Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 25.12.2023
Share:

By Village Missionary Movement

Monday, 25-Dec-2023

ಧೈನಂದಿನ ಧ್ಯಾನ(Kannada) – 25.12.2023

 

ಸಮಾಧಾನ ಕ್ರಿಸ್ಮಸ್

 

"ಮೇಲಣಲೋಕಗಳಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಮನುಷ್ಯರೊಳಗೆ ಸಮಾಧಾನ ದೇವರು ಅವರಿಗೆ ಒಲಿಯುತ್ತಾನೆ ಎಂದು ದೇವರನ್ನು ಕೊಂಡಾಡುತ್ತಾ ಹೇಳಿದರು. - ಲೂಕ 2:14

 

ಯೇಸುಕ್ರಿಸ್ತನು ಒಂದು ಪ್ರಮುಖ ಕಾರಣಕ್ಕಾಗಿ ಈ ಭೂಮಿಯಲ್ಲಿ ಜನಿಸಿದರು. ಅದೇನೆಂದರೆ ಈ ಲೋಕಕ್ಕೆ ಸಮಾಧಾನವನ್ನು ಕೊಡುವುದಕ್ಕಾಗಿಯೇ! ಪಾಪದಲ್ಲಿ ದುಡಿಯುವ ಪ್ರತಿಯೊಬ್ಬರಿಗೂ ಯೇಸು ಕೊಡುವ ಅತಿ ದೊಡ್ಡ ಕೊಡುಗೆ ಎಂದರೆ ಸಮಾಧಾನದ ಜೀವನ!

 

ಮನುಷ್ಯರೆಲ್ಲರೂ ಪರಲೋಕಕ್ಕೆ ಹೋಗುತ್ತೇವೆ ಎಂದು ಹೇಳುವುದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಪರಲೋಕವು ನಾವು ಅಂದುಕೊಳ್ಳುವ ಹಾಗೆ ಸಾಮಾನ್ಯ ಸ್ಥಳವೂ ಅಲ್ಲ. ಇದು ಯೇಸುಕ್ರಿಸ್ತನು ವಾಸಿಸುವ ಅತ್ಯಂತ ಶ್ರೇಷ್ಠ ಸ್ಥಳವಾಗಿದೆ. ಯೇಸು ಪರಿಶುದ್ಧನು ಅಂದಮೇಲೆ, ಪಾಪವಿಲ್ಲದವರು ಅಂದಮೇಲೆ ಅವರೊಂದಿಗೆ ಇರುವವರೂ ಸಹ ಹಾಗೆಯೇ ಇರಲು ಸಾಧ್ಯ. ನಾವು ನಮ್ಮ ಮನೆಯನ್ನು ಸ್ವಚ್ಛವಾಗಿಡಲು ಬಯಸುತ್ತೇವೆ. ನಡುಮನೆಯಲ್ಲಿ ಕೊಳಕು ಇಟ್ಟುಕೊಂಡು ಅದನ್ನು ಸಹಿಸಿಕೊಂಡು ಬದುಕುವುದಿಲ್ಲ. ಹಾಗೆಯೇ ನಮ್ಮ ಕರ್ತನಾದ ಯೇಸು ಕೂಡ. ಅವರ ಮನೆಯಲ್ಲಿ ಅನೇಕ ವಾಸಸ್ಥಾನಗಳಿವೆ. ಆದರೆ ಅದು ಪಾಪಿಗಳಿಗೆ ಅಲ್ಲ. ಪಾಪ ಕ್ಷಮಾಪಣೆಯನ್ನು ಪಡೆದವರಿಗೆ ಮಾತ್ರವೇ. ಅಂತಹ ಜಾಗಕ್ಕೆ ನನ್ನನ್ನೂ ನಿನ್ನನ್ನೂ ಕರೆದುಕೊಂಡು ಹೋಗಲು ಬಂದವರೇ ಯೇಸು ಕ್ರಿಸ್ತನು.

 

ಕ್ರಿಸ್ಮಸ್ ಎಂದರೆ ಯೇಸುವಿನ ಆಗಮನವನ್ನು ಸೂಚಿಸುವ ದಿನ. ಆತನ ಬರುವಿಕೆಯ ಉದ್ದೇಶವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳಬೇಕು. ಈ ಶುಭ ಸುದ್ದಿಯನ್ನು ಇತರರಿಗೂ ತಿಳಿಸಬೇಕು. ಯೇಸು ಹುಟ್ಟಿದಾಗ ಈ ಲೋಕಕ್ಕೆ ಬಂದ ಮೊದಲ ಸಂದೇಶ ಏನೆಂದರೆ "ನಿಮಗೆ ಸಮಾಧಾನ"! ಕುರುಬರು ದೂತರನ್ನು ಕಂಡು ಭಯಪಟ್ಟಾಗ, ಅವರು "ನಿಮಗೆ ಸಮಾಧಾನವಾಗಲಿ" ಎಂದು ಹೇಳಿದರು. ಯೇಸು ಈ ಲೋಕದಲ್ಲಿ ಜನಿಸಿದಾಗ ಎರಡು ಘಟನೆಗಳು ನಡೆದವು. ಒಂದು, ಕತ್ತಲೆಯಲ್ಲಿರುವವರು ದೊಡ್ಡ ಬೆಳಕನ್ನು ಕಂಡರು. ಎರಡು, ನಿಮಗೆ ಸಮಾಧಾನವಾಗಲಿ ಎಂಬ ಸಂದೇಶವು ಪರಲೋಕದಿಂದ ಭೂಮಿಗೆ ಬಂತು.

 

ಪ್ರಿಯರೇ, ಹೃದಯದಲ್ಲಿ ಯೇಸು ಯಾವಾಗ ಹುಟ್ಟುತ್ತಾರೋ ಅಂದೇ ನಿಜವಾದ ಕ್ರಿಸ್ಮಸ್. ಈ ಯೇಸು ಕ್ರಿಸ್ತನು ನಮ್ಮ ಹೃದಯದಲ್ಲಿ ಹುಟ್ಟದಿದ್ದರೆ ನಾನು ಪರಲೋಕಕ್ಕೆ ಹೋಗುತ್ತೇನೆ ಎಂದು ಹೇಳುವುದರಲ್ಲಿ ಯಾವ ಪ್ರಯೋಜನವೂ ಇಲ್ಲ. ನೀವು ಪಾಪದೊಂದಿಗೆ ಪರಲೋಕದಲ್ಲಿ ಪ್ರವೇಶಿಸಲು ಸಾಧ್ಯವಿಲ್ಲ. ಪಾಪ ಕ್ಷಮಾಪಣೆಯನ್ನು ಪಡೆದವರು ಮಾತ್ರವೇ ಪ್ರವೇಶಿಸಲು ಸಾಧ್ಯ. ಆದ್ದರಿಂದ, ಪಾಪದ ಕತ್ತಲೆಯಲ್ಲಿರುವವರು ಯೇಸುವನ್ನು ತಮ್ಮ ಹೃದಯದಲ್ಲಿ ಹುಟ್ಟುವಂತೆ ಮಾಡುವುದರ ಮೂಲಕ ದೊಡ್ಡ ಬೆಳಕನ್ನು ನೋಡಬಹುದು. ಅಂತಹ ಬೆಳಕನ್ನು ಕಂಡವರು ಮಾತ್ರವೇ ಇಂತಹ ದೊಡ್ಡ ಸಮಾಧಾನವನ್ನು ಕಂಡುಕೊಳ್ಳಲು ಸಾಧ್ಯ. ಕ್ರಿಸ್ಮಸ್ ಹಬ್ಬದ ಶುಭಾಶಯಗಳು!

- Bro. ಶಂಕರ್ ರಾಜ್

 

ಪ್ರಾರ್ಥನಾ ಅಂಶ:

ಸೇವಾಕ್ಷೇತ್ರದ ಸೇವೆಗಳಿಗೆ 50 ದ್ವಿಚಕ್ರ ವಾಹನಗಳು ತುರ್ತಾಗಿ ಅಗತ್ಯವಿದೆ. ಸಹಾಯ ಮಾಡುವ ಪಾಲುದಾರರು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin