Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 04.01.2024
Share:

By Village Missionary Movement

Thursday, 04-Jan-2024

ಧೈನಂದಿನ ಧ್ಯಾನ(Kannada) – 04.01.2024

 

ಕ್ಷಮಿಸಿ

 

"ಒಬ್ಬರಿಗೊಬ್ಬರು ಉಪಕಾರಿಗಳಾಗಿಯೂ ಕರುಣೆಯುಳ್ಳವರಾಗಿಯೂ ಕ್ಷವಿುಸುವವರಾಗಿಯೂ ಇರ್ರಿ" - ಎಫೆಸ. 4:32

 

ಹ್ಯಾರಿ ಎಂಬವರು ತನಗೆ 15 ವರ್ಷವಿದ್ದಾಗ ನಡೆದ ಘಟನೆಯ ಬಗ್ಗೆ ಇಲ್ಲಿ ಬರೆಯುತ್ತಿದ್ದಾರೆ. ಭಾನುವಾರ ಆರಾಧನೆ ಮುಗಿಸಿ ಮನೆಗೆ ವಾಪಸಾಗುವಾಗ ಕಾರು ಓಡಿಸಲು ಅಪ್ಪನ ಬಳಿ ಅನುಮತಿ ಕೇಳಿದೆ. ಅವರೂ ಸಹ ಕಾರನ್ನು ಕೊಟ್ಟರು. ದುರದೃಷ್ಟವಶಾತ್ ನಾನು ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡದ್ದರಿಂದ ಕಾರನ್ನು ದೀಪದ ಕಂಬಕ್ಕೆ ಡಿಕ್ಕಿ ಹೊಡೆದುಬಿಟ್ಟೆ. ಇದರಿಂದಾಗಿ ನಮ್ಮ ಕಾರಿಗೆ 1000 ಡಾಲರ್ ಮೌಲ್ಯದ ಹಾನಿಯಾಯಿತು. ನನಗೆ ತುಂಬಾ ಭಯ ಮತ್ತು ನಾಚಿಕೆಯಾಯಿತು. ರೇಡಿಯೇಟರ್‌ನಿಂದ ನೀರು ಹಬೆಯಾಗಿ ಉಸ್ ಎಂಬ ಶಬ್ದದೊಂದಿಗೆ ಹೊರಬಂದಿತು. ನನ್ನ ತಂದೆ ನನ್ನ ಕಡೆಗೆ ತಿರುಗಿ, "ಪರವಾಗಿಲ್ಲ, ಸರಿ, ನಾನು ನಿನ್ನನ್ನು ಕ್ಷಮಿಸುತ್ತೇನೆ" ಎಂದು ಹೇಳಿದರು. ನಮ್ಮ ಕಾರನ್ನು ರಿಪೇರಿ ಮಾಡಲು ನನ್ನ ತಂದೆಗೆ ಸಾಕಷ್ಟು ಹಣ ಖರ್ಚಾದರೂ, ನನ್ನ ತಂದೆ ನನ್ನ ಜೀವನದಲ್ಲಿ ಒಮ್ಮೆಯೂ ಆ ಘಟನೆಯ ಬಗ್ಗೆ ಮಾತಾಡಿದ್ದೇ ಇಲ್ಲ. ನಾನು ಡ್ರೈವಿಂಗ್ ಲೈಸೆನ್ಸ್ ಪಡೆದ ನಂತರ ನನ್ನ ತಂದೆ ಸಂತೋಷದಿಂದ ನಮ್ಮ ಕಾರನ್ನು ಓಡಿಸಲು ಅವಕಾಶ ಮಾಡಿಕೊಟ್ಟರು. ಒಳ್ಳೆಯ ಗುಣವುಳ್ಳ ಒಂದು ತಂದೆಯ ಮೂಲಕ, ತಪ್ಪು ಮಾಡಿದ ಮಗನಿಗೆ ಕ್ಷಮೆಯ ಮಹತ್ವವನ್ನು ಅನುಭವಿಸಲು ಸಾಧ್ಯವಾಯಿತು. ಈ ಹ್ಯಾರಿ ಎಂಬವರು ಅಮೆರಿಕಾದ ಕ್ರೈಸ್ತ ಪ್ರಪಂಚದ ಪ್ರಸಿದ್ಧ ಬರಹಗಾರರಾಗಿದ್ದಾರೆ.

