Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 02.01.2024
Share:

By Village Missionary Movement

Tuesday, 02-Jan-2024

ಧೈನಂದಿನ ಧ್ಯಾನ(Kannada) – 02.01.2024

 

ಹೊಸ ವರ್ಷ

 

"...ಯಾವನಾದರೂ ಕ್ರಿಸ್ತನಲ್ಲಿದ್ದರೆ ಅವನು ನೂತನಸೃಷ್ಟಿಯಾದನು." - 2 ಕೊರಿಂಥ. 5:17

 

ಹೊಸ ದಾಂಪತ್ಯ ಜೀವನ, ಮಗುವಿನ ಜನನ, ಹೊಸ ಮನೆ, ಹೊಸ ವಾಹನ, ಹೊಸ ಆಭರಣಗಳು, ಹೊಸ ಬಟ್ಟೆಗಳಂತಹ ಜೀವನದ ಹೊಸ ಕಾರ್ಯಗಳು ಮತ್ತು ಜೀವನದಲ್ಲಿನ ವಸ್ತುಗಳು ನಮಗೆಲ್ಲರಿಗೂ ಸಂತೋಷ ಮತ್ತು ನಿರೀಕ್ಷೆಯನ್ನು ಉಂಟು ಮಾಡುತ್ತವೆ. ಪ್ರತಿ ಹೊಸ ವರ್ಷವೂ ಇದಕ್ಕೆ ಹೊರತಾಗಿಲ್ಲ. ಆದರೆ ಇಂದಿನ ಧ್ಯಾನವು ಈ ಹೊಸ ವರ್ಷದಲ್ಲಿ ನಮ್ಮ ಬಗ್ಗೆ ದೇವರ ಸಂತೋಷ ಮತ್ತು ನಿರೀಕ್ಷೆ ಏನೆಂಬುದೇ.

 

ಪ್ರತಿಯೊಬ್ಬ ಮನುಷ್ಯನ ಪಾಪಗಳು ಯೇಸುವಿನ ರಕ್ತದಿಂದ ತೊಳೆಯಲ್ಪಟ್ಟು ಅವನ ಆತ್ಮ ರಕ್ಷಣೆಹೊಂದಬೇಕು. ಇದೇ ಪುನರ್ಜನ್ಮ. ಪುನರ್ಜನ್ಮದ ಮೂಲಕ ಹಳೆಯ ಪಾಪದ ಜೀವನವು ಹೋಗಿ ಪ್ರತಿಯೊಬ್ಬರೂ ಹೊಸ ಸೃಷ್ಟಿಯಾಗಬೇಕು ಎಂಬುದೇ ದೇವರ ನಿರೀಕ್ಷೆಯಾಗಿದೆ. ನೀವೊಂದು ಹೊಸ ಸೃಷ್ಟಿಯಾಗಿ ಹೊಸವರ್ಷದಲ್ಲಿ ಪ್ರವೇಶಿಸಬೇಕು. ಈಗಲೇ ನೀವು ಪುನರ್ಜನ್ಮ ಹೊಂದಿ ಹೊಸಸೃಷ್ಟಿಯಾಗಿ ಮಾರ್ಪಡಿರಿ. ಈಗಾಗಲೇ ಪುನರ್ಜನ್ಮ ಹೊಂದಿದವರು, ಕಳೆದ ದಿನಗಳಲ್ಲಿ ಏರ್ಪಟ್ಟ ಆಧ್ಯಾತ್ಮಿಕ ವೈಫಲ್ಯಗಳನ್ನು ಕರ್ತನಿಗೆ ಒಪ್ಪಿಸಿಕೊಟ್ಟು ತಮ್ಮನ್ನು ನವೀಕರಿಸಿಕೊಳ್ಳಬೇಕು. ಹೇಗೆ? ಕೆಲವು ದಿನಗಳವರೆಗೆ ಕರ್ತನ ಪಾದದಲ್ಲಿ ಕಾದಿದ್ದು, ನಮ್ಮನ್ನು ಪರಿಶುದ್ಧಗೊಳಿಸಿ ಹೊಸ ಅಭಿಷೇಕ ಮತ್ತು ಹೊಸ ಶಕ್ತಿಯನ್ನು ಪಡೆಯಬೇಕು. ಸತ್ಯವೇದ ಓದುವಿಕೆ, ಪ್ರಾರ್ಥನೆ, ಆರಾಧನೆ ಮತ್ತು ಸೇವೆ ಇವುಗಳಲ್ಲಿ ಕಾಣಲ್ಪಟ್ಟ ಸೋಮಾರಿತನವನ್ನು ತೊಡೆದುಹಾಕಲು ನಿರ್ಧರಿಸಬೇಕು. ಹೀಗೆ, ಕ್ರಿಸ್ತನಲ್ಲಿರುವವರಿಗೆ, ಹಳೆಯ ಪಾಪಗಳು ಮತ್ತು ವೈಫಲ್ಯಗಳು ಎಲ್ಲಾ ಹೋಗಿ, ಎಲ್ಲವು ಹೊಸದಾಗುತ್ತದೆ. ಹಿಂದಿನವುಗಳನ್ನು ನೆನಸಬೇಡಿ ಮತ್ತು ಚಿಂತಿಸಬೇಡಿ. ಕರ್ತನು ಎಲ್ಲರ ಜೀವನದಲ್ಲೂ ಹೊಸ ಕಾರ್ಯಗಳನ್ನು ಮಾಡುತ್ತಾರೆ. ಲೌಕಿಕ ವ್ಯವಹಾರಗಳ ಜವಾಬ್ದಾರಿಯನ್ನು ಸಹ ತೆಗೆದುಕೊಳ್ಳುತ್ತಾರೆ.

 

ಹೊಸ ವರ್ಷದಲ್ಲಿ ಹೊಸ ವಾಗ್ದಾನಗಳನ್ನು ಪಡೆದು ಅದಕ್ಕೆ ತಕ್ಕಂತೆ ಆಶೀರ್ವಾದ ಪಡೆಯಬೇಕೆಂದು ಎಲ್ಲರೂ ಬಯಸುವುದರಲ್ಲಿ ತಪ್ಪೇನಿಲ್ಲ. ಎಲ್ಲಾ ವಾಗ್ದಾನಗಳಲ್ಲಿ ಪ್ರಮುಖವಾದದ್ದು ನಿಮಗೆ ನಿತ್ಯಜೀವವನ್ನು ಕೊಡುತ್ತೇನೆ ಎಂಬುದೇ, ಅವರು ನಮಗೆ ಮಾಡಿದ ವಾಗ್ದಾನ! ಪ್ರತಿ ವರ್ಷದ ಆರಂಭವು ನಮ್ಮ ಜೀವನದ ಪ್ರಯಾಣದ ಅಂತ್ಯವು ಸಮೀಪಿಸುತ್ತಿರುವುದನ್ನು ಸೂಚಿಸುತ್ತದೆ. ಆದ್ದರಿಂದ, ದೇವರು ನಮಗೆ ಕೊಡುವ ಕೃಪೆಯ ಕಾಲದಲ್ಲಿ ದೇವರು ಕೊಟ್ಟ ಈ ವಾಗ್ದಾನವನ್ನು ಸ್ವತಂತ್ರಿಸಿಕೊಳ್ಳಲು ತೀವ್ರತೆಯನ್ನು ತೋರಿಸೋಣ.

ಈ ವಾಗ್ದಾನದ ಪ್ರಕಾರ ನಮ್ಮ ಪ್ರೀತಿಪಾತ್ರರನ್ನು, ನಮ್ಮ ದೇಶವಾಸಿಗಳನ್ನು ಮತ್ತು ಜಗತ್ತನ್ನು ಆಶೀರ್ವದಿಸುವಂತೆ ಪ್ರಾರ್ಥಿಸಲು, ಪ್ರಯತ್ನಿಸಲು ತೀವ್ರತೆಯನ್ನು ತೋರಿಸೋಣ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು!

- Mrs. ಗೀತಾ ರಿಚರ್ಡ್

 

ಪ್ರಾರ್ಥನಾ ಅಂಶ:

ಹತ್ತು ಸಾವಿರ ಗ್ರಾಮಗಳಿಗೆ ಸುವಾರ್ತೆಯನ್ನು ಪ್ರಕಟಿಸುವ ಯೋಜನೆಯ ಮೂಲಕ ಭೇಟಿಮಾಡಿದ ಗ್ರಾಮಗಳಲ್ಲಿ ನಡೆಯುವಂತಹ ಅನುಸರಣಾ ಕಾರ್ಯಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş