Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 22.12.2023
Share:

By Village Missionary Movement

Friday, 22-Dec-2023

ಧೈನಂದಿನ ಧ್ಯಾನ(Kannada) – 22.12.2023

 

ಅರ್ಥವುಳ್ಳ ಕ್ರಿಸ್ಮಸ್

 

"ಫಕ್ಕನೆ ಆ ದೂತನ ಸಂಗಡ ಪರಲೋಕಸೈನ್ಯದವರ ಒಂದು ದೊಡ್ಡ ಗುಂಪು ಕಾಣಿಸಿಕೊಂಡು" - ಲೂಕ 2:13

 

ರಾಣಿ ತನ್ನ ಮನೆಯಲ್ಲಿದ್ದ ಒಂದು ಗೂಡಿನಲ್ಲಿ ಕ್ರಿಸ್ಮಸ್ ಮರವನ್ನು ಇಟ್ಟು ಅವರ ಮನೆಯಲ್ಲಿ ಕಾರ್ ಪಾರ್ಕ್‌ ಮಾಡುವ ಸ್ಥಳದಲ್ಲಿ ಅದನ್ನು ಅಲಂಕರಿಸಿ ಇಟ್ಟಿದ್ದಳು. ದಾರಿಹೋಕರು ಮತ್ತು ಮನೆಯ ಅಕ್ಕಪಕ್ಕದವರು ಅದನ್ನು ನಿಂತು ನೋಡುತ್ತಿದ್ದರು ಅದನ್ನು ರಾಣಿ ನೋಡಿದರೆ ತಕ್ಷಣವೇ ಗೇಟ್ ತೆರೆದು ಅವರನ್ನು ಒಳಗೆ ಆಹ್ವಾನಿಸಿ, ಅವರಿಗೆ ಯೇಸುವಿನ ಪ್ರೀತಿಯನ್ನು ತಿಳಿಸಿ ಸಿಹಿತಿಂಡಿಗಳನ್ನು ನೀಡಿ ಕಳುಹಿಸುತ್ತಿದ್ದಳು. ಅಂತೆಯೇ, ಪ್ರತಿ ಕ್ರಿಸ್‌ಮಸ್‌ನಲ್ಲಿ ಇಬ್ಬರಿಗಾದರೂ ದೀಕ್ಷಾಸ್ನಾನ ಕೊಡಲು ಆ ವರ್ಷ ಪೂರ್ತಿ ಕರ್ತನಲ್ಲಿ ಮುನ್ನಡೆಸಿ ಅವರನ್ನು ಆಲಯಕ್ಕೆ ಕರೆದುಕೊಂಡು ಬರುತ್ತಿದ್ದಳು. ಇದನ್ನೆಲ್ಲ ನೋಡಿದ ಅವಳ ಸ್ನೇಹಿತೆ ಧರಣಿ ಆಶ್ಚರ್ಯದಿಂದ ಅವಳನ್ನು ನೋಡಲು, ತಕ್ಷಣವೇ ರಾಣಿ ಕ್ರಿಸ್ತನು ಜನಿಸಿದಾಗ ಪರಲೋಕವು ಹರ್ಷಿಸಿ, ಈ ಸಮಾಚಾರವನ್ನು ಪರಲೋಕಸೈನ್ಯವು ಲೋಕಕ್ಕೆಲ್ಲಾ ಸಾರಿತು. ಇಂದು ಅನೇಕ ಹೃದಯಗಳಲ್ಲಿ ಯೇಸು ಜನಿಸುವುದರಿಂದ ಪರಲೋಕವು ಹರ್ಷಿಸಬೇಕು ಅದಕ್ಕಾಗಿ ಇದೊಂದು ಸಣ್ಣ ಪ್ರಯತ್ನವಾಗಿದೆ ಎಂದಳು.

 

