Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 18.01.2024
Share:

By Village Missionary Movement

Thursday, 18-Jan-2024

ಧೈನಂದಿನ ಧ್ಯಾನ(Kannada) – 18.01.2024

 

ಸಾಮಾನ್ಯ ಬೀಜ

 

"ನಿನ್ನ ಆಹಾರವನ್ನು ನೀರಿನ ಮೇಲೆ ಚೆಲ್ಲು, ಬಹು ದಿನದ ಮೇಲೆ ಅದು ನಿನಗೆ ಸಿಕ್ಕುವದು." - ಪ್ರಸಂಗಿ 11:1

 

ಜನವರಿ 6, 1850 ರಂದು, ಇಂಗ್ಲೆಂಡ್ ದೇಶವು ಹಿಮಪಾತದಿಂದ ಬಾಧಿಸಲ್ಪಟ್ಟಿತು. ಹಿಮಪಾತದಲ್ಲಿ ಸಿಲುಕಿದ ಒಬ್ಬ ಯುವಕ ತನ್ನನ್ನು ರಕ್ಷಿಸಿಕೊಳ್ಳಲು ಸಮೀಪದಲ್ಲಿದ್ದ ಒಂದು ಸಭೆಗೆ ಓಡಿದನು. ಭಾನುವಾರದ ಸಂಜೆ ಆರಾಧನೆ ನಡೆಯುತ್ತಿದ್ದಾಗ ಸಭೆಯ ಬೋಧಕರು ಅಲ್ಲಿ ಇರಲಿಲ್ಲ. ಸಭೆಯ ಸದಸ್ಯರಾಗಿದ್ದ ಟೈಲರ್ ಒಬ್ಬರು ಆರಾಧನೆಯನ್ನು ನಡೆಸುತ್ತಿದ್ದರು. ಅವರು ದೇವರ ವಾಕ್ಯವನ್ನು ಹಂಚಿಕೊಳ್ಳಲು ಪ್ರಾರಂಭಿಸಿದರು. ಅವರು ಮತ್ತೆ ಮತ್ತೆ ಒತ್ತಿ ಹೇಳಿದ ಕಾರ್ಯ, "ನನ್ನ ಕಡೆಗೆ ನೋಡಿರಿ, ಆಗ ರಕ್ಷಿಸಲ್ಪಡುತ್ತೀರ" ಎಂಬುದೇ. ಹಿಮದ ಬಿರುಗಾಳಿಯಿಂದ ತಪ್ಪಿಸಿಕೊಂಡು ಓಡಿಬಂದ ಹುಡುಗ ಸಂದೇಶವನ್ನು ಕೇಳಲು ಮನಸ್ಸಿಲ್ಲದೆ ಬಾಗಿಲಿನ ಹಿಂದೆ ನಿಂತಿದ್ದನು. ಆ ಟೈಲರ್ ಪ್ರವಚನಪೀಠದಲ್ಲಿ ನಿಂತ ಹಾಗೆಯೇ, ಆ ಯುವಕನನ್ನು ನೋಡಿ “ಯೌವನಸ್ಥನೇ ಯೇಸುವಿನ ಕಡೆಗೆ ನೋಡು ಎಂದು ಹೇಳಿದರು. ಅವರು ವಿದ್ಯಾವಂತರೂ ಅಲ್ಲ, ಪ್ರಸಂಗಿಕರೂ ಅಲ್ಲ, ತೀರಾ ಸಾಮಾನ್ಯ ವ್ಯಕ್ತಿ. ಆದರೂ ಪವಿತ್ರಾತ್ಮದಿಂದ ತುಂಬಿಸಲ್ಪಟ್ಟವರಾಗಿ ಬಲವಾಗಿ ಅಸಾಧಾರಣವಾಗಿ ಬೋಧಿಸಿದರು. ಅನೇಕರಿರುವ ಸ್ಥಳದಲ್ಲಿ ವಿಶೇಷವಾಗಿ ತನ್ನನ್ನು ಮಾತ್ರ ನೋಡಿ ಹೇಳಿದ ಈ ಮಾತುಗಳು ಆ ಯುವಕನನ್ನು ಬಹಳವಾಗಿ ಕಲಕಿದವು. ಯೇಸುವಿನ ಕಡೆಗೆ ನೋಡು ಎಂಬ ಸತ್ಯವೇದದ ವಾಕ್ಯ ಬೀಜವು ಅವನ ಹೃದಯದಲ್ಲಿ ಕೇಳಿಸುತ್ತಲೇ ಇದ್ದದ್ದು ಮಾತ್ರವಲ್ಲದೆ, ಅವನೊಳಗೆ ಕಾರ್ಯ ಮಾಡಲು ಪ್ರಾರಂಭಿಸಿತು. ಕೊನೆಗೆ ಆ ಯುವಕನು ಯೇಸುವಿನ ಕಡೆಗೆ ನೋಡಿದನು. ಪವಿತ್ರಾತ್ಮದಿಂದ ತುಂಬಿಸಲ್ಪಟ್ಟನು. ಆ ಹುಡುಗ ಯಾರು ಗೊತ್ತಾ? ಅವರೇ C.H. ಸ್ಪರ್ಜನ್. ಪ್ರಸಂಗ ಸೇವೆಯಲ್ಲಿ ತುಂಬಾ ಬಲವಾಗಿ ಉಪಯೋಗಿಸಲ್ಪಟ್ಟು ಖ್ಯಾತಿಯನ್ನು ಗಳಿಸಿ ಕಾಣಲ್ಪಟ್ಟರು.

