Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 29.12.2023
Share:

By Village Missionary Movement

Friday, 29-Dec-2023

ಧೈನಂದಿನ ಧ್ಯಾನ(Kannada) – 29.12.2023

 

ಓಟ ಪಂದ್ಯ

 

"…ನೀವೂ ಬಿರುದನ್ನು ಪಡಕೊಳ್ಳಬೇಕೆಂತಲೇ ಓಡಿರಿ." - 1 ಕೊರಿಂಥ 9:24

 

ಉಕ್ರೇನ್ ಗೆ ಸೇರಿದ "ಲಾರಿಸಾ ವೆಟ್ರಿನಿನಾ" ದಾಖಲೆಯ 18 ಒಲಿಂಪಿಕ್ ಪದಕಗಳನ್ನು ಪಡೆದಿದ್ದಾರೆ. ಅವರು 1956, 1960 ಮತ್ತು 1964 ರ ಒಲಂಪಿಕ್ ಕ್ರೀಡಾಕೂಟಗಳನ್ನು ಗೆಲ್ಲುವ ಮೂಲಕ ಆ ಪದಕಗಳನ್ನು ಗಳಿಸಿದರು. ನಂತರ 2012ರಲ್ಲಿ ಲಂಡನ್ ಗೇಮ್ಸ್‌ನಲ್ಲಿ 4200 ಮೀಟರ್ಸ್ (ಫ್ರೀಸ್ಟೈಲ್) ರಿಲೇಯಲ್ಲಿ ಮೈಕೆಲ್ ಬೆಲ್ಪ್ 19ನೇ ಚಿನ್ನದ ಪದಕ ಗೆದ್ದಾಗ ಒಲಿಂಪಿಕ್ಸ್‌ನಲ್ಲಿ 48 ವರ್ಷಗಳ ಕಾಲ ಇದ್ದ ದಾಖಲೆ ಮುರಿದುಬಿತ್ತು. "ಇತಿಹಾಸದಲ್ಲಿ ವೆಟ್ರಿನಿನಾ ಮರೆಯಾದಳು" ಎಂದು ಇಂಟರ್ನ್ಯಾಷನಲ್ ಜಿಮ್ನಾಸ್ಟಿಕ್ಸ್ ಪತ್ರಿಕೆಯ ಪ್ರಕಾಶಕರು ಹೇಳಿದರು. ಹೌದು, ಹೊಸ ದಾಖಲೆಗಳನ್ನು ಮಾಡುವಾಗ ಹಳೆಯ ದಾಖಲೆಗಳು ಮರೆಯಾಗುತ್ತವೆ.

 

ಕೆಲವೊಮ್ಮೆ ಕಠಿಣ ಪರಿಶ್ರಮವು ಮರೆಯಾಗುತ್ತದೆ ಎಂದು ಅಪೊಸ್ತಲನಾದ ಪೌಲನು ನಮಗೆ ನೆನಪಿಸುತ್ತಾರೆ. ನಾಶವಾಗುವ ಪದಕಗಳನ್ನು ಗಳಿಸಲು ಕ್ರೀಡಾಪಟುಗಳು ತಮ್ಮ ದೇಹವನ್ನು ಕಠಿಣ ಶಿಸ್ತಿನ ತರಬೇತಿಗೆ ಒಳಪಡಿಸುತ್ತಾರೆ. ಆದರೆ ಅವರ ಕೌಶಲ್ಯ ಮತ್ತು ಅವರು ಗೆದ್ದ ಪದಕಗಳು ಕಾಲಾವಧಿಯಲ್ಲಿ ಮರೆಯಲ್ಪಡುತ್ತವೆ. ಪ್ರಪಂಚದೊಂದಿಗೆ ನಾಶವಾಗುವ ಪದಕಕ್ಕಾಗಿ ಕ್ರೀಡಾಪಟುಗಳು ತಮ್ಮ ದೇಹದ ಭಾಗಗಳನ್ನು ಅಳತೆಗೂ ಮೀರಿ ನಿಯಂತ್ರಣದಲ್ಲಿಡಲು ಎಷ್ಟು ಪ್ರಯಾಸಪಡುತ್ತಾರೆ? ಸತ್ಯವೇದದಲ್ಲಿ ನೋಡುವಾಗ ಬಾಡಿಹೋಗದ ಜಯಮಾಲಿಕೆಯನ್ನು ನಮ್ಮ ಮುಂದೆ ಇಡಲಾಗಿದೆ ಎಂದು ಬರೆದಿರುವುದನ್ನು ಪತ್ರಿಕೆಗಳಲ್ಲಿ ಓದುತ್ತೇವೆ. ಹಾಗಾಗಿ ನಮ್ಮ ಓಟ, ನಮ್ಮ ಪ್ರಯಾಸ ಬಹಳ ಮುಖ್ಯ ಎಂದು ಪರಿಗಣಿಸಬೇಕು.

 

ಕ್ರಿಸ್ತನಲ್ಲಿ ಪ್ರಿಯರೇ, ಹಳೆಯ ವರ್ಷವು ಮುಗಿದಿದೆ ಮತ್ತು ನಾವು ಹೊಸ ವರ್ಷವನ್ನು ಪ್ರವೇಶಿಸಲು ಸಿದ್ಧರಾಗಿದ್ದೇವೆ. ಅದೇ ಸಮಯದಲ್ಲಿ, ನಾವು ಈಗ ಓಡುತ್ತಿರುವ ನಮ್ಮ ಆಧ್ಯಾತ್ಮಿಕ ಓಟದಲ್ಲಿ ಪರಲೋಕಕ್ಕೆ ಹೋಗಿ ತಲುಪುವವರೆಗೆ ನಾವು ಸತತವಾಗಿ ಮುಂದೆ ನೋಡುತ್ತಾ ಹೋಗಬೇಕು ಎಂದು ಪರಿಶುದ್ಧ ಗ್ರಂಥವು ನಮಗೆ ಸೂಚಿಸುತ್ತಿದೆ. ಅಪೊಸ್ತಲನಾದ ಪೌಲನು ಕೊರಿಂಥದವರಿಗೆ ಬರೆದ ಪತ್ರಿಕೆಯಲ್ಲಿ ಬರೆಯುವಾಗ ನೀವೂ ಬಿರುದನ್ನು ಪಡಕೊಳ್ಳಬೇಕೆಂತಲೇ ಓಡಿರಿ ಎಂದು ಸಲಹೆ ನೀಡಿದರು. ನಮ್ಮ ಜಯಮಾಲಿಕೆಯನ್ನು ಕಳೆದುಕೊಳ್ಳದಂತೆ ನಾವು ಎಚ್ಚರಿಕೆಯಿಂದ ಯೇಸುವಿನ ಬಳಿಗೆ ಓಡೋಣ. ಯಾಕಂದರೆ ನಮ್ಮ ದೇವರು ನಿಮ್ಮ ಓಟವನ್ನು ಮತ್ತು ಪ್ರಯತ್ನವನ್ನು ಮರೆತುಬಿಡುವುದಕ್ಕೆ ಅನ್ಯಾಯಸ್ಥನಲ್ಲ. ಮುಂಬರುವ ಹೊಸ ವರ್ಷದಲ್ಲಿ ನಿಮ್ಮ ಪ್ರಯಾಣವು ಉತ್ತಮವಾಗಿ ಮುಂದುವರಿಯಲು ಸರ್ವಶಕ್ತನಾದ ದೇವರು ನಿಮಗೆ ಕೃಪೆ ತೋರಲಿ. ಆಮೆನ್!

 - Bro. ಜೇಕಬ್ ಶಂಕರ್

 

ಪ್ರಾರ್ಥನಾ ಅಂಶ:

ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯದ ಸೇವೆಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al