Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 31.12.2023 (Kids Special)
Share:

By Village Missionary Movement

Sunday, 31-Dec-2023

ಧೈನಂದಿನ ಧ್ಯಾನ(Kannada) – 31.12.2023 (Kids Special)

 

GOOD NEWS

 

"ಕ್ರಿಸ್ತ ಯೇಸು ಪಾಪಿಗಳನ್ನು ರಕ್ಷಿಸುವದಕ್ಕೋಸ್ಕರ ಈ ಲೋಕಕ್ಕೆ ಬಂದನು . . .;" - 1 ತಿಮೊಥೆಯ 1:15

 

ಜೋಶುವಾ ಮತ್ತು ಜೋಸೆಫ್ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು ಮತ್ತು ಅಲಗಾಪುರಿ ಎಂಬ ಪಟ್ಟಣದಲ್ಲಿ ವಾಸಿಸುತ್ತಿದ್ದರು. ಯಾರನ್ನು ಕಂಡರೂ ಯೇಸುವಿನ ಕುರಿತು ಮಾತನಾಡುವುದು ಯೆಹೋಶುವನ ಅಭ್ಯಾಸವಾಗಿತ್ತು. ತನ್ನ ಬಳಿ ಯಾರಾದರೂ "ಸಮಯ ಎಷ್ಟು?" ಎಂದು ಕೇಳಿದ ಕ್ಷಣಮಾತ್ರದಲ್ಲೇ ಸುವಾರ್ತೆ ಹೇಳಿ ಬಿಡುತ್ತಾನೆ. ಅವನ ಸ್ನೇಹಿತ ಜೋಸೆಫ್ ಚೆನ್ನಾಗಿ ಹಾಡು ಹಾಡುತ್ತಾನೆ, ಚರ್ಚ್‌ನಲ್ಲಿ ತುಂಬಾ ಸಕ್ರಿಯನಾಗಿರುತ್ತಾನೆ ಮತ್ತು ಬೋಧಕರಿಂದ ಒಳ್ಳೆಯ ಹೆಸರನ್ನು ಪಡೆಯಬೇಕೆಂದೇ ಕೆಲಸಗಳನ್ನು ಮಾಡುತ್ತಾನೆ. ಸುವಾರ್ತೆ ಹೇಳಬೇಕು ಕಣೋ ಎಂದು ಜೋಶುವಾ ಇವನ ಬಳಿ ಹೇಳಿದರೆ ಇರ್ಲಿ ಬಿಡೋ, ಆಮೇಲೆ ನೋಡ್ಕೊಳೋಣ ಎಂದು ಹೇಳಿಬಿಡುತ್ತಿದ್ದ. ಹೀಗೆಯೇ ದಿನಗಳು ಕಳೆದವು.

 

ಒಂದು ದಿನ ಇಬ್ಬರೂ ಬಸ್ಸಿಗಾಗಿ ಕಾಯುತ್ತಿರುವಾಗ ಅಪಘಾತದಲ್ಲಿ ಸಾವನ್ನಪ್ಪಿದರು. ನಂತರ ಅವರಿಬ್ಬರನ್ನೂ ದೇವದೂತರು ಮೇಲಕ್ಕೆ ಎತ್ತಿಕೊಂಡು ಹೋದರು. ಅಲ್ಲಿ ಒಬ್ಬರು, ಒಂದು ದೊಡ್ಡ Gift ಅನ್ನು ಎತ್ತಿಕೊಂಡು ಬಂದರು. ಆಗ ಜೋಸೆಫ್ ಅಯ್ ಈ Gift ನನಗೇನೆ, ಯಾಕಂದ್ರೆ ನಿನ್ನೆ ಕೂಡ ನಾನು ಹೊಸದೊಂದು ಹಾಡು ಬರೆದಿದ್ದೇನೆ ಎಂದು ಮನದಲ್ಲೇ ಅಂದುಕೊಂಡ. ಅವರು ಆ Gift ಅನ್ನು ಜೋಶುವನಿಗೆ ಕೊಟ್ಟರು.

 

ಜೋಸೆಫ್ ನ ಮುಖ ಬಾಡಿಹೋಯಿತು. ಅವರ ಬಳಿ ಯಾಕೆ ಇವನಿಗೆ ಕೊಟ್ರಿ. ನಾನೇ ಸಭೆಯಲ್ಲಿ ಸಕ್ರಿಯನಾಗಿರೋದು. ಹೊಸ ಹೊಸ ಹಾಡುಗಳನ್ನೆಲ್ಲಾ ಹಾಡೋದು, ಬೋಧಕರು ಸಹ ನನ್ನನ್ನು ಹೊಗಳಿದರಲ್ಲಾ ಎಂದು ಹೇಳಿದನು. ಅವರೋ ನಿನ್ನ ಹಿಂದೆ ತಿರುಗಿ ನೋಡು ಎಂದರು. ಇವನ ಹಿಂದೆ ಯಾರೂ ಇರಲಿಲ್ಲ. ಆದರೆ ಜೋಶುವನ ಹಿಂದೆ ಒಂದು ದೊಡ್ಡ ಗುಂಪೇ ಇತ್ತು. ಇವರೆಲ್ಲರೂ ಜೋಶುವಾ ಸುವಾರ್ತೆ ಸಾರುವ ಮೂಲಕ ರಕ್ಷಿಸಲ್ಪಟ್ಟವರು. ಯೇಸುವಿಗಾಗಿ ಬೆಲೆಕಟ್ಟಲಾಗದಂತಹ ಮುತ್ತುಗಳನ್ನು ತೆಗೆದುಕೊಂಡು ಬಂದಿದ್ದು ಜೋಶುವನೇ ಎಂದು ಹೇಳಿ, ಇವನನ್ನು ನರಕಕ್ಕೆ ಕರೆದುಕೊಂಡು ಹೋಗುವಾಗ, ಅವನು ಕನಸಿನಿಂದ ಎಚ್ಚರಗೊಂಡನು. ಜೋಸೆಫ್ ಆ ದಿನವೇ ಅಳುತ್ತಾ ಕರ್ತನ ಬಳಿ ಪ್ರಾರ್ಥಿಸಿ ಸುವಾರ್ತೆಯನ್ನು ಸಾರಲು ತನ್ನನ್ನು ಒಪ್ಪಿಸಿಕೊಟ್ಟನು.

 

ಏನು ಪುಟಾಣಿಗಳೇ, ನೀವು ಕೂಡ ನಿಮ್ಮ friends ಮತ್ತು ಪರಿಚಯಸ್ಥರಿಗೆ ಸುವಾರ್ತೆ ಹೇಳಿ, ಪಾಪದಲ್ಲಿರುವ ಆತ್ಮವನ್ನು ನೇರವಾಗಿ ಪರಲೋಕದ ಕಡೆಗೆ ತಿರುಗಿಸುತ್ತೀರಾ? ಮತ್ತೊಬ್ಬರಿಗೆ ಸುವಾರ್ತೆ ಸಾರುವುದು ನಮ್ಮ ಮೇಲೆ ಬಿದ್ದಿರುವ ಕರ್ತವ್ಯವಾಗಿದೆ. ಖಂಡಿತವಾಗಿ ನಾವೇ ಅದನ್ನು ಮಾಡಬೇಕು. ಆದರೆ ಅದಕ್ಕೆ ಹೆಚ್ಚಿನ ಪ್ರತಿಫಲ ಉಂಟು. Ok.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al