 

ಈ ಲೋಕದಲ್ಲಿ ಜೀವಿಸಿ ಎಲ್ಲವನ್ನೂ ಅನುಭವಿಸಿದ ಸೊಲೊಮೋನನು ಹೇಳುತ್ತಾರೆ. ನಿನ್ನ ಆಹಾರವನ್ನು ನೀರಿನ ಮೇಲೆ ಚೆಲ್ಲು, ಬಹು ದಿನದ ಮೇಲೆ ಅದು ನಿನಗೆ ಸಿಕ್ಕುವದು ಎಂದು! ಆಹಾರ ಎಂಬುದು ಬೀಜ! ಬೀಜವನ್ನು ನೀರಿರುವ ಪ್ರದೇಶದಲ್ಲಿ ನೆಟ್ಟರೆ ಅದರ ಫಲವನ್ನು ನಾವು ಬಹಳ ದಿನಗಳ ನಂತರ ನೋಡಬಹುದು. ನೀರು ಇರುವ ಜಾಗದಲ್ಲಿ ಬಿತ್ತನೆ ಮಾಡಿದರೆ ಮಾತ್ರವೇ ಅದರ ಲಾಭವನ್ನು ನಾವು ಪಡೆಯಲು ಸಾಧ್ಯ. ಇದಕ್ಕೆ ವ್ಯತಿರಿಕ್ತವಾಗಿ, ನಾವು ನೀರಿಲ್ಲದ ಬರಪೀಡಿತ ಪ್ರದೇಶಗಳಲ್ಲಿ ಬಿತ್ತನೆ ಮಾಡಿದರೆ, ನಾವು ಫಲಿತಾಂಶವನ್ನು ಕಾಣಲು ಸಾಧ್ಯವಿಲ್ಲ.

 

ಪ್ರಿಯರೇ, ಟೈಲರ್ ನ ಮೂಲಕ ಬಿತ್ತಿದ ಸಾಮಾನ್ಯವಾದ ಬೀಜವು ಉತ್ತಮ ಫಲವನ್ನು ನೀಡಿತು. ನಿಸ್ಸಂದೇಹವಾಗಿ ಅವನು ಬೀಜವನ್ನು ಬಿತ್ತಿದನು. ದೇವರು ಅದನ್ನು ಫಲಪ್ರದಗೊಳಿಸಿದರು. ಬಹುಶಃ ಈ ಜಗತ್ತಿನಲ್ಲಿ ನೆಡಲು ಒಂದು ಪ್ರದೇಶವಿದೆ. ಆದರೆ ಬಿತ್ತಲು ಆಳುಗಳಿಲ್ಲ. ದ್ವೀಪಗಳು ಅವರ ವಾಕ್ಯಕ್ಕಾಗಿ ಕಾಯುತ್ತಿವೆ. ಇಂತಹ ಪ್ರದೇಶಗಳಿಗೆ ಯಾರು ಹೊಣೆಗಾರರು ಎಂದರೆ ನೀವು ಮತ್ತು ನಾನೇ. ಯೇಸು ಎಂಬ ಬೀಜವನ್ನು ಬಿತ್ತೋಣ! ಇಲ್ಲಿ ಅದರ ಪ್ರತಿಫಲ ಕಾಣದಿದ್ದರೂ ಮುಂದೊಂದು ದಿನ ನಿಶ್ಚಯವಾಗಿ ಪರಲೋಕದಲ್ಲಿ ಕಾಣುತ್ತೇವೆ.

- Mrs. ಶಕ್ತಿ ಶಂಕರ್ ರಾಜ್ 

 

ಪ್ರಾರ್ಥನಾ ಅಂಶ:

ಮಾಧ್ಯಮ ಸೇವೆಯಲ್ಲಿ ಜೊತೆಗೂಡಿ ಸೇವೆ ಮಾಡುತ್ತಿರುವ ಸೇವಕರ ಕುಟುಂಬಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş jojobet giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/ grandpashabet