By Village Missionary Movement
Friday, 12-Jan-2024ಧೈನಂದಿನ ಧ್ಯಾನ(Kannada) – 12.01.2024
ಬಿತ್ತನೆ ಮತ್ತು ಕೊಯ್ಲು
"...ನನ್ನನ್ನು ಸನ್ಮಾನಿಸುವವರನ್ನು ಸನ್ಮಾನಿಸುವೆನು;..." - 1 ಸಮುವೇಲ 2:30
ಇಸಾಕನು ಬೀಜವನ್ನು ಬಿತ್ತಿದಾಗ ನೂರರಷ್ಟು ಕೊಯ್ದನು. 100 ಪಟ್ಟು ಲಾಭ ಹೇಗೆ ಸಿಕ್ಕಿತು? ಹೇಗೆಂದರೆ ಕರ್ತನು ಆಶೀರ್ವದಿಸಿದ್ದರಿಂದ! ಕರ್ತನು ಅವನನ್ನು ಯಾವುದರಿಂದ 100 ರಷ್ಟು ಆಶೀರ್ವದಿಸಿದರು ಎಂದು ನೋಡುವುದಾದರೆ, ದೇವರು ಅವನಿಗೆ ದರ್ಶನವಾಗಿ, ನೀನು ಐಗುಪ್ತಕ್ಕೆ ಹೋಗದೆ ನಾನು ನಿನಗೆ ಹೇಳುವ ದೇಶದಲ್ಲೇ ವಾಸವಾಗಿರು ಎಂದು ಹೇಳಿದ ಮಾತಿಗೆ ವಿಧೇಯನಾದದ್ದರಿಂದ ಅವರು ಬಿತ್ತಿದ್ದನ್ನು 100 ರಷ್ಟು ಕರ್ತನಾದ ದೇವರು ಇಸಾಕನನ್ನು ಆಶೀರ್ವದಿಸಿದರು. ಅಷ್ಟು ಮಾತ್ರವಲ್ಲ, ಫಿಲಿಷ್ಟಿಯರು ಅವನ ಮೇಲೆ ಅಸೂಯೆಪಡುವಷ್ಟು ಮಟ್ಟಿಗೆ ಅವನ ಆಶೀರ್ವಾದವು ಬೆಳೆಯುತ್ತಲೇ ಇತ್ತು.
ನನ್ನ ಪ್ರಿಯರೇ! ಈ ದಿನಗಳಲ್ಲಿ ನೀವು ನಿರೀಕ್ಷಿಸಿದ ಆಶೀರ್ವಾದಗಳು ನಿಮ್ಮ ಸೇವೆಯಲ್ಲಿ ಇಲ್ಲವೇ? ನಿಮ್ಮ ಕೆಲಸದಲ್ಲಿ ನೀವು ನಿರೀಕ್ಷಿಸಿದ ಉನ್ನತಿ ಮತ್ತು ಸಂಬಳ ಇಲ್ಲವೇ? ನಿಮ್ಮ ಕಷ್ಟಾರ್ಜಿತಕ್ಕೆ ತಕ್ಕ ಆದಾಯ ನಿಮ್ಮ ವ್ಯಾಪಾರದಲ್ಲಿ ಇಲ್ಲವೇ? ಅಂದರೆ ಪ್ರಯತ್ನಕ್ಕೆ ತಕ್ಕ ಫಲ ಬೀಜಕ್ಕೆ ತಕ್ಕ ಬೆಳೆ ಅಲ್ವಾ? ನೀವು ನಿಮ್ಮ ಚಟುವಟಿಕೆಗಳನ್ನು ಯೋಚಿಸಿ ಸರಿಹೊಂದಿಸಬೇಕಾದ ಸಮಯವಿದು. ದೇವರು ನಿಮಗೆ ಹೇಳಿದ ಸ್ಥಳದಲ್ಲಿ ನೀವು ನಿಮ್ಮ ಸೇವೆಯನ್ನು ಮಾಡುತ್ತಿದ್ದೀರಾ? ನಿಮ್ಮ ಕೆಲಸದ ಸ್ಥಳದಲ್ಲಿ ಕರ್ತನಿಗೆ ನಿಷ್ಠಾವಂತರಾಗಿ ಸಾಕ್ಷಿಯಾಗಿ ಜೀವಿಸುತ್ತಿದ್ದೀರಾ? ನಿಮ್ಮ ವ್ಯಾಪಾರದಲ್ಲಿ ನೀವು ಈ ಕೆಳಗಿನವುಗಳನ್ನು ಮಾಡುತ್ತಿದ್ದೀರಾ?
1) ನಿಮ್ಮ ವೃತ್ತಿ ಅಥವಾ ವ್ಯಾಪಾರವು ಕರ್ತನಿಗೆ ಇಷ್ಟವಾದದ್ದಾ?
2) ನೀವು ದೈನಂದಿನ ಪ್ರಾರ್ಥನೆಯೊಂದಿಗೆ ನಿಮ್ಮ ವ್ಯಾಪಾರವನ್ನು ಪ್ರಾರಂಭಿಸುತ್ತಿದ್ದೀರಾ?
3) ನಿಮ್ಮ ವ್ಯಾಪಾರದ ಪಾರ್ಟ್ನರ್ ದೇವರ ಚಿತ್ತದಂತೆ ಸೇರಿಸಲ್ಪಟ್ಟವರಾ?
4) ನಿಮ್ಮ ವ್ಯಾಪಾರದ ಆದಾಯದ ಮೂಲಕ ಕರ್ತನ ಸೇವೆಯು ಆಶೀರ್ವದಿಸಲ್ಪಟ್ಟಿದೆಯೇ?
ಪ್ರಿಯರೇ! ದೇವರ ಸಮ್ಮುಖದಲ್ಲಿ ಕುಳಿತು ಪ್ರಾರ್ಥನೆಯೊಂದಿಗೆ ಮೇಲಿನವುಗಳನ್ನು ಯೋಚಿಸಿ ಸರಿಪಡಿಸಿ. ದೇವರ ವಾಕ್ಯಕ್ಕೆ ವಿಧೇಯತೆ ಆಶೀರ್ವಾದದ ಬುಗ್ಗೆ ಎಂಬುದನ್ನು ಮರೆಯಬೇಡಿ. ಇಸಾಕ ನಂತೆ ವಿಧೇಯರಾಗಿರಿ. ಆಗ ದೇವರು ನಿಮ್ಮ ಚಟುವಟಿಕೆಗಳು, ಕೆಲಸ ಮತ್ತು ವ್ಯಾಪಾರವನ್ನು 100 ರಷ್ಟು ಆಶೀರ್ವದಿಸಿ ಇಸಾಕನಂತೆ ಹೆಚ್ಚಿಸುತ್ತಾರೆ.
ನೆನಪಿಡಿ:
". . . ನನ್ನ ಆಜ್ಞೆಗಳನ್ನು ಕೇಳಿದ್ದರೆ ಎಷ್ಟೋ ಚೆನ್ನಾಗಿತ್ತು! ನಿನ್ನ ಸುಖವು ದೊಡ್ಡ ನದಿಯಂತೆಯೂ ನಿನ್ನ ಕ್ಷೇಮವು ಸಮುದ್ರದ ಅಲೆಗಳ ಹಾಗೂ ಇರುತ್ತಿದ್ದವು." (ಯೆಶಾಯ 48:18)
- K. ಬೆಂಜಮಿನ್
ಪ್ರಾರ್ಥನಾ ಅಂಶ :
ನಾಳೆ ನಡೆಯುವಂತಹ ಶಿಷ್ಯತ್ವ ಶಿಬಿರದ ಆರ್ಥಿಕ ಅಗತ್ಯಗಳು ಪೂರೈಸಲ್ಪಡುವಂತೆ, ಅನೇಕ ಯೌವನಸ್ಥರು ಭಾಗವಹಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482