Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 01.04.2021
Share:

By Village Missionary Movement

Thursday, 01-Apr-2021

ಧೈನಂದಿನ ಧ್ಯಾನ(Kannada) – 01.04.2021

ತಕ್ಕ ಉಪವಾಸವ?

"...ಇವುಗಳನ್ನು ಮಾಡಬೇಕಾಗಿತ್ತು; ಅವುಗಳನ್ನೂ ಬಿಡಬಾರದು." - ಮತ್ತಾಯ 23:23

ನಾವೀಗ ಶ್ರಮೆ ದಿನಗಳ ಕೊನೆಗೆ ಬಂದಿದ್ದೇವೆ. ಈ ದಿನಗಳನ್ನು ಆತ್ಮೀಕ ವಸಂತ ದಿನಗಳೆಂದೇ ಹೇಳಬಹುದು ಸಭೆಯಲ್ಲಿ ಅನೇಕ ಆತ್ಮೀಯ ಕೂಟಗಳು, ಹೇರಳವಾದ ಸಂದೇಶಗಳು, ಮಾಂಸವನ್ನು ಜಜ್ಜಿ ಮಾಡಿದ ಉಪವಾಸ ಇವೆಲ್ಲವೂ ಕೂಡ ಬಹಳ ಅವಶ್ಯವಾದದ್ದು. ಬಹಳ ಒಳ್ಳೆಯದು ಅದೇ ಸಮಯದಲ್ಲಿ ಒಂದು ಕಾರ್ಯವನ್ನು ಯೋಚಿಸಬೇಕು. ಈ ದಿನಗಳಲ್ಲಿ ದೇವರಿಗೂ ನಿಮಗೂ ಇರುವ ಸಂಬಂಧ ಬಲವಾಗಿದೆಯಾ? ಅನೇಕ ಸಮಯಗಳಲ್ಲಿ ನಾವು ಹೊರಗಿನ ಆಚಾರಗಳಿಗೆ ಮೊದಲ ಸ್ಥಳವನ್ನು ಕೊಟ್ಟು, ಅಂತರಂಗದ ಶುದ್ಧೀಕರಣಕ್ಕೆ ಅಧಿಕವಾಗಿ ಗಮನಹರಿಸದೆ ಬಿಟ್ಟು ಬಿಡುತ್ತಿದ್ದೇವೆ. ನಾವು ಮಾಡಿದ ಉಪವಾಸಗಳು ದೇವರಿಗೆ ಮೆಚ್ಚುಗೆಯಾಗಿ, ದೇವರು ಬಯಸುವ ಹಾಗೆ ದೇವರ ವಾಕ್ಯಾನುಸಾರವಾಗಿ ಇತ್ತಾ ಎಂದು ಕೆಳಕಂಡ ಪ್ರಶ್ನೆಗಳ ಮೂಲಕ ನಮ್ಮನ್ನು ನಾವೇ ನಿಧಾನಿಸಿ ನೋಡಲು ಕರೆಯಲ್ಪಡುತ್ತಿದ್ದೇವೆ.

1. ನಮ್ಮ ಜೀವನದಲ್ಲಿರುವ ಅಕ್ರಮಗಳ ಕಟ್ಟುಗಳು ಬಿಚ್ಚಲ್ಪಟ್ಟಿವೆಯಾ? ಅಂದರೆ ನಮ್ಮ ಪಾಪಗಳು ಮೀರುವಿಕೆ ಗಳನ್ನು ಬಿಟ್ಟು ಮಾನಸಾಂತರ ಹೊಂದಿದ್ದೇವ? ಮತ್ತೊಬ್ಬರ ಪಾಪದ ಭಾರವನ್ನು ನೀಗಿಸಲು ಪ್ರಯಾಸ ಪಡುತ್ತಿದ್ದೇವ? (ಯೆಶಾಯ 58:6)

2. ಯಾವುದೋ ಒಂದು ಪಾಪದ ಕಾರ್ಯದಲ್ಲಿ ದಾಸರಾಗಿ ಸಿಕ್ಕಿಕೊಂಡಿದ್ದ ಒಬ್ಬರನ್ನಾದರು ಬಿಡಿಸಲು ಈ 40 ದಿನಗಳಲ್ಲಿ ಪ್ರಯತ್ನಿಸಿದೆನಾ? (ಯೆಶಾಯ58:6)

3. ನಾವು ಎಷ್ಟು ಜನರಿಗೆ ಯೇಸುವಿನ ಬಗ್ಗೆ ಹೇಳಿದ್ದೇವೆ? ರೋಗದಿಂದ, ವೇದನೆಗಳಿಂದ ಇಕ್ಕಟ್ಟುಗಳಲ್ಲಿರುವವರ ಭಾರವು ನೀಗಲು ಸಹಾಯ ಮಾಡಿದ್ದೇನ?  (ಯೆಶಾಯ 58:6)

4. ಹಸಿವೆಯಿಂದ ಇರುವವರಿಗೆ ಆಹಾರವನ್ನು ಕೊಟ್ಟೆನಾ? ದಿಕ್ಕಿಲ್ಲದ ಜನರನ್ನು ಆಸಕ್ತಿಯಿಂದ ವಿಚಾರಿಸಿ ಸಹಾಯ ಮಾಡಿದ್ದೇನ? (ಯೆಶಾಯ 58:7)

5. ಈಸ್ಟರ್ ಹಬ್ಬಕ್ಕಾಗಿ ನಮಗೆ ಬಟ್ಟೆಗಳನ್ನು ತೆಗೆದುಕೊಂಡೆವು. ಯಾರಿಗಾದರೂ ಬಟ್ಟೆಗಳನ್ನು ಕೊಟ್ಟೆವಾ? (ಯೆಶಾಯ 58:7)

6. ನಮ್ಮ ಕುಟುಂಬದಲ್ಲಿ ಇರುವವರು ಜೊತೆಯಲ್ಲಿ ಹುಟ್ಟಿದವರು ಕಷ್ಟದಲ್ಲಿರುವಾಗ ಅವರಿಗೆ ಸಹಾಯ ಬೇಕಾದಾಗ ಕಂಡು ಕಾಣದ ಹಾಗೆ ನೋಡದೆ ಇದ್ದೇವ?  (ಯೆಶಾಯ 58:7)

7. ನಮ್ಮ ಉಪವಾಸವು ಅಂತರಂಗದಲ್ಲಿ ನೋಡುವ ನಮ್ಮ ತಂದೆಗೆ ಸರಿಯಾಗಿದೆಯಾ ಅಥವಾ ಮನುಷ್ಯರು ನಮ್ಮನ್ನು ಮೆಚ್ಚಿಕೊಳ್ಳುವಂತೆ, ಅವರು ನೋಡುವಂತೆ ಬಾಡಿಹೋಗಿದೆಯಾ? (ಮತ್ತಾಯ 6:17)
ಯೋಚಿಸಿ ನೋಡೋಣ.

ಪ್ರಿಯರೇ! ನಮ್ಮ ಉಪವಾಸದ ದಿನಗಳು ಹೇಗಿದ್ದವು? ನಮ್ಮನ್ನು ತೃಪ್ತಿ ಪಡಿಸುವುದಕ್ಕಾಗಿ ಉಪವಾಸ ಮಾಡುತ್ತಿದ್ದೇವಾ? ಅಥವಾ ದೇವರಿಗೆ ತಕ್ಕ ಉಪವಾಸವಾಗಿತ್ತ? ಇಲ್ಲವಾದರೆ ಈ ದಿನವೇ ಮನಸ್ಸನ್ನು ಬದಲಾಯಿಸಿಕೊಂಡು ಪ್ರಾರ್ಥಿಸೋಣ. ಆತನೊಂದಿಗೆ ನಮ್ಮ ಸ್ವಾರ್ಥವನ್ನು ಶಿಲುಬೆಯಲ್ಲಿ ಜಜ್ಜಲ್ಪಡುವುದಕ್ಕೆ ಅಂಗೀಕರಿಸೋಣ. ನಾವು ಆತನೊಂದಿಗೆ ಮರಣ ಹೊಂದುವುದಾದರೆ ಆತನೊಂದಿಗೆ ಎಬ್ಬಿಸಲ್ಪಡುತ್ತೇವೆ. ಹಲ್ಲೇಲೂಯ.
-    Mrs. ಭುವನ ಧನಪಾಲನ್

ಪ್ರಾರ್ಥನಾ ಅಂಶ:-
ಈ ತಿಂಗಳು ಪೂರ್ತಿಯಾಗಿ ನಡೆಯುವಂತ ಸೇವೆಗಳಲ್ಲಿ ಕರ್ತನು ತನ್ನ ಬಲವನ್ನು ಪ್ರಕಟಿಸುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al