Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 21.12.2023
Share:

By Village Missionary Movement

Thursday, 21-Dec-2023

ಧೈನಂದಿನ ಧ್ಯಾನ(Kannada) – 21.12.2023

 

ಕ್ರಿಸ್ಮಸ್ ಉಡುಗೊರೆ

 

"…ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯವೆಂಬದಾಗಿ ಕರ್ತನಾದ ಯೇಸು ತಾನೇ ಹೇಳಿದ ಮಾತುಗಳನ್ನು ನೆನಪಿನಲ್ಲಿಟ್ಟುಕೊಂಡಿರಬೇಕು…" - ಅಪೊಸ್ತಲ 20:35

 

"ಅಪ್ಪಾ! ನನ್ನ ಜೊತೆ ಓದುತ್ತಿರುವ ಸುರೇಶ್ ತುಂಬಾ ಬಡವ. ಅವನಿಗೆ ಕ್ರಿಸ್‌ಮಸ್‌ಗೆ ಡ್ರೆಸ್ ಕೊಡುತ್ತೇನೆ ಅಪ್ಪಾ" ಎಂದು ಡೇವಿಡ್ ಉತ್ಸಾಹದಿಂದ ತನ್ನ ತಂದೆ ಡೇನಿಯಲ್ ಬಳಿ ಅನುಮತಿ ಕೇಳಿದನು. "ನಿನ್ನೆಯಷ್ಟೇ ಡ್ರೆಸ್ ತೆಗೆದುಕೊಂಡ್ವಿ ಅಲ್ವಾ. ಆಗಲೇ ಹೇಳಿದ್ರೆ ಇನ್ನೂ ಒಂದು ಸೆಟ್ ತಗೊಂಡಿರಬಹುದಲ್ಲಾ" ಎಂದರು ಡೇನಿಯಲ್. "ನಾನು ತೆಗೆದುಕೊಂಡಿರುವ ಎರಡು ಸೆಟ್‌ಗಳಲ್ಲಿ ಒಂದನ್ನು ಅವನಿಗೆ ಕೊಡುತ್ತೇನೆ ಅಪ್ಪಾ" ಎಂದು ಡೇವಿಡ್ ಹೇಳಿ ಮುಗಿಸುವ ಮೊದಲು, "ಅವುಗಳ ಬೆಲೆ ಏನು ಅಂತ ನಿನಗೆ ಗೊತ್ತೇನೋ?" ಎಂದು ಕೋಪದಿಂದ ಕೂಗಿದರು ಡೇನಿಯಲ್. "ಅಪ್ಪಾ! ಬಡವರಿಗೆ ಕೊಡೋದು ಯೇಸಪ್ಪನಿಗೆ ಕೊಡೋದು ಅಪ್ಪಾ. ದುಬಾರಿಯಾದದ್ದನ್ನೇ ಕೊಡಬೇಕಲ್ವಾ ಅಪ್ಪಾ. ಪ್ಲೀಸ್ ಅಪ್ಪಾ! ಅವನ ಕಣ್ಣುಗಳಲ್ಲಿ ಕಣ್ಣೀರು ಸುರಿಯಿತು.

 

"ಎರಡು ಡ್ರೆಸ್‌ಗಳಲ್ಲಿ ಒಂದನ್ನು ಕೊಟ್ಟುಬಿಟ್ರೆ, ಹೊಸ ವರ್ಷಕ್ಕೂ ಕ್ರಿಸ್ಮಸ್ ಡ್ರೆಸ್ಸನ್ನೇ ಹಾಕೋ ಬೇರೆ ತೆಗೆದುಕೊಡೋದಿಲ್ಲ" ಎಂದು ಡೇನಿಯಲ್ ದೃಢವಾಗಿ ಹೇಳಿಬಿಟ್ಟರು. "ಥ್ಯಾಂಕ್ಸ್ ಅಪ್ಪಾ" ಎಂದು ಡೇವಿಡ್ ಪ್ರಜ್ವಲಿಸಿದ ಮುಖದಿಂದ ಹೇಳಿದನು. “ಹೊಸ ಹೊಸ ಬಟ್ಟೆ ತೊಡಬೇಕು ಎಂದು ಬಯಸುವ ತನ್ನ ಮಗನಾ ಹೀಗೆ ಮಾತಾಡುತ್ತಿದ್ದಾನೆ” ಎಂದು ಡೇನಿಯಲ್ ಆಶ್ಚರ್ಯಚಕಿತನಾದ. ಕ್ರಿಸ್ಮಸ್ ಎಂದರೇನು? ಉನ್ನತನಾದ ದೇವರು ತನ್ನ ಒಬ್ಬನೇ ಮಗನನ್ನು ಈ ಲೋಕಕ್ಕೆ ಉಡುಗೊರೆಯಾಗಿ ಕೊಟ್ಟಿದ್ದೇ. ಇದು ಉತ್ತಮ ಕೊಡುಗೆಯಾಗಿದೆ!

 

ಮದುವೆಗೆ ಮುಂಚೆಯೇ ಗರ್ಭಿಣಿಯಾದರೆ ಯೆಹೂದಿ ಸಮುದಾಯವು ತನ್ನನ್ನು ಕಲ್ಲೆಸೆದು ಕೊಲ್ಲುತ್ತದೆ ಎಂದು ತಿಳಿದಿದ್ದರೂ, ಗೇಬ್ರಿಯಲ್ ದೇವದೂತರಿಂದ ಸುದ್ದಿ ತಿಳಿದ ಕನ್ನಿಕೆಯಾದ ಮರಿಯಳು, ದೇವಕುಮಾರನನ್ನು ಹೆರಲು ತನ್ನನ್ನೇ ಅರ್ಪಿಸಿಕೊಂಡಳು.

 

ಶಾಸ್ತ್ರಿಗಳು, ನಕ್ಷತ್ರವು ಮಾರ್ಗತೋರಿಸಲು ಬಹುದೂರ ಪ್ರಯಾಣ ಮಾಡಿ ಬಂದು ಬಾಲಕನಾದ ಯೇಸುವನ್ನು ಕಂಡರು. ಹುಟ್ಟಿರುವವರು ರಾಜಾಧಿರಾಜನೆಂದು ಸೂಚಿಸಲು ಚಿನ್ನವನ್ನು, ಅವರು ಲೋಕದಲ್ಲಿರುವ ಎಲ್ಲಾ ಜನರಿಗಾಗಿ ಬಲಿಯಾಗುತ್ತಾರೆ ಎಂಬುದನ್ನು ಸೂಚಿಸಲು ರಕ್ತಬೋಳಗಳನ್ನು, ಅವರ ಸಾರ್ವಭೌಮತ್ವದ ಸುಗಂಧವು ಪ್ರಪಂಚದಾದ್ಯಂತ ಹರಡುತ್ತದೆ ಎಂಬುದನ್ನು ಸೂಚಿಸಲು ಧೂಪವನ್ನು ಕಾಣಿಕೆಯಾಗಿ ಅರ್ಪಿಸಿದರು. ಈ ಎಲ್ಲಾ ವಸ್ತುಗಳು ಅಮೂಲ್ಯವಾದವುಗಳು.

 

ಇಂದು ನಾವು ಕ್ರಿಸ್ಮಸ್ ಅನ್ನು ಹೇಗೆ ಆಚರಿಸುತ್ತಿದ್ದೇವೆ? ಹೊಸ ಬಟ್ಟೆ ಧರಿಸಿ, ಹಬ್ಬದೂಟ ಮಾಡಿ, ಬಂಧು ಮಿತ್ರರಿಗೆ ಉಡುಗೊರೆಗಳನ್ನು ಕಳುಹಿಸಿ ಸಂಭ್ರಮಿಸುತ್ತಿದ್ದೇವೆ. ಬೇಡ ಎಂದು ಹೇಳುತ್ತಿಲ್ಲ. ಆದರೆ ಬಡವರ ಬಗ್ಗೆ ಯೋಚಿಸುತ್ತಿದ್ದೇವಾ? ಬಡವರಿಗೆ ಮತ್ತು ಮಿಷನರಿಗಳಿಗೆ ಉಡುಗೊರೆಗಳನ್ನು ನೀಡಿ ಅವರನ್ನು ಸಂತೋಷಪಡಿಸೋಣ. ನಮಗಿರುವವುಗಳಲ್ಲಿ ಕೆಲವನ್ನು ಕಷ್ಟದಲ್ಲಿರುವ ಜನರಿಗೆ ಕೊಟ್ಟು ತ್ಯಾಗ ಮನೋಭಾವದಿಂದ ಕ್ರಿಸ್‌ಮಸ್‌ ಅನ್ನು ಆಚರಿಸೋಣ. ತನ್ನ ಪ್ರೀತಿಯ ಮಗನನ್ನು ಈ ಲೋಕಕ್ಕೆ ಕಳುಹಿಸಿಕೊಟ್ಟ ತಂದೆಯ ತ್ಯಾಗ ಎಷ್ಟು ದೊಡ್ಡದು ಎಂದು ಯೋಚಿಸಿದರೆ ನಮ್ಮಿಂದ ತ್ಯಾಗವಿಲ್ಲದೆ ಕ್ರಿಸ್ಮಸ್ ಅನ್ನು ಆಚರಿಸಲು ಸಾಧ್ಯವೇ ಇಲ್ಲ.

- Mrs. ವನಜಾ ಬಾಲ್ರಾಜ್

 

ಪ್ರಾರ್ಥನಾ ಅಂಶ:

ಏಳು ಸಾವಿರ ಮಿಷನರಿಗಳು ಒಂದು ಲಕ್ಷ ಹಳ್ಳಿಗಳು ಎಂಬ ಗುರಿಯನ್ನು ತಲುಪಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al