Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 20.01.2024
Share:

By Village Missionary Movement

Saturday, 20-Jan-2024

ಧೈನಂದಿನ ಧ್ಯಾನ(Kannada) – 20.01.2024

 

ದೇವರ ರಾಜ್ಯ

 

"ಚಿಕ್ಕವನಿಂದ ಒಂದು ಕುಲವಾಗುವದು, ಅಲ್ಪನಿಂದ ಬಲವಾದ ಜನಾಂಗವಾಗುವದು;…" - ಯೆಶಾಯ 60:22

 

ಮಾನವಕುಲವು ದೈವೀಕ ಸತ್ಯಗಳನ್ನು ಅರ್ಥಮಾಡಿಕೊಳ್ಳಲು ಸುಲಭವಾಗುವಂತೆ ಯೇಸು ಕ್ರಿಸ್ತನು ಅನೇಕ ಸಾಮ್ಯಗಳನ್ನು ಹೇಳಿದರು. ಒಮ್ಮೆ ಅವರು ಸಾಸಿವೆ ಕಾಳನ್ನು ಪರಲೋಕ ರಾಜ್ಯಕ್ಕೆ ಹೋಲಿಸಿದರು. ಸಾಸಿವೆ ಎಲ್ಲಾ ಕಾಳುಗಳಲ್ಲಿ ಚಿಕ್ಕದಾಗಿದ್ದರೂ ಅದು ಬೆಳೆದ ಮೇಲೆ ಕಾಯಿಪಲ್ಯದ ಗಿಡಗಳಿಗಿಂತ ದೊಡ್ಡದಾಗಿ ಮರವಾಗುತ್ತದೆ; ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಬಂದು ಅದರ ಕೊಂಬೆಗಳಲ್ಲಿ ವಾಸಮಾಡುತ್ತವೆ ಎಂದರು. ಹೌದು, ಸಾಸಿವೆ ಕಾಳಿನಂತೆಯೇ ದೇವರ ರಾಜ್ಯ ಮತ್ತು ದೇವರ ಮಕ್ಕಳು ಲೋಕದ ದೃಷ್ಟಿಯಲ್ಲಿ ಅಲ್ಪವಾಗಿ ಕಾಣುತ್ತಿದ್ದಾರೆ. ಹೇಗೆ ಈ ಸಣ್ಣ ಸಾಸಿವೆ ಬೀಜವು ಬೆಳೆದು ಗಿಡವಾಗಿ ನಂತರ ಮರವಾಗಿ ಬೆಳೆಯುತ್ತದೋ ಹಾಗೆಯೇ ದೇವರ ರಾಜ್ಯವು ಬೆಳೆಯುವಂತದ್ದು. ಅಷ್ಟೇ ಅಲ್ಲ ಹಲವರಿಗೆ ಆಶ್ರಯ ನೀಡುತ್ತದೆ.

 

ಪ್ರಿಯರೇ! ಇಂದು ನಾವು ಜೀವಿಸುತ್ತಿರುವ ಲೋಕವನ್ನು ಮತ್ತು ಅದರ ರಾಜ್ಯವನ್ನು ನೋಡಿರಿ. ಭ್ರಷ್ಟಾಚಾರ, ಲೈಂಗಿಕ ಕಿರುಕುಳ, ಭಯೋತ್ಪಾದನೆ, ಭೂಕಂಪಗಳು, ಪ್ರವಾಹಗಳು, ಸಾಂಕ್ರಾಮಿಕ ರೋಗಗಳು, ಯುದ್ಧಗಳು ಭಯೋತ್ಪಾದನೆಯತ್ತ ಸಾಗುತ್ತಿವೆ. ಆದರೆ ಇವುಗಳ ಮಧ್ಯದಲ್ಲೂ ದೇವರು ದೇವರ ಮಕ್ಕಳಾದ ನಮ್ಮನ್ನು ಸಾಸಿವೆ ಕಾಳಿನಂತೆ ಇರಿಸಿ ಆಶ್ಚರ್ಯ ಪಡುವ ರೀತಿಯಲ್ಲಿ ಫಲಿತಾಂಶಗಳನ್ನು ನೋಡುವಂತೆ ಮಾಡುತ್ತಿದ್ದಾರೆ.

 

ಇದನ್ನು ಓದುತ್ತಿರುವ ದೇವರ ಮಕ್ಕಳೇ! ಮನುಷ್ಯರ ದೃಷ್ಟಿಯಲ್ಲಿ ನೀವು ಚಿಕ್ಕವರಂತೆ ಕಾಣಿಸಬಹುದು. ನಿಮ್ಮ ಕೆಲಸವನ್ನು ಕಡಿಮೆ ಅಂದಾಜು ಮಾಡಬಹುದು. ಆದರೆ ನೋಡಿ, ದೈತ್ಯನಾದ ಗೊಲ್ಯಾತನನ್ನು ಸೋಲಿಸಲು ದೇವರು ಚಿಕ್ಕ ದಾವೀದನನ್ನು ಬಳಸಿದರು. ಅಂತೆಯೇ, ಅವರು ನಮ್ಮನ್ನೂ ಬಳಸಿಕೊಳ್ಳುತ್ತಾರೆ. ಆತನು ನಮ್ಮ ಮೂಲಕ ಮಹತ್ಕಾರ್ಯಗಳನ್ನು ಮಾಡುತ್ತಾರೆ. ಆದುದರಿಂದ ಆಯಾಸ, ಗೊಂದಲ ಮತ್ತು ಭಯವನ್ನು ಬಿಟ್ಟು ಬಿಟ್ಟು ಧೈರ್ಯವಾಗಿ ದೇವರಾಜ್ಯದ ಕೆಲಸವನ್ನು ಮಾಡೋಣ. ದೇವರಾಜ್ಯವು ಬೆಳೆದು ವೃದ್ಧಿಯಾಗುತ್ತಲೇ ಇರುತ್ತದೆ. ಹನ್ನೆರಡು ಶಿಷ್ಯರಿಂದ ಪ್ರಾರಂಭವಾದ ಸೇವೆ ಕಳೆದ ಇಪ್ಪತ್ತು ಶತಮಾನಗಳಿಂದ ಭೂಮಿಯ ಕಟ್ಟಕಡೆಯರೆಗೂ ಹರಡಿ ದೊಡ್ಡ ರಾಜ್ಯವಾಗಿ ಅಭಿವೃದ್ಧಿಗೊಂಡಿದೆ. ಹೌದು, ಚಿಕ್ಕವನಿಂದ ಒಂದು ಕುಲವಾಗುವದು, ಅಲ್ಪನಿಂದ ಬಲವಾದ ಜನಾಂಗವಾಗುವದು ಎಂಬ ವಾಗ್ದಾನ ಎಷ್ಟು ಚೆನ್ನಾಗಿ ಈಡೇರುತ್ತಿದೆ! ಕರ್ತನು ಮಾಡಲು ಉದ್ದೇಶಿಸಿರುವ ಕಾರ್ಯವು ತಡೆಯಾಗುವುದಿಲ್ಲ. ಹಲ್ಲೇಲೂಯಾ!!

- Sis. ಬ್ಯೂಲಾ 

 

ಪ್ರಾರ್ಥನಾ ಅಂಶ:

ತಿರುಚ್ಚಿಯಲ್ಲಿ ನಿರ್ಮಾಣವಾಗುತ್ತಿರುವ ಉಜ್ಜೀವನ ಪ್ರಾರ್ಥನಾ ಕೇಂದ್ರದ ನಿರ್ಮಾಣ ಕಾರ್ಯಗಳ ಅಗತ್ಯಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş