By Village Missionary Movement
Wednesday, 10-Jan-2024ಧೈನಂದಿನ ಧ್ಯಾನ(Kannada) – 10.01.2024
ಆರಿಸಲ್ಪಟ್ಟ ಬೀಜ
"…ನೋಹನು ನೀತಿವಂತನೂ ತನ್ನ ಕಾಲದವರಲ್ಲಿ ತಪ್ಪಿಲ್ಲದವನೂ ಆಗಿದ್ದನು; ಅವನು ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಂಡನು" - ಆದಿಕಾಂಡ 6:9
ಒಂದು ಕಾಡಿನಲ್ಲಿ ಆನೆಗಳ ಹಿಂಡು ವಾಸಿಸುತ್ತಿತ್ತು. ಅವು ಎಲ್ಲೇ ಹೋದರೂ ಗುಂಪಾಗಿಯೇ ಹೋಗುತ್ತಿದ್ದವು. ಅದರಲ್ಲಿ ಒಂದು ಮರಿ ಮತ್ತು ತಾಯಿ ಆನೆ ಇತ್ತು. ಉತ್ತಮ ಮೇವು ಹುಡುಕಲು ಆನೆಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳುತ್ತಿದ್ದವು. ಹೀಗೆ ಆನೆಗಳ ಹಿಂಡುಗಳು ಹೋಗುತ್ತಿರುವಾಗ ಈ ಮರಿ ಆನೆ ಎಲ್ಲಿಗೆ ಹೋಯಿತೆಂದು ಗೊತ್ತಾಗದೆ ತಾಯಿ ಆನೆ ಹುಡುಕಿಕೊಂಡು ಹೋಯಿತು. ಕೆಲವು ದಿನಗಳು ಹುಡುಕಿದ ನಂತರ ಆ ಮರಿ ಆನೆಯನ್ನು ಕಂಡುಹಿಡಿಯಿತು. ಎಷ್ಟು ಗುಂಪಾಗಿದ್ದರೂ ತನ್ನ ಮಗುವನ್ನು ಚೆನ್ನಾಗಿ ತಿಳಿದಿದ್ದದರಿಂದ ಕಂಡುಹಿಡಿದು ಬಿಟ್ಟಿತು. ಅಂತೆಯೇ, ದೇವರು ಪಾಪದಿಂದ ತುಂಬಿರುವ ಈ ಮಾಯಾಲೋಕದಲ್ಲಿ ತನ್ನ ಮಕ್ಕಳನ್ನು ತಿಳಿದಿದ್ದಾರೆ.
ದೇವರು ಈ ಲೋಕದಲ್ಲಿ ಮನುಷ್ಯರನ್ನು ಸೃಷ್ಟಿಸಿದರು. ಅವರು ಅಭಿವೃದ್ಧಿಯಾದರು. ಪಾಪವೂ ಹೆಚ್ಚಾಯಿತು. ಮನುಷ್ಯನ ಪಾಪಗಳನ್ನು ನೋಡಿದ ದೇವರು ಪಶ್ಚಾತ್ತಾಪಪಟ್ಟು ಲೋಕವನ್ನು ನಾಶಮಾಡಲು ನಿರ್ಧರಿಸಿದರು. ಆದರೆ ಇಷ್ಟೊಂದು ಪಾಪ ತುಂಬಿರುವ ಮನುಷ್ಯರಲ್ಲಿ ಒಬ್ಬ ನೀತಿವಂತನನ್ನು ಕಂಡರು. ಅವರು ಯಾರು ಗೊತ್ತಾ? ಅವರೇ ನೋಹನು! ಕರ್ತನು ಈ ನೋಹನ ಕುಟುಂಬವನ್ನು ಮಾತ್ರ ಕಾಪಾಡಿ, ಎಲ್ಲಾ ಜನರನ್ನು ನೀರಿನಿಂದ ನಾಶಪಡಿಸಿದರು. ಈ ಭೂಮಿಯ ಮೇಲೆ ಒಂದು ಹೊಸ ಸಂತತಿಯು ಉದ್ಭವಿಸಲು ದೇವರು ನೋಹನನ್ನು ಒಂದು ಬೀಜವಾಗಿ ಆರಿಸಿಕೊಂಡರು. ಅವರ ಮೂಲಕ ದೇವರ ಯೋಜನೆ ಈ ಭೂಮಿಯಲ್ಲಿ ನೆರವೇರಿತು.
ಪ್ರಿಯರೇ, ಇಂದು ಕುಟುಂಬವಾಗಿ ಜೀವಿಸುತ್ತಿರುವ ಮತ್ತು ಜೀವಿಸಲು ಹೊರಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಮತ್ತು ಕುಟುಂಬದ ಮುಖ್ಯಸ್ಥರು ತಮ್ಮ ಕುಟುಂಬಕ್ಕೆ ತಾವೇ ಜವಾಬ್ದಾರರು ಎಂಬುದನ್ನು ಅರಿತುಕೊಳ್ಳಬೇಕು. ನಾವು ಉತ್ತಮ ಬೀಜವಾಗಿ, ಕರ್ತನನ್ನು ಮೆಚ್ಚಿಸುವ ಬೀಜವಾಗಿ ಜೀವಿಸುವಾಗ, ನಮ್ಮ ಕುಟುಂಬವು ದೇವರಲ್ಲಿ ಬೆಳೆಯಲು ಕಾರಣವಾಗುತ್ತೇವೆ. ನೋಹನ ಹಾಗೆ ದೇವರು ನಮ್ಮನ್ನೂ ನಂಬಿದ್ದಾರೆ. ನಮ್ಮ ದೈವೀಕವಾದ ಜೀವನವು ಒಂದು ಬೀಜವಾಗಿದೆ. ಅದರ ಮೂಲಕ ದೈವಭಕ್ತಿಯುಳ್ಳ ಸಂತತಿ ರೂಪುಗೊಳ್ಳುತ್ತದೆ ಎಂಬುದು ನಿಶ್ಚಯ! ಹಾಗಾಗಿ ಅವರು ನಮ್ಮ ಕೈಯಲ್ಲಿ ಕೊಟ್ಟಿರುವ ಕುಟುಂಬ, ಮಕ್ಕಳು, ಸಂಬಂಧಗಳು ಮತ್ತು ಜವಾಬ್ದಾರಿಗಳನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳೋಣ. ನಾವು ಲೋಕದೊಂದಿಗೆ ಬೆರೆಯದಂತೆ ದೇವರು ಆರಿಸಲ್ಪಟ್ಟ ಕುಟುಂಬವಾಗಿ ಬದುಕುವುದಾದರೆ ದೊಡ್ಡ ಫಲ ಉಂಟಾಗುತ್ತದೆ. ಆರಿಸಲ್ಪಟ್ಟವರಾಗಿರುವ ನಾವು ಮೂಲಮಾದರಿಯಾದ ಜೀವನವನ್ನು ನಡೆಸಿದಾಗ, ನಮ್ಮ ಮಕ್ಕಳ ಮೂಲಕ ಬರುವ ಸಂತತಿಯು ದೈವಭಕ್ತಿಯುಳ್ಳ ಸಂತತಿಯಾಗಿರುತ್ತದೆ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ.
- Mrs. ಬೇಬಿ ಕಾಮರಾಜ್
ಪ್ರಾರ್ಥನಾ ಅಂಶ:
ನಮ್ಮ ಕ್ಯಾಂಪಸ್ ನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಪ್ರತಿಯೊಬ್ಬ ವ್ಯಕ್ತಿಯು ದೇವರ ಪ್ರೀತಿಯನ್ನು ರುಚಿನೋಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482