Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 23.12.2023
Share:

By Village Missionary Movement

Saturday, 23-Dec-2023

ಧೈನಂದಿನ ಧ್ಯಾನ(Kannada) – 23.12.2023

 

ಭರವಸೆಯ ನಕ್ಷತ್ರ

 

"ನಿಜವಾದ ಬೆಳಕು ಲೋಕಕ್ಕೆ ಬರುವದಾಗಿತ್ತು; ಆ ಬೆಳಕೇ ಪ್ರತಿ ಮನುಷ್ಯನಿಗೂ ಬೆಳಕನ್ನು ಕೊಡುವಂಥದು" - ಯೋಹಾನ 1:9

 

ಪರಿಶುದ್ಧ ಗ್ರಂಥದಲ್ಲಿ, ಹಳೆಯ ಒಡಂಬಡಿಕೆ ಮತ್ತು ಹೊಸ ಒಡಂಬಡಿಕೆಯ ನಡುವಿನ 400 ವರ್ಷಗಳು "ಮೌನದ ವರ್ಷಗಳು" ಎಂದು ಹೇಳಲಾಗುತ್ತದೆ. ಆ ಕರಾಳ ವರ್ಷಗಳ ನಂತರ, ಮನುಕುಲಕ್ಕೆ ಬೆಳಕಾಗಿ ಬಂದ ಯೇಸು ಕ್ರಿಸ್ತನ ಐಹಿಕ ಇತಿಹಾಸವು ಪ್ರಾರಂಭವಾಗುತ್ತದೆ. ಇಂದು ಕ್ರಿಸ್ತನ ಜನನವನ್ನು ತಿಳಿದವರು ಏನು ಮಾಡಿದರು ಎಂಬುದನ್ನು ಸ್ವಲ್ಪ ಸಮಯ ಧ್ಯಾನಿಸೋಣ.

 

ಅರಸನಾದ ಹೆರೋದನು: ಯೇಸುವಿನ ಜನನದ ಸುದ್ದಿಯನ್ನು ಕೇಳಿದಾಗ ಅವನು ಕಳವಳಪಟ್ಟನು. ತನಗೆ ಪೈಪೋಟಿಯಾಗಿ ಒಬ್ಬ ರಾಜ ಹುಟ್ಟಿ ಬಂದಿದ್ದಾನೆಂದು ತಪ್ಪಾಗಿ ಅರ್ಥ ಮಾಡಿಕೊಂಡನು. ಆದರೆ ಕ್ರಿಸ್ತನ ಜನನವು ಭಯವನ್ನು ಉಂಟುಮಾಡುವಂಥದಲ್ಲ. ಬದಲಿಗೆ, ಇದು ಭಯವನ್ನು ಹೋಗಲಾಡಿಸುವಂಥದು. ಈ ಸುದ್ದಿಯು ಎಲ್ಲಾ ಜನರಿಗೆ ಮಹಾ ಸಂತೋಷವನ್ನುಂಟುಮಾಡುವ "ಒಳ್ಳೆಯ ಸುದ್ದಿ" ಎಂದು, ಆತನೇ ಈ ಲೋಕದ ರಕ್ಷಕನು ಎಂಬುದನ್ನೂ ಗ್ರಹಿಸದೆ ವರ್ತಿಸಿದನು.

 

ಶಾಸ್ತ್ರಿಗಳು: ಶಾಸ್ತ್ರಿಗಳ ಪ್ರಯಾಣವನ್ನು "ನಂಬಿಕೆಯ ಪಯಣ"ಕ್ಕೆ ಹೋಲಿಸಬಹುದು. ಅವರಿಗೆ ಸ್ಪಷ್ಟ ಉದ್ದೇಶವಿತ್ತು. "ರಾಜಾಧಿರಾಜನನ್ನು ಸಾಷ್ಟಾಂಗವಾಗಿ ನಮಸ್ಕರಿಸಬೇಕು" ಎಂಬುದೇ ಆ ಉದ್ದೇಶ. ಅದರೊಂದಿಗೆ ಗುರಿಯೂ ಇತ್ತು. ಆ ಗುರಿ ಕ್ರಿಸ್ತನೇ! ಅವರು ಹುಡುಕಿದರು, ಕಂಡುಕೊಂಡರು, ಆರಾಧಿಸಿದರು ಮತ್ತು ನೀಡಿದರು. ನಮ್ಮ ನಂಬಿಕೆಯ ಜೀವನದಲ್ಲೂ ಉದ್ದೇಶ, ಗುರಿ, ದೃಢತೆ, ತಾಳ್ಮೆ ಇದೆಯೇ? ಈ ಲೌಕಿಕ ಪಯಣ ನಮ್ಮನ್ನು ರಾಜಾಧಿರಾಜನ ಬಳಿಗೆ ಕೊಂಡೊಯ್ಯುತ್ತದಾ? ನಂಬಿಕೆಯಿಂದ ಮುನ್ನಡೆಯುತ್ತಿದ್ದೇವಾ?

 

ನಕ್ಷತ್ರ: ನಾವು ನಕ್ಷತ್ರವನ್ನು ಶಾಸ್ತ್ರಿಗಳಿಗೆ ಮಾರ್ಗದರ್ಶನ ನೀಡಿದ "ಸುವಾರ್ತಾಬೋಧಕ" ನಿಗೆ ಹೋಲಿಸಬಹುದು. ಈ ನಕ್ಷತ್ರವು ಅವರನ್ನು ಸ್ಥಿರವಾಗಿ ಸರಿಯಾದ ಸ್ಥಳಕ್ಕೆ ಕರೆದೊಯ್ಯಿತು. ಕತ್ತಲೆಯ ಜಗತ್ತಿಗೆ ಬೆಳಕಾಗಿ ಬಂದ ಮೆಸ್ಸೀಯನನ್ನು ನೋಡಲು ಅದು ಅವರಿಗೆ ಸಹಾಯ ಮಾಡಿತು.

 

ಮಹಾಯಾಜಕರು ಮತ್ತು ವೇದ ಪಂಡಿತರು: ಇವರುಗಳು ಕ್ರಿಸ್ತನ ಜನನದ ಕುರಿತು ಸರಿಯಾದ ವಿವರಣೆಯನ್ನು ನೀಡಿದರು. ಆದರೆ ಮಗುವನ್ನು ನೋಡಲು ಯೆರೂಸಲೇಮಿನ ಸಮೀಪವಿರುವ ಬೇತ್ಲೆಹೇಮಿಗೆ ಹೋಗುವ ಉದ್ದೇಶವಿರಲಿಲ್ಲ. ಪರಿಶುದ್ಧ ಗ್ರಂಥದಲ್ಲಿರುವ ಜೀವವಾಕ್ಯಗಳನ್ನು ಅರಿತವರಾಗಿ, ಕೇಳುವವರಾಗಿ ಮಾತ್ರವೇ ಇದ್ದರೆ ಪ್ರಯೋಜನವಿಲ್ಲ. ಅವುಗಳ ಪ್ರಕಾರ ನಡೆಯಲು ಪ್ರಯತ್ನಿಸದಿದ್ದರೆ ಅದು ನಮ್ಮ ಜೀವನದಲ್ಲಿ ಯಾವೊಂದು ಆಶೀರ್ವಾದವನ್ನೂ ಕೊಡಲು ಸಾಧ್ಯವಿಲ್ಲ.

 

ಹೌದು, ಪ್ರಿಯರೇ! ಗೊಂದಲದಲ್ಲಿ ಬದುಕುತ್ತಿರುವ ಜನರಿಗೆ ಸುವಾರ್ತೆಯನ್ನು ಸಾರುವವರಾಗಿ ನಂಬಿಕೆಯ ಓಟದಲ್ಲಿ ಮನೋಸ್ಥೈರ್ಯದಿಂದ ದೃಢವಾಗಿ ಬದುಕಲು ಇಂದು ನಮ್ಮನ್ನು ಅರ್ಪಿಸಿಕೊಳ್ಳೋಣ!

- Mrs. ಜೆಬಕಣಿ ಶೇಖರ್

 

ಪ್ರಾರ್ಥನಾ ಅಂಶ:

ಕ್ರಿಸ್‌ಮಸ್ ಸಮಯದಲ್ಲಿ ಭೇಟಿಯಾಗುವ ಪ್ರತಿಯೊಬ್ಬ ವ್ಯಕ್ತಿಯು ಯೇಸುವಿನ ಪ್ರೀತಿಯನ್ನು ಸವಿಯಬೇಕೆಂದು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al