By Village Missionary Movement
Thursday, 28-Dec-2023ಧೈನಂದಿನ ಧ್ಯಾನ(Kannada) – 28.12.2023
ಆಶೀರ್ವಾದಕರವಾದ ಆಲೋಚನೆ
"ಅಲ್ಪಕಾರ್ಯಗಳ ದಿನವನ್ನು ಯಾರು ತಿರಸ್ಕರಿಸಾರು?" - ಜೆಕರ್ಯ 4:10
ಅತ್ಯಂತ ಶ್ರೀಮಂತ ವ್ಯಕ್ತಿಯ ಬಹುಕಾಲದ ಕನಸು, ಕಾರು ಕಂಪನಿಯೊಂದನ್ನು ಪ್ರಾರಂಭಿಸುವುದು! ಅಂತೆಯೇ ಕಾರು ಕಂಪನಿಯನ್ನು ಆರಂಭಿಸಿ ಒಂದು ಹೊಸ ಕಾರನ್ನು ವಿನ್ಯಾಸಗೊಳಿಸಿದರು. ಆ ಕಾರನ್ನು ಪರಿಚಯಿಸಲು ಕಾರ್ಯಕ್ರಮವೊಂದನ್ನು ಆಯೋಜಿಸಿ ಅನೇಕರಿಗೆ ಆಹ್ವಾನವನ್ನು ನೀಡಿದರು. ಹೆಚ್ಚು ಜನಸಂದಣಿ ಸುತ್ತುವರಿಯಲು, ನಿರ್ದಿಷ್ಟ ಸಮಯದಲ್ಲಿ ಹೊಸ ಕಾರನ್ನು ಆ ಕೊಠಡಿಯಿಂದ ಹೊರಗೆ ಓಡಿಸಿಕೊಂಡು ಬರುವಾಗ ಒಂದು ಸಮಸ್ಯೆ ಏರ್ಪಟ್ಟಿತು. ಆ ಕಟ್ಟಡದ ಬಾಗಿಲಿನ ಎತ್ತರಕ್ಕಿಂತ ಹೊಸ ಕಾರು 5 ಸೆಂ.ಮೀ. ನಷ್ಟು ಎತ್ತರವಾಗಿತ್ತು. ಇದರಿಂದಾಗಿ ಕಾರು ಹೊರ ಬರಲಾಗಲಿಲ್ಲ: ಅಲ್ಲಿದ್ದ ಜನರು ಸಹ ಗುಣುಗುಟ್ಟಲಾರಂಭಿಸಿದರು. ಇನ್ನು ಕೆಲವರು ನಮ್ಮ ಕೆಲಸವನ್ನೆಲ್ಲ ಬಿಟ್ಟು ಬಂದಿದ್ದೇವೆ ಎಂದು ಪ್ರಲಾಪಿಸಲು ಸಹ ಪ್ರಾರಂಭಿಸಿದರು. ಇದನ್ನು ಗಮನಿಸುತ್ತಿದ್ದ ಕಂಪನಿಯ ಕಾವಲುಗಾರನು, "ಕಾರಿನ ಟೈರ್ ನಲ್ಲಿ ಗಾಳಿ ಬಿಟ್ಟರೆ ಎತ್ತರ ಕಡಿಮೆಯಾಗುತ್ತದೆ, ಕಾರನ್ನು ಹೊರಗೆ ತಂದ ನಂತರ ಟೈರ್ ನಲ್ಲಿ ಗಾಳಿ ತುಂಬಿಸಬಹುದು" ಎಂದರು. ಕಾವಲುಗಾರನ ಮಾತುಗಳನ್ನು ಕೇಳಿ ಶ್ರೀಮಂತನ ಹೃದಯ ಹರ್ಷಿಸಲು, ಕಾರನ್ನು ಪರಿಚಯಿಸಲಾಯಿತು.
ಸತ್ಯವೇದದಲ್ಲಿ, ಸಿರಿಯಾದ ರಾಜನ ಸೇನಾಪತಿಯಾದ ನಾಮಾನನು ಕುಷ್ಠರೋಗದಿಂದ ಮಾರಣಾಂತಿಕ ಸಂಕಟದಲ್ಲಿದ್ದನು. ಅವನ ಮನೆಯಲ್ಲಿ ಇಸ್ರಾಯೇಲ್ ನಿಂದ ಗುಲಾಮಳಾಗಿ ಕರೆತಂದಿದ್ದ ಒಬ್ಬ ಚಿಕ್ಕ ಹುಡುಗಿ ಇದ್ದಳು. ಆ ಚಿಕ್ಕ ಹುಡುಗಿ ಒಂದು ದಿನ ತನ್ನ ಯಜಮಾನಿಯನ್ನು ನೋಡಿ, "ನಮ್ಮ ದಣಿಯು ಸಮಾರ್ಯದಲ್ಲಿರುವ ಪ್ರವಾದಿಯ ಹತ್ತಿರ ಇರುತ್ತಿದ್ದರೆ ಎಷ್ಟೋ ಒಳ್ಳೇದಾಗುತ್ತಿತ್ತು. ಅವನು ಇವನನ್ನು ಕುಷ್ಠರೋಗದಿಂದ ವಾಸಿಮಾಡುತ್ತಿದ್ದನು" ಎಂದು ಹೇಳಿದಳು. ನಂತರ ನಾಮಾನನ ಸೇವಕರು ಸಹ "ಸ್ನಾನಮಾಡಿ ಶುದ್ಧನಾಗು" ಎಂದು ಹೇಳಿದರು. ನಾಮಾನನು ಸೈನ್ಯದ ನಾಯಕನಾಗಿದ್ದರೂ ಇವರಿಬ್ಬರ ಮಾತನ್ನು ಕೇಳಿ ಸ್ವಸ್ಥತೆಯನ್ನು ಪಡೆದನು. ಇವರ ಆಲೋಚನೆಯಿಂದ ಆಶೀರ್ವಾದವನ್ನೂ ಪಡೆದನು.
ಇದನ್ನು ಓದುತ್ತಿರುವ ಪ್ರಿಯರೇ! ನಮ್ಮ ಜೀವನದಲ್ಲಿಯೂ ಸಹ "ಇನ್ನು ಮುಂದೆ ಅಷ್ಟೇ, ನನ್ನ ಸಮಸ್ಯೆಗೆ ಪರಿಹಾರವೇ ಇಲ್ಲ" ಎಂದು ನಾವು ನೆನೆಸಿ ಅಂಗಲಾಚುತ್ತಿರಬಹುದು. ಇವರ ಮೂಲಕವಾಗಿ ನನ್ನ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದಾ ಎಂದು ನಾವು ಕ್ಷುಲ್ಲಕವಾಗಿ ಭಾವಿಸುವ ಜನರ ಮೂಲಕವಾಗಿಯೇ ನಮ್ಮ ಸಮಸ್ಯೆಗಳಿಗೆ ಪರಿಹಾರ ಉಂಟಾಗುತ್ತದೆ. ಒಳ್ಳೆಯ ಆಲೋಚನೆ ಬರುವಾಗ ಹೇಳುವ ವ್ಯಕ್ತಿ ಯಾರೇ ಆಗಿರಲಿ, ಆ ಸಲಹೆಯನ್ನು ಆಲಿಸಿ ಅದರಂತೆ ನಡೆದುಕೊಂಡಾಗ ನಾವು ಯಶಸ್ವಿಯಾಗುತ್ತೇವೆ. ಹಾಗಾಗಿ ನಮ್ಮ ಜೊತೆಗಿರುವವರನ್ನು ಮತ್ತು ನಮ್ಮ ಸುತ್ತಲಿರುವ ಎಲ್ಲರನ್ನೂ ಕಡಿಮೆ ಅಂದಾಜು ಮಾಡಬೇಡಿ. ನಮಗಾಗಿ ಶಿಲುಬೆಯ ಮೇಲೆ ಸತ್ತ ಯೇಸು ನಮ್ಮ ಬಗ್ಗೆ ಅಲ್ಪವಾಗಿ ನೆನೆಸಿದ್ದರೆ ನಮಗಾಗಿ ಶಿಲುಬೆಯಲ್ಲಿ ಸಾಯುತ್ತಿದ್ದರಾ? ಯೋಚಿಸೋಣ.
- Sis. ಮಾರಿಯಮ್ಮಾಳ್ ರೂತ್
ಪ್ರಾರ್ಥನಾ ಅಂಶ:
ಪ್ರಾರ್ಥನಾ ಗುಂಪುಗಳಿಗಾಗಿ ಹೊರಬಿಡುತ್ತಿರುವ ಪ್ರಾರ್ಥನಾ ಗುಂಪಿನ ನಾಯಕರ ಕೈಪಿಡಿ ಎಂಬ ಪತ್ರಿಕೆಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482