 

ಕ್ರಿಸ್ತನಲ್ಲಿ ಪ್ರಿಯರೇ! ಇಂದಿನ ಸತ್ಯವೇದ ಭಾಗದಲ್ಲಿ ಕ್ರಿಸ್ತನು ನಿಮ್ಮನ್ನು ಕ್ಷಮಿಸಿದಂತೆ ನೀವು ಸಹ ಒಬ್ಬರನ್ನೊಬ್ಬರು ಕ್ಷಮಿಸಬೇಕು ಎಂದು ನಾವು ಓದುತ್ತೇವೆ. ನಮ್ಮ ಜೀವನದಲ್ಲಿ ಅಡ್ಡಿಪಡಿಸುವವರನ್ನು ಮತ್ತು ನಮಗೆ ಹಾನಿ ಮಾಡಿದವರನ್ನು ಕ್ಷಮಿಸುವುದು ಸಹಜ ಸಂಗತಿಯಲ್ಲ. ಕಹಿ, ಕೋಪ ಮತ್ತು ಸೇಡು ಮನುಷ್ಯನ ಹೃದಯವನ್ನು ತುಂಬುತ್ತದೆ. ಇವುಗಳಲ್ಲಿ, ಇತರರನ್ನು ಕ್ಷಮಿಸುವುದು ನಮಗೆ ಅಸಾಧ್ಯವೆಂದು ತೋರುತ್ತದೆ. ನಾವು ಕ್ರಿಸ್ತನಲ್ಲಿ ಉತ್ತಮ ಅನುಭವವನ್ನು ಮತ್ತು ವೇದವಾಕ್ಯಗಳ ಬೆಳಕನ್ನು ಹೊಂದಿದ್ದರೆ ಮಾತ್ರವೇ ನಾವು ಇತರರನ್ನು ಸ್ವೀಕರಿಸಲು ಸಾಧ್ಯ. ದೇವರನ್ನು ನಿಜವಾಗಿಯೂ ಹಿಂಬಾಲಿಸುವವರು ಶಾರೀರಿಕ ಫಲಗಳಿಂದ ತುಂಬಿರಲು ಸಾಧ್ಯವಿಲ್ಲ. ಕ್ಷಮೆ ಎಂಬುದು ಒಂದು ದೈವೀಕ ಸ್ವಭಾವ. ಇದನ್ನು ಪಡೆದುಕೊಳ್ಳಲು ಹೃದಯದಲ್ಲಿ ಸ್ವಲ್ಪ ಕಠಿಣ ಪರಿಶ್ರಮ ಅಗತ್ಯ. ಇತರರನ್ನು ಕ್ಷಮಿಸಬೇಕು ಎಂಬ ಬೀಜವನ್ನು ಬಿತ್ತುತ್ತಲೇ ಇರಿ. ನೀವೂ ಕ್ಷಮಿಸಲ್ಪಡುವಿರಿ.

- Bro. ಜೇಕಬ್ ಶಂಕರ್

 

ಪ್ರಾರ್ಥನಾ ಅಂಶ:

ಹತ್ತು ಸಾವಿರ ಗ್ರಾಮಗಳಿಗೆ ಸುವಾರ್ತೆ ಪ್ರಕಟಿಸುವ ಯೋಜನೆಯಲ್ಲಿ ಭೇಟಿಯಾದ ಹಳ್ಳಿಗಳಲ್ಲಿ ಸತತವಾಗಿ ಸೇವೆ ಮುಂದುವರಿಸುವ ದೆಬೋರಗಳು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş jojobet giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/