Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 09.01.2024
Share:

By Village Missionary Movement

Tuesday, 09-Jan-2024

ಧೈನಂದಿನ ಧ್ಯಾನ(Kannada) – 09.01.2024

 

ಮಾತುಗಳೆಂಬ ಬೀಜ

 

"ಜೀವನಮರಣಗಳು ನಾಲಿಗೆಯ ವಶ, ವಚನಪ್ರಿಯರು ಅದರ ಫಲವನ್ನು ಅನುಭವಿಸುವರು" - ಜ್ಞಾನೋಕ್ತಿ. 18:21

 

ಒಬ್ಬ ಮಹಾನ್ ನ್ಯಾಯಾಧೀಶರ ಪತ್ನಿ ಬೋಧಕರಾದ ಡಿ. ಎಲ್ ಮೂಡಿಯವರನ್ನು ತನ್ನ ಮನೆಗೆ ಕರೆದು, "ಅಯ್ಯಾ, ನನ್ನ ಪತಿಗೆ ಸುವಾರ್ತೆಯನ್ನು ಬೋಧಿಸಿ ರಕ್ಷಣೆಯ ಮಾರ್ಗದಲ್ಲಿ ನಡೆಸಿರಿ" ಎಂದು ಕೇಳಿಕೊಂಡರು. ಬೋಧಕರಾದ ಮೂಡಿಯವರಿಗೆ ಉನ್ನತ ಶಿಕ್ಷಣ ಪಡೆದ ನ್ಯಾಯಾಧೀಶರೊಂದಿಗೆ ಹೇಗೆ ಮಾತನಾಡಬೇಕು ಎಂಬುದೇ ಗೊಂದಲ. ಅದಕ್ಕಾಗಿ ಉಪವಾಸ ಮಾಡಿ ಪ್ರಾರ್ಥಿಸಿದರು. ನಂತರ ಆ ಮನೆಗೆ ಬಂದು, "ನ್ಯಾಯಾಧೀಶರೇ, ನೀವು ರಕ್ಷಣೆ ಹೊಂದಿದ ನಂತರ ನನಗೆ ಹೇಳಿ ಕಳುಹಿಸಿ" ಎಂದು ಹೇಳಿ ಹೊರಟುಹೋದರು. ನ್ಯಾಯಾಧೀಶರ ಪತ್ನಿಗೆ ಭಾರಿ ನಿರಾಸೆ! ಇಡೀ ಸುವಾರ್ತೆಯನ್ನು ಸಾರದೆ ಒಂದೇ ಒಂದು ಮಾತು ಮಾತ್ರ ಹೇಳಿಬಿಟ್ಟು ಹೊರಟುಹೋದರು ಎಂದು ಕೋಪ ಬಂತು. ಆದರೆ ನಡೆದದ್ದೇನು ಗೊತ್ತಾ? ಬೋಧಕರ ಮಾತುಗಳು ನ್ಯಾಯಾಧೀಶರ ಹೃದಯದಲ್ಲಿ ಒಂದು ದೊಡ್ಡ ಸಂಚಲನವನ್ನು ತಂದಿತು. ಆ ದಿನವೇ ನ್ಯಾಯಾಧೀಶರು ರಕ್ಷಣೆಹೊಂದಿದರು. ಹಲ್ಲೇಲೂಯಾ!

 

ತಂದೆಯಾದ ದೇವರು ಭೂವಿುಯು ಕ್ರಮವಿಲ್ಲದೆಯೂ ಬರಿದಾಗಿಯೂ ಇರುವಾಗ ತನ್ನ ಮಾತುಗಳಿಂದ ಎಲ್ಲವನ್ನೂ ಸೃಷ್ಟಿಸಿದರು. ಎಲ್ಲಾ ಭೂಜಂತುಗಳನ್ನೂ ಸೃಷ್ಟಿಸಿ ಆದಾಮನು ಅವುಗಳಿಗೆ ಏನು ಹೆಸರಿಡುಸುತ್ತಾನೆಂದು ನೋಡಲು, ಅವುಗಳನ್ನು ಅವನ ಬಳಿಗೆ ತಂದರು ಎಂದು ಆದಿಕಾಂಡ ಎರಡನೇ ಅಧ್ಯಾಯದಲ್ಲಿ ಓದುತ್ತೇವೆ. ನಮ್ಮ ಬಾಯಿಂದ ಬರುವ ಪ್ರತಿಯೊಂದು ಮಾತುಗಳನ್ನು ದೇವರು ಕಿವಿಗೊಟ್ಟು ಆಲಿಸುವವರಾಗಿದ್ದಾರೆ. (ಮಲಾಕಿ 3:16)

 

