Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 13.01.2024
Share:

By Village Missionary Movement

Saturday, 13-Jan-2024

ಧೈನಂದಿನ ಧ್ಯಾನ(Kannada) – 13.01.2024

 

ನಿತ್ಯತ್ವಕ್ಕೆ ಬೇಕಾದ ಬೀಜ

 

"…ಆತ್ಮನನ್ನು ಕುರಿತು ಬಿತ್ತುವವನು ಆತ್ಮನಿಂದ ನಿತ್ಯಜೀವವನ್ನು ಕೊಯ್ಯುವನು” - ಗಲಾತ್ಯ 6:8

 

ರೀಟಾ ಮತ್ತು ಶೀಲಾ ಒಂದೇ ಚರ್ಚ್‌ಗೆ ಹೋಗುವ ಭಕ್ತಿಯುಳ್ಳ ವಿಶ್ವಾಸಿಗಳು. ಇಬ್ಬರ ಮನೆಯಲ್ಲೂ ಕಮಲಾ ಎಂಬ ವಿಧವೆ ತಾಯಿ ಮನೆಕೆಲಸ ಮಾಡಲು ಬರುತ್ತಿದ್ದರು. ತನ್ನ ಗಂಡ ಮಾಡಿದ ಸಾಲವನ್ನು ತೀರಿಸಲಾಗದೆ ಕಮಲಾ ಪರದಾಡುತ್ತಿದ್ದಳು. ಇದನ್ನು ಕೇಳಿದ ರೀಟಾ ಒಮ್ಮೆ ಮಾತ್ರ ಅವಳಿಗೆ ಹಣ ನೀಡಿ ಸಹಾಯ ಮಾಡಿದಳು. ಆಮೇಲೆ ಪ್ರತಿತಿಂಗಳು ಅದನ್ನೇ ಅಭ್ಯಾಸ ಮಾಡಿಕೊಳ್ಳುತ್ತಾಳೆ ಎಂದು ಜಾಣತನದಿಂದ ವರ್ತಿಸುತ್ತಿದ್ದೇನೆ ಅಂದುಕೊಂಡು ಮತ್ತೆ ಸಹಾಯಮಾಡಲಿಲ್ಲ. ಆದರೆ ಶೀಲಾ ತನ್ನ ಕೈಲಾದ ಸಹಾಯ ಮಾಡುತ್ತಿದ್ದಳು. ಈ ಇಬ್ಬರಲ್ಲಿ ಯಾರು ನಿತ್ಯತ್ವಕ್ಕಾಗಿ ಬಿತ್ತಿದರು?

 

ಯೇಸು ಕ್ರಿಸ್ತನು ಭೂಮಿಯ ಮೇಲೆ ವಾಸಿಸುತ್ತಿದ್ದ ದಿನಗಳಲ್ಲಿ, ಒಬ್ಬ ನಾಯಕ ಅವರನ್ನು ನೋಡಿ ಒಳ್ಳೆಯ ಬೋಧಕನೇ ನಾನು ನಿತ್ಯಜೀವಕ್ಕೆ ಬಾಧ್ಯನಾಗುವಂತೆ ಏನು ಮಾಡಬೇಕು ಎಂದು ಕೇಳಿದನು. ಅದಕ್ಕೆ ಯೇಸು ಕೆಲವು ವಿಷಯಗಳನ್ನು ಹೇಳಿದ ನಂತರ

ಇನ್ನೂ ನಿನಗೆ ಒಂದು ಕಡಿಮೆಯಾಗಿದೆ. ನಿನ್ನ ಬದುಕನ್ನೆಲ್ಲಾ ಮಾರಿ ಬಡವರಿಗೆ ಹಂಚಿಕೊಡು; ಪರಲೋಕದಲ್ಲಿ ನಿನಗೆ ಸಂಪತ್ತಿರುವದು; ನೀನು ಬಂದು ನನ್ನನ್ನು ಹಿಂಬಾಲಿಸು” ಎಂದು ಹೇಳಿದರು.

