By Village Missionary Movement
Saturday, 30-Dec-2023ಧೈನಂದಿನ ಧ್ಯಾನ(Kannada) – 30.12.2023
ಕೃತಜ್ಞತೆಯ ಹೃದಯ
"…ಕೃತಜ್ಞತೆಯುಳ್ಳವರಾಗಿರ್ರಿ" - ಕೊಲೊಸ್ಸೆ 3:15
ವಿಯೆಟ್ನಾಂನಲ್ಲಿ ನಡೆದ ಯುದ್ಧದಲ್ಲಿ, ಸೈನ್ಯದ ಕಮಾಂಡರ್ ತನ್ನ ಕೆಳಗೆ ಕೆಲಸ ಮಾಡುತ್ತಿದ್ದ ಯುದ್ಧ ವೀರನನ್ನು ಉಳಿಸಲು ಪ್ರಯತ್ನಿಸಿದರ ನಿಮಿತ್ತವಾಗಿ ಅವರು ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದರು. ಈ ಬಗ್ಗೆ ಅವರ ಪೋಷಕರಿಗೆ ತಿಳಿಸಲಾಯಿತು ಮತ್ತು ಅವರು ಅವರ ಜ್ಞಾಪಕಾರ್ಥವಾಗಿ ಒಂದು ಕೂಟವನ್ನು ಏರ್ಪಡಿಸಿದ್ದರು. ಕೂಟಕ್ಕೆ ಆ ಯುದ್ಧವೀರನನ್ನೂ ಆಹ್ವಾನಿಸಿದ್ದರು. ಅವನು ಬಹಳ ತಡವಾಗಿ ಚೆನ್ನಾಗಿ ಕುಡಿದು ಬಂದು, ಅಲ್ಲಿದ್ದ ಊಟವನ್ನು ಅನಾಗರೀಕವಾಗಿ ಸೇವಿಸಿದ್ದು ಮಾತ್ರವಲ್ಲದೆ ತನ್ನನ್ನು ಕಾಪಾಡಿದ ನಾಯಕನಿಗೆ ತನ್ನ ಪರವಾಗಿ ಒಂದು ಕೃತಜ್ಞತೆಯನ್ನೂ ಹೇಳಲಿಲ್ಲ. ಅಷ್ಟೇ ಅಲ್ಲ, ಊಟ ಮುಗಿಸಿದ ನಂತರ ತನ್ನನ್ನು ಆಹ್ವಾನಿಸಿದ್ದ ಆ ಕುಟುಂಬದವರಿಗೂ ಒಂದು ಕೃತಜ್ಞತೆ ಹೇಳದೇ ಆ ಸ್ಥಳದಿಂದ ತೆರಳಿದನು. ಅವನು ಹೋದ ಕೂಡಲೇ ಆ ಮುಖ್ಯಾಧಿಕಾರಿಯ ತಾಯಿ ತಮ್ಮ ಅಳಲು ತೋಡಿಕೊಳ್ಳುತ್ತಾ "ಈ ಕೃತಜ್ಞತೆಯಿಲ್ಲದ ವ್ಯಕ್ತಿಗಾಗಿಯಾ ನನ್ನ ಮಗ ಪ್ರಾಣ ಕೊಟ್ಟನು" ಎಂದು ಅತ್ತು ಗೋಳಾಡಿದರು.