ಯೇಸುವಿನ ಬಾಯಲ್ಲಿ ಮಾತುಗಳು ಎಷ್ಟು ಹರಿತವಾದ ಆಯುಧಗಳಾಗಿ ಹೊರಬಂದವು! "ಸುಮ್ಮನಿರು ಮೊರೆಯಬೇಡ" "ಲಾಜರನೇ ಹೊರಗೆ ಬಾ" "ನನಗೆ ಮನಸ್ಸುಂಟು ಶುದ್ಧವಾಗು" "ನೀನು ನಂಬಿದಂತೆ ನಿನಗಾಗಲಿ ಹೋಗು" ಎಂಬ ಮಾತುಗಳಲ್ಲಿ ಪವಿತ್ರಾತ್ಮನ ಬೆಂಕಿ ಇತ್ತು. ಅವರ ಮಾತುಗಳು ಪ್ರೀತಿಯುಳ್ಳವು. ಮನಮರಗುವಂತವು ಮತ್ತು ಕೃಪೆಯುಳ್ಳದ್ದೂ ಆಗಿತ್ತು. ಅದು ಅನೇಕರನ್ನು ಆದರಿಸುವಂಥದ್ದು, ಗಾಯ ಕಟ್ಟುವಂತದ್ದು, ಸ್ವಸ್ಥಗೊಳಿಸುವಂಥದ್ದೂ ಆಗಿತ್ತು.

 

ಪ್ರಿಯರೇ! ಹೊಲದಲ್ಲಿ ಬೀಜಗಳನ್ನು ಬಿತ್ತುವಾಗ, ಬೀಜದೊಳಗಿರುವ ಜೀವವು ತನ್ನಂತೆ ಇನ್ನೂ ಕೆಲವು ಬೀಜಗಳನ್ನು ಕೊಡುವಂತಹ ಮರಗಳನ್ನು, ಸಸ್ಯಗಳನ್ನು ಉತ್ಪಾದಿಸಿ ಫಲಗಳನ್ನು ನೀಡುವಂಥದ್ದಾಗಿ ಬೆಳೆಯುತ್ತದೆ. ಮನುಷ್ಯನು ತಾನು ಏನನ್ನು ಬಿತ್ತುತ್ತಾನೋ ಅದನ್ನೇ ಕೊಯ್ಯುತ್ತಾನೆ. ನಾವು ಮಾತನಾಡುವ ಮಾತುಗಳ ಮೂಲಕ, ಅನೇಕರನ್ನು ಯೇಸುವಿಗಾಗಿ ಆದಾಯ ಮಾಡಿಕೊಳ್ಳಲು ಸಾಧ್ಯ. ಆದ್ದರಿಂದ ನಕಾರಾತ್ಮಕ ವಿಷಯಗಳ ಬಗ್ಗೆ ಯೋಚಿಸುವುದು ಮತ್ತು ಮಾತನಾಡುವುದನ್ನು ತಪ್ಪಿಸೋಣ ಮತ್ತು ಸಕಾರಾತ್ಮಕ ವಿಷಯಗಳನ್ನು ನಂಬಿಕೆಯಿಂದ ಅರಿಕೆ ಮಾಡೋಣ. ನಮ್ಮ ನಾಲಿಗೆಯನ್ನು ಕರ್ತನಿಗೆ ಪ್ರತಿಷ್ಟೆ ಮಾಡೋಣ. "ಕರ್ತನೇ, ನಾನು ಮಾತನಾಡಿದರೆ, ಆ ಮಾತುಗಳು ಕಲ್ವಾರಿಯ ಪ್ರೀತಿಯಿಂದ ತುಂಬಿರಲಿ. ನಿಮ್ಮ ಚಿತ್ತದಂತೆಯೇ ಮಾತನಾಡಬೇಕು" ಎಂಬುದು ನಮ್ಮ ದೈನಂದಿನ ಪ್ರಾರ್ಥನೆಯಾಗಿ ಮಾರ್ಪಡಲಿ. ಈ ರೀತಿಯಾಗಿ ನಾವು ಮಾತುಗಳೆಂಬ ಬೀಜಗಳನ್ನು ಬಿತ್ತಿ ಆತ್ಮಗಳನ್ನು ಕೊಯ್ಯಲು ಸಿದ್ಧರಾಗೋಣ.

- Mrs. ಜೆಬಕಣಿ ಶೇಖರ್

 

ಪ್ರಾರ್ಥನಾ ಅಂಶ:

ಕಣ್ಮಣಿಯೇ ಕೇಳ್ ಎಂಬ Tv ಕಾರ್ಯಕ್ರಮದ ಮೂಲಕ ಭೇಟಿಯಾಗುವ ಮಕ್ಕಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş jojobet giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/