By Village Missionary Movement
Wednesday, 03-Jan-2024ಧೈನಂದಿನ ಧ್ಯಾನ(Kannada) – 03.01.2024
ಲಾಭದಾಯಕ ಬೀಜ
"ಧಾನ್ಯವನ್ನು ಬಿಗಿಹಿಡಿಯುವವನ ಮೇಲೆ ಜನರ ಶಾಪ; ಮಾರುವವನ ತಲೆಯ ಮೇಲೆ ಆಶೀರ್ವಾದ" - ಜ್ಞಾನೋಕ್ತಿ. 11:26
ನನ್ನ ತಂದೆ ಕರುಪಯ್ಯ ಯೇಸುವನ್ನು ಅರಿಯದವರು. ಒಮ್ಮೆ ನಾವು ನಡೆಸುವ ಯುವ ಶಿಬಿರದ ವಾಲ್ ಪೋಸ್ಟರ್ ಅನ್ನು ನೋಡಿಬಿಟ್ಟು, ನನ್ನ ಬಳಿ ದೊಡ್ಡ ಸಮ್ಮೇಳನವನ್ನು ನಡೆಸುತ್ತೀಯಾ? ಎಂದರು. ನಾನು ಹೌದು ಎಂದಾಗ ಎಷ್ಟು ಜನ ಬರುತ್ತಾರೆ ಎಂದರು. ನಾನು 50 ಸಾವಿರ ಯೌವನಸ್ಥರು ಎಂದು ಹೇಳಿದೆ. ಇದರಿಂದ ನಮಗೆ ಲಾಭ ಇದೆಯಾ? ಎಂದರು. ನಾನು ಹೌದು ನಮಗೆ ಸಾಕಷ್ಟು ಲಾಭವಿದೆ ಎಂದು ಹೇಳಿದೆ.
ಇದರಂತೆಯೇ, ನಮ್ಮ ಅಗತ್ಯಗಳನ್ನು ಪೂರೈಸಿ, ನಮ್ಮನ್ನು ಕಾಪಾಡುವ ದೇವರಿಗೆ ನಮ್ಮಿಂದ ಲಾಭವಿದೆಯಾ? ಅಂದರೆ ಪ್ರಯೋಜನ ಇದೆಯಾ? ನಾವು ಅದರ ಬಗ್ಗೆ ಯೋಚಿಸಬೇಕಾಗಿದೆ. ನಾನು ದೇವರಿಗೆ ಏನು ಲಾಭವನ್ನು ಕೊಡಬಲ್ಲೆ ಎಂದು ಹೇಳುತ್ತೀರಾ? ನಾವು ಕ್ರೈಸ್ತ ಇತಿಹಾಸದಲ್ಲಿ ಹಿಂತಿರುಗಿ ನೋಡಿದರೆ, ಅನೇಕರು ತಮ್ಮ ಪ್ರತಿಭೆ, ಹಣ ಮತ್ತು ಸಮಯವನ್ನು ಬೀಜವಾಗಿ ನೀಡಿದ ಪರಿಣಾಮವಾಗಿ ನೀವು ಮತ್ತು ನಾನು ದೇವರನ್ನು ತಿಳಿದುಕೊಂಡೆವು. ರಾಕ್ಲ್ಯಾಂಡ್ ಎಂಬ ಬೀಜದಿಂದಾಗಿ ಶಿವಕಾಶಿಯಲ್ಲಿ ಅನೇಕ ಜನರು ದೇವರನ್ನು ಅಂಗೀಕರಿಸಿದರು. ಸಾರಾ ಟಕ್ಕರ್ ತನ್ನ ಹಣವನ್ನು ತಿರುನಲ್ವೇಲಿಯಲ್ಲಿ ನೆಟ್ಟ ಪರಿಣಾಮವೇ ಸಾರಾ ಟಕ್ಕರ್ ಶಾಲೆ ಮತ್ತು ಕಾಲೇಜು ಅಸ್ತಿತ್ವಕ್ಕೆ ಬಂದವು. ಇದರ ಮೂಲಕ ಕರ್ತನನ್ನು ಅರಿತುಕೊಂಡ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹೆಚ್ಚು. ಒಂದು ಟೊಮೆಟೊ ಹಣ್ಣಿನೊಳಗೆ ಎಷ್ಟು ಬೀಜಗಳಿವೆ! ಅದರಂತೆಯೇ ನಮ್ಮೊಳಗೂ ದೇವರ ಜೀವ, ಪ್ರತಿಭೆ, ಕೌಶಲ್ಯ, ಹಣ, ಸಮಯ ಮತ್ತು ಮಕ್ಕಳನ್ನು ಬೀಜಗಳಾಗಿ ಕೊಟ್ಟಿದ್ದಾರೆ. ದೇವರು ಕೊಟ್ಟಿರುವ ಬೀಜಗಳನ್ನು ಆತನಿಗಾಗಿ ಬಿತ್ತಿದಾಗ, ಹೆಚ್ಚು ಫಲವನ್ನು ಪಡೆಯಬಹುದು. ದೇವರ ರಾಜ್ಯಕ್ಕೆ ಲಾಭ ಕೊಡುವವರಾಗಿರೋಣ. ಆದರೆ ಅವುಗಳನ್ನು ಬಿತ್ತದಿದ್ದರೆ, ಅಂದರೆ ಬಳಸದಿದ್ದರೆ ಲಾಭವಿಲ್ಲ. ಅಪೊಸ್ತಲನಾದ ಪೌಲನು ದೇವರು ತನಗೆ ಕೊಟ್ಟದ್ದನ್ನೆಲ್ಲಾ ದೇವರಿಗಾಗಿ ಬಿತ್ತಿ, ತನಗೆ ಲಾಭವೆಂದು ತೋರುವದನ್ನು ನಷ್ಟವೆಂದೆಣಿಸಿ ದೇವರ ರಾಜ್ಯಕ್ಕೆ ಹೆಚ್ಚಿನ ಲಾಭವನ್ನು ತಂದನು. ನಿಮ್ಮ ಬೀಜಗಳನ್ನು ನೀವು ಏನು ಮಾಡುತ್ತೀರಿ? ನೀವು ಫಲ ನೀಡಲು ಬಿತ್ತಿದ್ದೀರಾ? ಅಥವಾ, ಸ್ವಾರ್ಥವಾಗಿ ಕಟ್ಟಿ ಇಡುತ್ತೀರಾ? ನಿಮ್ಮ ಸಮಯ, ಪ್ರತಿಭೆ, ಕೌಶಲ್ಯ, ಜೀವನ, ಹಣ ಮತ್ತು ಮಕ್ಕಳನ್ನು ದೇವರಿಗಾಗಿ ಬಿತ್ತಿದಾಗ, ನೀವು ಪೂರ್ಣ ಫಲವನ್ನು ಕೊಯ್ಯುತ್ತೀರಿ. ಪರಲೋಕವು ಸಂತೋಷಿಸುತ್ತದೆ; ದೇವರು ನಿಮ್ಮಲ್ಲಿ ಮಹಿಮೆ ಹೊಂದುತ್ತಾರೆ. ಧಾನ್ಯವನ್ನು ಬಿಗಿಹಿಡಿಯುವವನ ಮೇಲೆ ಜನರ ಶಾಪ ಎಂದು ಮೇಲ್ಕಂಡ ವಾಕ್ಯದಲ್ಲಿ ಓದುತ್ತೇವೆ. ಈ ವರ್ಷವನ್ನು ಹೊರಟು ಹೋಗಿ ಕಾರ್ಯನಿರ್ವಹಿಸುವ ವರ್ಷವಾಗಿ ದೇವರು ಕೊಟ್ಟಿದ್ದಾರೆ. ದೇವರು ನಮಗೆ ಕೊಟ್ಟಿರುವ ಕಾರ್ಯಗಳನ್ನು ನಮ್ಮೊಳಗೆ ಸುಮ್ಮನೆ ಇಟ್ಟುಕೊಳ್ಳದೆ ಬಿತ್ತಲು ಹೊರಡೋಣ. ಮೊದಲ ಹೆಜ್ಜೆ ಇಡೋಣ. ದೇವರು ಆಶೀರ್ವದಿಸುತ್ತಾರೆ.
- K. ಡೇವಿಡ್ ಗಣೇಶನ್
ಪ್ರಾರ್ಥನಾ ಅಂಶ:
ದೆಬೋರಾಳ್ ಗುಂಪುಗಳ ಮೂಲಕ ಭೇಟಿಯಾಗುವ ಹಳ್ಳಿಗಳಲ್ಲಿ ದೇವರು ದೊಡ್ಡ ಉಜ್ಜೀವನವನ್ನು ಕೊಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482