By Village Missionary Movement
Tuesday, 16-Jan-2024ಧೈನಂದಿನ ಧ್ಯಾನ(Kannada) – 16.01.2024
ಬೀಜವಾಗಿ ಕೊಡಿ
"…ಅವರು ಪೂರ್ಣಮನಸ್ಸಿನಿಂದಲೂ ಸ್ವೇಚ್ಫೆಯಿಂದಲೂ ಯೆಹೋವನಿಗೆ ಕಾಣಿಕೆ ಕೊಟ್ಟದ್ದಕ್ಕಾಗಿ ಜನರೆಲ್ಲರೂ ಸಂತೋಷಪಟ್ಟರು" - 1 ಪೂರ್ವ. 29:9
ಒಂದು ದಿನ ವಿಜ್ಞಾನದ ಶಿಕ್ಷಕರು ಮೆಣಸಿನಕಾಯಿಯೊಂದಿಗೆ ತರಗತಿಯನ್ನು ಪ್ರವೇಶಿಸಿದರು. ಇದು ಹೇಗೆ ಬಂತು? ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು. ವಿದ್ಯಾರ್ಥಿಗಳು ಮೆಣಸಿನ ಗಿಡದಿಂದ ಎಂದು ಹೇಳಿದರು. ತಕ್ಷಣ ಶಿಕ್ಷಕರು ಗಿಡ ಹೇಗೆ ಬಂತು ಎಂದು ಕೇಳಿದರು. ಅವರು ಬೀಜದಿಂದ ಎಂದು ಹೇಳಿದರು. ಗುರುಗಳು ದೇವರ ಅದ್ಭುತ ನೋಡಿ, ಒಂದು ಬೀಜದಿಂದ ಎಷ್ಟು ಕಾಯಿಗಳು ಮತ್ತು ಪ್ರತಿ ಕಾಯಿನೊಳಗೆ ಎಷ್ಟು ಬೀಜಗಳನ್ನಿಟ್ಟಿದ್ದಾರೆ! ಒಂದು ಬೀಜದಿಂದ ಎಷ್ಟು ಹೆಚ್ಚಳ ನೋಡುದ್ರಾ? ಎಂದು ಅಂದಿನ ಪಾಠಗಳನ್ನು ನಡೆಸಲು ಪ್ರಾರಂಭಿಸಿದರು.
ಸತ್ಯವೇದದಲ್ಲಿಯೂ ಸಹ ಯೇಸುವಿನ ಮಾತುಗಳನ್ನು ಕೇಳಲು ಬಂದವರಲ್ಲಿ ಒಬ್ಬ ಹುಡುಗನು ಐದು ರೊಟ್ಟಿ ಮತ್ತು ಎರಡು ಮೀನುಗಳನ್ನು ಇಟ್ಟುಕೊಂಡಿದ್ದನು. ಅವನು ದೂರದೃಷ್ಟಿಯಿಂದ ಊಟವನ್ನು ತಂದಿದ್ದನು. ಯೇಸು ಬಹಳ ಹೊತ್ತು ಮಾತನಾಡಿದ ನಂತರ, ಜನರನ್ನು ಕಳುಹಿಸಲು ಮುಂದಾದಾಗ, ಅವರು ಹಸಿವಿನಿಂದ ದಣಿದಿರುವುದರಿಂದ ಶಿಷ್ಯರನ್ನು ನೋಡಿ ಅವರಿಗೆ ತಿನ್ನಲು ಏನಾದರೂ ಕೊಡುವಂತೆ ಹೇಳಿದರು. ಆ ಹುಡುಗನು ತನ್ನ ಬಳಿಯಿದ್ದ ಆಹಾರವನ್ನು ಚಿಕ್ಕ ಬೀಜಗಳಾಗಿ ಶಿಷ್ಯರ ಬಳಿ ಕೊಟ್ಟನು. ಕೊಟ್ಟ ಕೂಡಲೇ ಕಳೆದುಕೊಂಡಂತಿತ್ತು. ಆದರೆ ಯೇಸು ಅದನ್ನು ಹೆಚ್ಚಿಸಿ ಐದು ಸಾವಿರ ಪುರುಷರು, ಸ್ತ್ರೀಯರು ಮತ್ತು ಮಕ್ಕಳು ಹೇರಳವಾಗಿ ತಿನ್ನುವಂತೆ ಮಾಡಿದರು. ಮತ್ತು ಮಿಕ್ಕಿದ್ದನ್ನು ಎತ್ತಿಡಲಾಯಿತು. ಅವನೂ ತೃಪ್ತಿಯಾಗಿ ಊಟ ಮಾಡಿ ಮನೆಗೆ ಮರಳಿದನು. ಎಲ್ಲರೂ ಹರ್ಷಿಸಿದರು.
ಇದನ್ನು ಓದುತ್ತಿರುವ ಪ್ರಿಯರೇ! ಒಂದು ದಿನ ಯೇಸುವಿನ ಮಾತುಗಳನ್ನು ಕೇಳಿದ ಪುಟ್ಟ ಹುಡುಗನೇ ತನಗಾಗಿ ಇಟ್ಟುಕೊಂಡಿದ್ದದನ್ನು ಯೇಸುವಿನ ಸೇವೆಗೆ ಅಗತ್ಯ ಎಂದಕೂಡಲೇ ಸ್ವಲ್ಪವೂ ಯೋಚಿಸದೆ ಬಿತ್ತಲು ಕೊಟ್ಟನೆಂದರೆ, ಇಂದು ನೀವು ಮತ್ತು ನಾನು ಅವರ ಮಾತುಗಳನ್ನು ಎಷ್ಟು ದಿನಗಳಿಂದ, ವರ್ಷಗಳಿಂದ ಕೇಳುತ್ತಿದ್ದೇವೆ. ಉಜ್ಜೀವನಕ್ಕಾಗಿ ಪ್ರಾರ್ಥಿಸುತ್ತಿದ್ದೇವೆ. ಆದರೆ ಆತ್ಮಗಳನ್ನು ಭೇಟಿ ಮಾಡುವ ಸೇವೆಯ ಅಗತ್ಯಕ್ಕಾಗಿ ನಾವು ಏನು ಮಾಡಿದ್ದೇವೆ? ಸ್ವಲ್ಪ ಯೋಚಿಸೋಣ. ಆ ಹುಡುಗನು ಬಿತ್ತಿದ ಹಾಗೆ ನಿಮ್ಮ ಪಾಲು ಸಹ ಚಿಕ್ಕದಾಗಿರಬಹುದು. ನೀವು ಸೇವೆಗಾಗಿ ಕೊಡುವದನ್ನು ಅವರು ಯೇಸುವಿನ ಸೇವೆಗಾಗಿ ಖರ್ಚು ಮಾಡುವಾಗ ಅವರು ಹೆಚ್ಚಿಸುತ್ತಾರೆ. ನಮ್ಮ ಬಳಿ ಇದ್ದರೆ ಅದು ನಮಗೆ ಮಾತ್ರವೇ ಪ್ರಯೋಜನ. ಯೇಸು ಕ್ರಿಸ್ತನಿಗಾಗಿ ಕೊಡುವಾಗ, ನಿಮ್ಮ ಹೃದಯ ಮತ್ತು ಮನಸ್ಸು ತೃಪ್ತಿ ಹೊಂದುತ್ತದೆ. ಸೇವೆಯಲ್ಲಿ ಮತ್ತು ನಮ್ಮ ಜೀವನದಲ್ಲಿ ಸಮೃದ್ಧಿ ಇರುತ್ತದೆ. ಇದೇ ದೇವರು ಕೊಡುವ ಫಲ. ನಿತ್ಯಜೀವನದಲ್ಲಿಯೂ ಅದನ್ನು ನೋಡಬಹುದು. ಮತ್ತಾಯ 10:42 ರಲ್ಲಿ ಒಂದು ತಂಬಿಗೆ ನೀರು ಕೊಟ್ಟರೂ ಪ್ರತಿಫಲವಿದೆ ಎಂದು ನೋಡುತ್ತೇವೆ. ಆದುದರಿಂದ ನಮ್ಮಲ್ಲಿರುವದನ್ನು ಮನಃಪೂರ್ವಕವಾಗಿ ಕರ್ತನಿಗೆ ಕೊಟ್ಟು ಆಶೀರ್ವಾದ ಪಡೆಯೋಣ.
- Mrs. ಅನ್ಬುಜ್ಯೋತಿ ಸ್ಟಾಲಿನ್
ಪ್ರಾರ್ಥನಾ ಅಂಶ:
ನಮ್ಮ ಸೇವಾಕ್ಷೇತ್ರದ ಸೇವಕರಿಗೆ ಅಗತ್ಯವಾಗಿರುವ ನಾಲ್ಕು ಚಕ್ರದ ವಾಹನಗಳನ್ನು ತೆಗೆದುಕೊಳ್ಳಲು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482