲೇ ಉಳಿದು ಕೆಲಸ ಮಾಡುತ್ತಿದ್ದನು. ಒಳ್ಳೆಯ ಕೆಲಸ, ಒಳ್ಳೆಯ ಸಂಬಳ, ಕೈಯಲ್ಲಿ ಯಾವಾಗಲೂ ಹಣ ಇರುತ್ತಿತ್ತು.

 

ನಮ್ಮ ಕೈಯಲ್ಲಿ ಹಣವಿದ್ದರೆ ತಕ್ಷಣ ನಮಗೆ ಇಷ್ಟಬಂದದ್ದು ತೆಗೆದುಕೊಳ್ಳುತ್ತೇವೆ ಹೌದಲ್ವಾ ಈ ಹಡ್ಸನ್ ಕೂಡ ಒಬ್ಬಂಟಿಯಾಗಿ ಇದ್ದುದರಿಂದ ಅವನ ಇಷ್ಟದಂತೆ ಬದುಕತೊಡಗಿದ. ದೇವರನ್ನು ಹುಡುಕಲು ಮನಸು ಬರಲಿಲ್ಲ ಸ್ವಲ್ಪಸ್ವಲ್ಪವಾಗಿ ದೇವರಿಂದ ಹಿಂದೆ ಸರಿದನು.

 

ಅತಿಯಾದ ಕೆಲಸ ಮತ್ತು ಅನಗತ್ಯ ಕೆಟ್ಟ ಅಭ್ಯಾಸಗಳಿಂದ ಆರೋಗ್ಯ ಹದಗೆಟ್ಟಿತು. ಹುಷಾರಿಲ್ಲದಿದ್ದಾಗ ಹೇಗೆ ಒಂಟಿಯಾಗಿರಲು ಸಾಧ್ಯ? ಅವನು ತಕ್ಷಣವೇ ತನ್ನ ಮನೆಗೆ ಹಿಂದಿರುಗಿ ಬಂದನು. ಅವನು ತನ್ನ ತಂಗಿ ಅಮಾಲಿಯಾಗೆ "ದೇವರಿದ್ದಾನೆ ಎಂಬುದನ್ನು ನನ್ನಿಂದ ನಂಬಲು ಸಾಧ್ಯವಿಲ್ಲ, ನಾನು ತುಂಬಾ ಗೊಂದಲಕ್ಕೊಳಗಾಗಿದ್ದೇನೆ, ನಾನು ಸತ್ಯವೇದವನ್ನು ಓದುವುದನ್ನು ನಿಲ್ಲಿಸಿಬಿಟ್ಟೆ." ಎಂದು ಹೇಳಿದನು. ಇದನ್ನು ಕೇಳಿದ ಅಮಾಲಿಯಾ ತುಂಬಾ ಚಿಂತಿತಳಾದಳು. ತಕ್ಷಣ ಅವಳು ಒಬ್ಬಳೇ ತನ್ನ ಕೋಣೆಗೆ ಹೋಗಿ ತನ್ನ ಅಣ್ಣನಿಗಾಗಿ ಪ್ರಾರ್ಥಿಸಿದಳು. ಯೇಸಪ್ಪ ನನ್ನ ಅಣ್ಣ ಪುನಃ ನಿಮ್ಮ ಪ್ರೀತಿಯನ್ನು ತಿಳಿದುಕೊಳ್ಳಬೇಕು ಎಂದು ಪ್ರತಿದಿನ ಪ್ರಾರ್ಥಿಸುತ್ತಿದ್ದಳು.

 

ಅದ್ಭುತವಾಗಿ, ಹಡ್ಸನ್ ಪುನಃ ದೇವರ ಪ್ರೀತಿಯನ್ನು ಅರಿತುಕೊಂಡನು. ಈ ಪ್ರೀತಿಯ ದೇವರ ಬಗ್ಗೆ ಎಲ್ಲರಿಗೂ ಹೇಳಬೇಕು ಎಂದು ನಿರ್ಧರಿಸಿದನು. ಅವನು ಮಿಷನರಿಯಾಗಿ ಚೀನಾಕ್ಕೆ ಹೋಗಲು ತನ್ನನ್ನು ಸಮರ್ಪಿಸಿಕೊಂಡನು. ಅವನ ಮೂಲಕ, ದೇವರು ಚೀನಾದಲ್ಲಿ ಅನೇಕ ಜನರನ್ನು ತನ್ನ ಮಕ್ಕಳನ್ನಾಗಿ ಮಾರ್ಪಡಿಸಿದರು.

 

ಏನು ಪುಟಾಣಿಗಳೇ! ಹಡ್ಸನ್ ಅಣ್ಣನಿಗಾಗಿ ಅಮಾಲಿಯಾ ಪ್ರಾರ್ಥಿಸಿದಂತೆ, ನೀವು ನಿಮ್ಮ ಸ್ನೇಹಿತರು ಮತ್ತು ಒಡಹುಟ್ಟಿದವರಿಗಾಗಿ ಪ್ರಾರ್ಥಿಸುವಾಗ, ಯೇಸಪ್ಪ ಕೇಳಿ ಖಂಡಿತವಾಗಿ ಉತ್ತರ ನೀಡುತ್ತಾರೆ. ಈಗಲೇ ಪ್ರಾರ್ಥಿಸಲು ಪ್ರಾರಂಭಿಸಿ, Ready ತಾನೇ!

- Mrs. ಅನ್ಬುಜ್ಯೋತಿ ಸ್ಟಾಲಿನ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş