By Village Missionary Movement
Thursday, 11-Jan-2024ಧೈನಂದಿನ ಧ್ಯಾನ(Kannada) – 11.01.2024
ಉಜ್ಜೀವನದ ಬೀಜ ಬಿದ್ದ ಹೃದಯಗಳು
"…ಯಾರಾರ ಹೃದಯದಲ್ಲಿ ಯೆಹೋವನು ಜ್ಞಾನವನ್ನು ಇಟ್ಟಿದ್ದನೋ ಯಾರಾರನ್ನು ಈ ಕೆಲಸಮಾಡುವದಕ್ಕೆ ಹೃದಯ ಪ್ರೇರಿಸಿತೋ ಆ ಜಾಣರೆಲ್ಲರನ್ನೂ ಮೋಶೆ ತನ್ನ ಹತ್ತಿರಕ್ಕೆ ಕರಿಸಿದನು" - ವಿಮೋಚನ. 36:2
ಉಜ್ಜೀವನದ ಬಗ್ಗೆ ಹೆಚ್ಚಾಗಿ ಮಾತನಾಡುವ ಕಾಲವಿದು. ಪರಿಶುದ್ಧ ಗ್ರಂಥದಲ್ಲಿ ಕರ್ತನ ಯಾಜಕಗುಡಾರಕ್ಕೆ ಸಂಬಂಧಿಸಿದ ಎಲ್ಲಾ ಕೆಲಸಗಳ ಬಗ್ಗೆ ಮೋಶೆಯು ಇಸ್ರಾಯೇಲ್ ಮಕ್ಕಳಿಗೆ ತಿಳಿಸಿದಾಗ, ಈ ಕೆಲಸಮಾಡುವದಕ್ಕೆ ಯಾರ ಹೃದಯ ಪ್ರೇರಿಸಿತೋ ಆ ಜಾಣರೆಲ್ಲರೂ ಯಾಜಕಗುಡಾರದ ಕೆಲಸಕ್ಕೂ ಅದರ ಸಕಲ ಸೇವೆಗೂ, ಪರಿಶುದ್ಧ ವಸ್ತ್ರಗಳಿಗೂ ತಕ್ಕವುಗಳನ್ನು ಕರ್ತನಿಗೆ ಕಾಣಿಕೆಯಾಗಿ ತಂದರು. ಗೌರವಾನ್ವಿತ ಸೇವೆಯ ನಂತರದ ಎಲ್ಲಾ ಕೆಲಸಗಳನ್ನೂ ಮಾಡಿದರು. ಏಕೆಂದರೆ ದೇವರ ಕೆಲಸವು ಗೌರವಾನ್ವಿತವಾದದ್ದು ಎಂಬುದನ್ನು ಅರಿತಿದ್ದ ಅವರು ಮೌನವಾಗಿರಲು ಸಾಧ್ಯವಾಗಲಿಲ್ಲ. ತೀವ್ರವಾಗಿ ಕರ್ತನಿಗಾಗಿ ಸೇವೆ ಸಲ್ಲಿಸಿದರು.
ಒಂದು ಹಳ್ಳಿಯಲ್ಲಿ, ಒಬ್ಬ ಕ್ರೈಸ್ತ ಯುವಕನು ಪಾಪದಲ್ಲಿಯೂ, ಅಧರ್ಮಲ್ಲಿಯೂ ಮತ್ತು ಅತಿಕ್ರಮಣದಲ್ಲಿ ವಾಸಿಸುತ್ತಿದ್ದನು. ಎಲ್ಲಾ ಜನರ ಪಾಪಗಳಿಗಾಗಿ ಶಿಲುಬೆಯ ಮೇಲೆ ರಕ್ತವನ್ನು ಸುರಿಸಿ ಸತ್ತು ಸಮಾಧಿ ಮಾಡಲ್ಪಟ್ಟು ಮೂರನೆಯ ದಿನದಲ್ಲಿ ಜೀವಂತವಾಗಿ ಎದ್ದ ಯೇಸುಕ್ರಿಸ್ತನ ಉಜ್ಜೀವನದ ಬೀಜವು ಒಂದು ದಿನ ಅವನೊಳಗೆ ಬಿದ್ದು ಕೆಲಸ ಮಾಡಲು ಪ್ರಾರಂಭಿಸಿತು. ಅಲ್ಲಿಯವರೆಗೆ ದೇವರಿಗಾಗಿ ಏನನ್ನೂ ಮಾಡದ ಅವನು, ನಂತರ ಸುಮ್ಮನಿರಲಾಗಲೇ ಇಲ್ಲ. ನನ್ನ ದೇವರಿಗಾಗಿ ಏನಾದರೂ ಮಾಡಬೇಕು ಎಂದು ಬಯಸಿದನು. ಸಂಜೆ ಅಥವಾ ರಾತ್ರಿ ಅಲ್ಲಿನ ಸಾಂಪ್ರದಾಯಿಕ ಚರ್ಚ್‌ಗೆ ಹೋಗಿ ಯೇಸುಕ್ರಿಸ್ತನ ನಾಮದ ಮಹಿಮೆಗಾಗಿ ಹಾಡುಗಳನ್ನು ಹಾಡುತ್ತಿದ್ದನು. ಸತ್ಯವೇದವನ್ನು ಓದುತ್ತಿದ್ದನು. ದೇವರ ಆಲಯದ ಕಾರ್ಯಗಳಲ್ಲಿ ಉತ್ಸಾಹದಿಂದ ತೊಡಗಿಸಿಕೊಳ್ಳುತ್ತಿದ್ದನು. ಅವನು ಉತ್ಸಾಹದಿಂದ ದೇವರ ಸೇವೆಗಳಿಗೆ ತನ್ನ ಕೈಲಾದಷ್ಟು ಕಾಣಿಕೆಗಳನ್ನು ಕೊಡುತ್ತಿದ್ದನು. ತನ್ನೊಂದಿಗೆ ಮಾತನಾಡುವವರಿಗೆ ಹೇಗಾದರೂ ಯೇಸುವನ್ನು ತಿಳಿಸಬೇಕು ಎಂಬ ಆಲೋಚನೆ ಅವನಲ್ಲಿ ಹೆಚ್ಚಾಗಿತ್ತು. M.A., M.Phil ಮತ್ತು Ph.D., ಓದುತ್ತಿದ್ದಾಗ ದೇವರು ಅಳುತ್ತಿದ್ದಾರೆಂಬ ಸಂದೇಶವನ್ನು ಕೇಳಿ ಮಧ್ಯದಲ್ಲಿಯೇ ವಿದ್ಯಾಭ್ಯಾಸವನ್ನು ತೊರೆದು ತಡಮಾಡದೆ ಕರ್ತನ ಘನವಾದ ಸೇವೆಗೆ ತನ್ನನ್ನು ಒಪ್ಪಿಸಿಕೊಟ್ಟನು. ಇಂದು ಕುಟುಂಬವಾಗಿ ಕರ್ತನ ಸೇವೆ ಮಾಡಲು ದೇವರು ಕೃಪೆ ತೋರಿದ್ದಾರೆ, ಉಪಯೋಗಿಸುತ್ತಿದ್ದಾರೆ, ಕರ್ತನಿಗೆ ಸ್ತೋತ್ರ!
ಪ್ರೀತಿಯ ಸಹೋದರ ಸಹೋದರಿಯರೇ! ಉಜ್ಜೀವನದ ಬೀಜ ಬಿದ್ದ ಹೃದಯಗಳು ಸುಮ್ಮನಿರುವುದಿಲ್ಲ. ಅದು ಕರ್ತನಿಗಾಗಿ ಫಲವನ್ನು ಕೊಡುತ್ತದೆ. ಇದನ್ನು ಓದುತ್ತಿರುವ ಮತ್ತು ಕೇಳುತ್ತಿರುವ ನಿಮ್ಮ ಹೃದಯದಲ್ಲಿ ಉಜ್ಜೀವನದ ಬೀಜವು ಬಿದ್ದಿದೆಯೇ?
- Bro. ಸಿಮಿಯೋನ್
ಪ್ರಾರ್ಥನಾ ಅಂಶ:
ಯೇಸುವಿನ ಸಂತತಿಯ ಮೂಲಕ ಭೇಟಿಯಾಗುವ ಚಿಕ್ಕ ಮಕ್ಕಳಿಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482