ಇದರಂತೆಯೇ ಸತ್ಯವೇದದಲ್ಲಿ ಕೃತಜ್ಞತೆ ಇಲ್ಲದ ಮನುಷ್ಯರ ಬಗ್ಗೆ ಬರೆಯಲಾಗಿದೆ. ರಕ್ಷಕನಾದ ಯೇಸು ಕ್ರಿಸ್ತನು ಒಂದು ಹಳ್ಳಿಯನ್ನು ಪ್ರವೇಶಿಸಿದಾಗ, ಹತ್ತು ಕುಷ್ಠರೋಗಿಗಳು ಆತನ ಎದುರಿಗೆ ಬಂದು ದೂರದಲ್ಲಿ ನಿಂತು "ನಮ್ಮ ಮೇಲೆ ದಯವಿಡು" ಎಂದು ಕೂಗಿಹೇಳಿದರು. ಯೇಸು ಆ ಹತ್ತು ಮಂದಿಯನ್ನೂ ಗುಣಪಡಿಸಿದರು. ತಾವು ಗುಣವಾದದ್ದನ್ನು ಯಾಜಕರ ಬಳಿ ತೋರಿಸಿದವರಲ್ಲಿ ಒಬ್ಬನು ಮಾತ್ರವೇ ಹಿಂತಿರುಗಿ ಬಂದು ಅಡ್ಡ ಬಿದ್ದು ಆತನಿಗೆ ಉಪಕಾರ ಸ್ತುತಿ ಮಾಡಿದನು. ಆಗ ಯೇಸು ಹತ್ತು ಮಂದಿ ಶುದ್ಧರಾದರಲ್ಲವೇ! ಮಿಕ್ಕ ಒಂಭತ್ತು ಮಂದಿ ಎಲ್ಲಿ? ಎಂದರು. ಹೌದು, ದೇವರು ನಮ್ಮ ಬಳಿ ಕೃತಜ್ಞತೆಯ ಹೃದಯವನ್ನು ಎದುರುನೋಡುತ್ತಿದ್ದಾರೆ.
ಪ್ರಿಯರೇ! ವರ್ಷದ ಅಂತ್ಯಕ್ಕೆ ಬಂದಿರುವ ನಮ್ಮಲ್ಲಿ ಎಷ್ಟು ಮಂದಿ ಕೃತಜ್ಞತೆಯ ಹೃದಯದಿಂದ ಇದ್ದೇವೆ? ಈ ವರ್ಷದ ಆರಂಭದಲ್ಲಿ ಎಷ್ಟು ಜನರು ನಮ್ಮೊಂದಿಗೆ ಓಡಲು ಪ್ರಾರಂಭಿಸಿದರು? ಇಂದು ಅನೇಕರು ಜೀವಂತವಾಗಿಲ್ಲ. ಈ ಕ್ಷಣದವರೆಗೂ ನಮ್ಮನ್ನು ಜೀವಂತವಾಗಿಟ್ಟಿದ್ದಕ್ಕಾಗಿ ನೀವು ದೇವರಿಗೆ ಕೃತಜ್ಞತೆ ಹೇಳಿದ್ದೀರಾ? ರಜಾ ದಿನಗಳಲ್ಲಿ ಕುಟುಂಬವಾಗಿ ಪ್ರವಾಸಕ್ಕೆ ಹೋಗಲು ಯೋಜನೆ ಹಾಕುವ ನಾವು ಕುಟುಂಬವಾಗಿ ಕುಳಿತು, ಸಮಯ ತೆಗೆದುಕೊಂಡು ಅವರಿಗೆ ಕೃತಜ್ಞತೆ ಹೇಳಲು ಯೋಜನೆ ಹಾಕೋಣವಾ ? ಹಲವಾರು ಆಪತ್ತುಗಳಿಂದ, ಅವಘಡಗಳಿಂದ, ಕೊರತೆಗಳಿಂದ ಮತ್ತು ರೋಗಗಳಿಂದ ನಮ್ಮನ್ನು ರಕ್ಷಿಸಿದ ಮತ್ತು ಈ ಕ್ಷಣದವರೆಗೂ ನಮ್ಮನ್ನು ರಕ್ಷಿಸಿದ ಯೇಸು ಮಹಾರಾಜನಿಗೆ ಕೃತಜ್ಞತೆ ಹೇಳುತ್ತಲೇ ಇರೋಣ. ಹಲ್ಲೇಲೂಯಾ!
- Mrs. ಶಕ್ತಿ ಶಂಕರ್ ರಾಜ್
ಪ್ರಾರ್ಥನಾ ಅಂಶ:
ತಮಿಳುನಾಡು ಮತ್ತು ಕರ್ನಾಟಕ ರಾಜ್ಯ ಸೇವೆಗಳಿಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482