ಯೇಸುಕ್ರಿಸ್ತನ ಮೊದಲ ಆಗಮನದ ಸಮಯದಲ್ಲಿ ತಾಳ್ಮೆಯ ರೂಪವಾಗಿ ದನದ ಕೊಟ್ಟಿಗೆಯಲ್ಲಿ ಜನಿಸಿದ ಬಾಲಕನಾದ ಯೇಸುಕ್ರಿಸ್ತನ ಸುದ್ದಿಯನ್ನು ಸಾರಲು ಪರಲೋಕವ ಸೈನ್ಯವೇ ಹರ್ಷಿಸಿತು! ಪರಲೋಕ ಸೈನ್ಯದ ಸಂತೋಷವು ಕುರುಬರನ್ನು ಆವರಿಸಿತು. ಅವರು ಬೆತ್ಲೆಹೇಮಿಗೆ ಹೋಗಿ ನೋಡಿ ದರ್ಶಿಸಿ, ಪ್ರಕಟಿಸಿ ಹರ್ಷಿಸಿದರು. ಕೇಳಿದವರಿಗೆಲ್ಲ ಆಶ್ಚರ್ಯವಾಯಿತು. ಮತ್ತು ಅನೇಕರು ಸಹ ಹೋಗಿ ನೋಡಿರಬಹುದು. ಅಂತೆಯೇ ನಕ್ಷತ್ರವು ಶಾಸ್ತ್ರಿಗಳನ್ನು ಕರೆತಂದಿತು ಅವರು ತಮ್ಮ ಜ್ಞಾನ, ಅಂತಸ್ತು, ಹೆಮ್ಮೆ ಎಲ್ಲವನ್ನೂ ಬಿಟ್ಟು ತಲೆಬಾಗಿ ಹೋದರು.

 

ನಾವು ಪಡೆದ ದೀಪವನ್ನು ನಮ್ಮ ಸಭೆಯೊಳಗಿಟ್ಟು ಕುಳಿತುಬಿಟ್ಟಿದ್ದೇವಾ? ಅಥವಾ ಆರಿಸಿಬಿಟ್ಟಿದ್ದೇವಾ? ಯೋಚಿಸೋಣ! ಕ್ರಿಸ್ತನನ್ನು ಅರಿಯದವರು ನಮ್ಮ ಸುತ್ತಲೂ ಹೋಗುವ ಸ್ಥಳಗಳಲೆಲ್ಲಾ ಇದ್ದಾರಲ್ಲಾ. ನಾನೊಬ್ಬನೇ ಕ್ರಿಸ್‌ಮಸ್ ಎಂದು ಆಚರಿಸಿಬಿಟ್ಟರೆ ಪರಲೋಕವು ಸಂತೋಷಪಡುವುದಿಲ್ಲವಲ್ಲಾ. ಬರೀ ಸಂಭ್ರಮಾಚರಣೆಯಿದ್ದರೆ ಅದರೊಂದಿಗೆ ಸಂತಸ ಮಾಯವಾಗುತ್ತದೆ. ಪುನಃ ದುಃಖ ಮತ್ತು ಸಂಕಟಗಳು ಮುಂದುವರೆಯುತ್ತಲೇ ಇರುತ್ತವೆ. ಪರಲೋಕದ ಸಂತೋಷ ಇರುವುದಿಲ್ಲ.

 

ಪ್ರಿಯರೇ, ಪಾಪ ಮತ್ತು ಶಾಪದ ಕತ್ತಲೆಯಲ್ಲಿ ಜೀವಿಸುತ್ತಿರುವ ಜನರಿಗೆ ಕ್ರಿಸ್ತನು ಎಂಬ ಬೆಳಕನ್ನು ಬೆಳಗಿಸಿ ಇಡೋಣ. ಕತ್ತಲಲ್ಲಿ ಸಂಚರಿಸಿದ ಜನರಿಗೆ ದೊಡ್ಡ ಬೆಳಕು ಕಾಣಿಸಿತು ಎಂಬ ಯೆಶಾಯ 9:2 ರ ವಾಕ್ಯದ ಪ್ರಕಾರ ಪರಲೋಕದ ಸಂತೋಷ ಎಂಬ ದೀಪವನ್ನು ಬೆಳಗಿಸಿ ಹರ್ಷಿಸೋಣ ಇದೇ ಅರ್ಥವುಳ್ಳ ಕ್ರಿಸ್ಮಸ್ ಆಗಿದೆ. ಈ ಕ್ರಿಸ್ಮಸ್ ಅನ್ನು ಅರ್ಥವುಳ್ಳದ್ದಾಗಿ ಆಚರಿಸಿ ಹರ್ಷಿಸೋಣ.

- Mrs. ಅನ್ಬು ಜ್ಯೋತಿ ಸ್ಟಾಲಿನ್

 

ಪ್ರಾರ್ಥನಾ ಅಂಶ:

ನಮ್ಮ ಸಹ ಸೇವಕರಿಗಾಗಿ ಮತ್ತು ಅವರ ಮೂಲಕ ಭೇಟಿಯಾಗುವ ಹಳ್ಳಿಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al