 

ಮತ್ತು ಸತ್ಯವೇದದಲ್ಲಿ ಮಾಂಸಕ್ಕಾಗಿ ಬಿತ್ತುವುದು ಈ ಲೌಕಿಕ ಜೀವನದಲ್ಲಿ ನಮಗೆ ಶ್ರೇಷ್ಠತೆ ಮತ್ತು ಉನ್ನತಿಯನ್ನು ತಂದರೂ, ಅದರ ಫಸಲು ನಾಶವಾಗಿದೆ. ಆದರೆ ನಾವು ಆತ್ಮಕ್ಕಾಗಿ ಬಿತ್ತಿದಾಗ ನಾವು ಈ ಐಹಿಕ ಜೀವನವನ್ನು ಮುಗಿಸಿದ ನಂತರ ನಿತ್ಯ ಜೀವವನ್ನು ಕೊಯ್ಯಬಹುದು.

 

ಪ್ರಿಯರೇ, ಮೇಲಿನ ಘಟನೆಗಳು ಹೇಳುವಂತೆ, ನಮ್ಮಲ್ಲಿರುವ ಬಡವರಿಗೆ ಮತ್ತು ನಿರ್ಗತಿಕರಿಗೆ ಸಹಾಯ ಮಾಡುವುದು ನಾವು ನಿತ್ಯತ್ವದಲ್ಲಿ ಬಿತ್ತುವುದಕ್ಕೆ ಸಮಾನವಾಗಿದೆ. ಈ ಜಗತ್ತಿಗೆ ತಿಳಿಯದಿದ್ದರೂ ಪರಲೋಕವು ಖಂಡಿತವಾಗಿಯೂ ಇದನ್ನು ತಿಳಿಯುತ್ತದೆ. ನಾವು ಈ ಜಗತ್ತಿನಲ್ಲಿ ಸಂಪತ್ತನ್ನು ಸಂಗ್ರಹಿಸದಿದ್ದರೂ ಪರಲೋಕದಲ್ಲಿ ಸಂಗ್ರಹಿಸಿಡುವುದಾದರೆ, ಅದು ನಿತ್ಯವಾದದ್ದು ಮತ್ತು ನಿರಂತರವಾದದ್ದು. ನಮ್ಮ ಕ್ರೈಸ್ತಧರ್ಮದ ಉದ್ದೇಶವು ಹೇಗಾದರೂ ಆ ನಿತ್ಯಜೀವವನ್ನು ಪಡೆಯಬೇಕೆಂಬುದೇ. ಅಪೊಸ್ತಲನಾದ ಪೌಲನು ಸತ್ಕಾರ್ಯಗಳನ್ನು ಮಾಡುವುದರಲ್ಲಿ ಆಯಾಸಗೊಳ್ಳಬಾರದೆಂದು ಶಿಷ್ಯರನ್ನು ಉತ್ತೇಜಿಸುತ್ತಾರೆ. ಆದ್ದರಿಂದ ನಾವು ನಿತ್ಯತ್ವದ ಬೀಜಗಳನ್ನು ಬಿತ್ತೋಣ. ನಾವು ಇಲ್ಲಿ ಬಿತ್ತುವ ಬೀಜಗಳ ಫಲವನ್ನು ನಿಶ್ಚಯವಾಗಿ ಒಂದು ದಿನ ನಿತ್ಯತ್ವದಲ್ಲಿ ನೋಡುತ್ತೇವೆ. ಏಕೆಂದರೆ ಬೀಜವು ಬೆಳೆಯುವಂತೆ ಮಾಡುವವರು ಯೇಸು ಕ್ರಿಸ್ತನೇ.

- Mrs. ಸಿನಿಲ್ಟಾ ಸೆಲ್ವರಾಜ್

 

ಪ್ರಾರ್ಥನಾ ಅಂಶ:

ಇಂದು ನಡೆಯುತ್ತಿರುವ ಶಿಷ್ಯತ್ವ ಶಿಬಿರದಲ್ಲಿ ಭಾಗವಹಿಸುವ ಪ್ರತಿಯೊಬ್ಬ ಯುವಕರು ದೇವರ ಕೈಯಲ್ಲಿ ಸಾಧನವಾಗಿ ಮಾರ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al