Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.01.2024 (Kids Special)
Share:

By Village Missionary Movement

Sunday, 07-Jan-2024

ಧೈನಂದಿನ ಧ್ಯಾನ(Kannada) – 07.01.2024 (Kids Special)

 

ಎಲ್ಲವೂ ಹೊಸದು

 

"ಇಗೋ, ಹೊಸ ಕಾರ್ಯವನ್ನು ಮಾಡುವೆನು,…" - ಯೆಶಾಯ 43:19

 

ಡಿಯರ್ ಪುಟಾಣಿಗಳೇ! ಹೇಗಿದ್ದೀರ. Happy new year. ಹೊಸದು ಅಂದ್ರೆ ನಿಮಗೆ ತುಂಬಾ ಇಷ್ಟ ಅಲ್ವಾ. ಹೊಸ ಉಡುಗೆ, ಹೊಸ ಬಳೆ, ಹೊಸ ಬೂಟುಗಳು ಹೀಗೆ ಹೊಸದು ನೋಡಿದ್ರೆ ನಿಮಗೆ ತುಂಬಾ ಸಂತೋಷ ಆಗುತ್ತೆ ತಾನೇ! ಹೌದು! ಯೇಸಪ್ಪ ಕೂಡ ನಮಗೆ ಎಲ್ಲವನ್ನು ಹೊಸದಾಗಿ, ಬೆಸ್ಟ್ ಆಗಿ ಕೊಡೋದಕ್ಕೇ ಬಯಸುತ್ತಾರೆ. ಯಾವುದನ್ನು ಬೇಕಾದರೂ ಹೊಸದಾಗಿ ಮಾಡಲು ಯೇಸಪ್ಪನಿಗೆ ಸಾಧ್ಯ. ಸರಿ, ಕಥೆಗೆ ಹೋಗೋಣ್ವಾ?

 

ರಮೇಶ್ 8ನೇ ತರಗತಿ ವಿದ್ಯಾರ್ಥಿ. ಅವನ ಕುಟುಂಬದಲ್ಲಿ ತುಂಬಾ ಕಷ್ಟ, ದೊಡ್ಡ ಸಮಸ್ಯೆ, ನೆಮ್ಮದಿ ಇಲ್ಲ. ತಾಯಿ ಯಾವಾಗಲೂ ತುಂಬಾ ಚಿಂತಿತರಾಗಿರುತ್ತಾರೆ. ಆಹಾರ ಕೂಡ ಹಳೆಯ ಅನ್ನ ಮತ್ತು ಸಾರು. ಬಟ್ಟೆ ಕೂಡ ಯಾರೋ ಕೊಡುವ ಹಳೆ ಬಟ್ಟೆಗಳು. ಮನೆಯ ಎಲ್ಲಾ ಪೀಠೋಪಕರಣಗಳು ಹಳೆಯದು ಮತ್ತು ಮುರಿದವುಗಳೇ.

 

ಒಂದು ದಿನ ಅವನು ತನ್ನ ಮನೆಯ ಹತ್ತಿರದ Sunday school ಗೆ ಹೋದನು. ಅದನ್ನು ನಡೆಸಿದ ಅಣ್ಣ ಹೇಳುದ್ರು "ಯೇಸಪ್ಪ ನಮ್ಮಲ್ಲಿ ಪ್ರತಿಯೊಬ್ಬರನ್ನು ಹೊಸ ಸೃಷ್ಟಿಯಾಗಿ ಮಾಡುತ್ತಾರೆ. ಆಗ ಹಳೆಯವುಗಳೆಲ್ಲವೂ ಮರೆಯಾಗುತ್ತವೆ, ಎಲ್ಲವೂ ಹೊಸದಾಗುತ್ತದೆ" ಎಂದು ಹೇಳಿದರು. "ನೀನು ಮಾತ್ರ ನಿನ್ನನ್ನು ಯೇಸಪ್ಪಾಗೆ ಕೊಟ್ಟು ಬಿಟ್ಟರೆ ಸಾಕು. ಯೇಸಪ್ಪ ನಿನ್ನನ್ನು ಹೊಸ ಸೃಷ್ಟಿಯಾಗಿ ಮಾರ್ಪಡಿಸಲು ಸಿದ್ಧರಾಗಿದ್ದಾರೆ" ಎಂದೂ ಹೇಳಿದರು. ಅವನು ಅದನ್ನು ಹಾಗೆಯೇ ನಂಬಿ ತನ್ನನ್ನು ಯೇಸಪ್ಪಾಗೆ ಒಪ್ಪಿಸಿಕೊಟ್ಟನು. ತುಂಬಾ ಸಂತೋಷವಾಗಿದ್ದನು. Sunday school ಮುಗಿದ ಮೇಲೆ ಹೊಸ ಪೆನ್ಸಿಲ್ ಬಾಕ್ಸ್, ಪೆನ್ನು ಮತ್ತು ರಬ್ಬರ್ ಕೊಟ್ಟರು. ಅದೇ ಅವನಿಗೆ ಮೊಟ್ಟ ಮೊದಲ ಹೊಸದು. 

 

ಅವನು ಸಂತೋಷದಿಂದ ಮನೆಗೆ ಹೋದನು. ಮನೆಯಲ್ಲಿ ಎಷ್ಟೋ ಹೊಸ ವಸ್ತುಗಳು ಇದ್ದವು, ಅವನಿಗೆ ನಂಬಲಾಗಲಿಲ್ಲ. ಅವೆಲ್ಲಾ ಹೇಗೆ ಬಂದವು ಎಂದು ಆಶ್ಚರ್ಯಪಟ್ಟನು. ಅವರ ತಾಯಿ ಕೆಲಸ ಮಾಡುತ್ತಿದ್ದ ಮನೆಯವರು ವಿದೇಶದಲ್ಲಿ ಸೆಟ್ಲ್ ಆಗಲಿದ್ದೇವೆ ಎಂದು ತಮ್ಮ ಮನೆಯಲ್ಲಿದ್ದ ಎಲ್ಲಾ ಹೊಸ ಸಾಮಾನುಗಳನ್ನು ಇವರ ತಾಯಿ ತುಂಬಾ ನಿಜಾಯಿತಿಯಿಂದ ಅಲ್ಲಿ ಕೆಲಸ ಮಾಡುತ್ತಿದ್ದದರಿಂದ Gift ಆಗಿ ಕೊಟ್ಟು ಬಿಟ್ಟರು. ಎಲ್ಲವು ಹೊಸದಾಯಿತು. Sunday school ನಲ್ಲಿ ನಡೆದದ್ದೆಲ್ಲವನ್ನು ತನ್ನ ತಾಯಿಗೆ ಹೇಳಿದನು. ಇಷ್ಟು ವರ್ಷಗಳಿಂದ ಸಿಗದ ಹೊಸ ಆಶೀರ್ವಾದವು ಯೇಸಪ್ಪನಿಂದ ದೊರೆತಿದೆ ಎಂದು ಭಾವಿಸಿ ಇಬ್ಬರು ಸಂತಸಪಟ್ಟರು. ತಮ್ಮ, ತಂಗಿ! ನಿಮ್ಮ ಜೀವನವು ಸಹ ಹೊಸದಾಗಿ ಬದಲಾಗಬೇಕೆಂದು ಬಯಸುತ್ತೀರಾ? ಯೇಸಪ್ಪನ ಕೈಗಳಲ್ಲಿ ನಿಮ್ಮನ್ನು ಒಪ್ಪಿಸಿಕೊಡಿ. ಅವರು ನಿಮ್ಮ ಜೀವನದಲ್ಲಿ ಹೊಸದನ್ನು ಮಾಡುತ್ತಾರೆ. Ok ಪುಟಾಣಿಗಳೇ, Bye!

- Sis. ಬ್ಯೂಲ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al