Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 20.12.2023
Share:

By Village Missionary Movement

Wednesday, 20-Dec-2023

ಧೈನಂದಿನ ಧ್ಯಾನ(Kannada) – 20.12.2023

 

ಶುಭವಾರ್ತೆ 

 

"…ಒಳ್ಳೆಯ ವಾರ್ತೆಯು ಎಲುಬು ಗಳನ್ನು ಪುಷ್ಟಿಮಾಡುತ್ತದೆ" - ಜ್ಞಾನೋಕ್ತಿ 15:30

 

ಲಿಲ್ಲಿಯ ಪತಿ ಮಿಲಿಟರಿಯಲ್ಲಿ ಗಡಿ ಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಹಲವು ತಿಂಗಳುಗಳಿಂದ ಆತನಿಂದ ಹಣವಾಗಲಿ, ಮಾಹಿತಿಯಾಗಲಿ ಬರಲಿಲ್ಲ. ಆದ್ದರಿಂದ ಲಿಲ್ಲಿ ತನ್ನ ಇಬ್ಬರು ಮಕ್ಕಳನ್ನು ಪೋಷಿಸಲು ಕೆಲಸಕ್ಕೆ ಹೋದಳು. ಆಕೆಯ ಅಲ್ಪ ಆದಾಯವು ಕ್ರಿಸ್‌ಮಸ್‌ಗಾಗಿ ತನ್ನ ಮಕ್ಕಳಿಗೆ ಉಡುಪುಗಳು, ಕೇಕ್‌ಗಳು ಮತ್ತು ಇತರ ವಸ್ತುಗಳನ್ನು ಖರೀದಿಸಲು ಸಾಕಾಗಲಿಲ್ಲ. ಆಗ ಲಿಲ್ಲಿಯ ಗಂಡನಿಂದ ಒಂದು ಶುಭವಾರ್ತೆ ಬಂತು. "ನಾಳೆ ನಾನು ಮನೆಗೆ ಬರುತ್ತಿದ್ದೇನೆ" ಎಂಬುದೇ ಆ ಸುದ್ದಿ! ಅವಳ ಚಿಂತೆಗಳೆಲ್ಲ ಹಾರಿಹೋದವು. ಅವರು ಬಂದು ತನ್ನ ಹೆಂಡತಿ, ಮಕ್ಕಳಿಗೆ ಬೇಕಾದ ಎಲ್ಲವನ್ನೂ ತೆಗೆದುಕೊಟ್ಟರು. ಅವರ ಹೃದಯಗಳು ಹರ್ಷಿಸಿದವು.

 

ಸತ್ಯವೇದದಲ್ಲಿಯೂ ಸಹ ಮಲಾಕಿಯ ಪ್ರವಾದಿಯ ನಂತರ ಸುಮಾರು 400 ವರ್ಷಗಳ ಕಾಲ "ಕರ್ತನು ಹೇಳುತ್ತಿದ್ದಾರೆ" ಎಂಬ ಮಾತನ್ನು ಹೇಳಲು ಒಬ್ಬ ಪ್ರವಾದಿಯೂ ಇರಲಿಲ್ಲ. ಸತ್ಯವೇದದಲ್ಲಿ ಇದು ಕತ್ತಲೆಯ ಕಾಲವಾಗಿ ಕಾಣಲ್ಪಟ್ಟಿತು. ಈ ಕಾಲಘಟ್ಟದಲ್ಲಿ ದಿಢೀರ್ ಎಂದು ಪರಲೋಕದಿಂದ ಒಂದು ಶುಭವಾರ್ತೆ ಬಂತು. ದೇವಕುಮಾರನಾದ ಯೇಸು ಇಡೀ ಜಗತ್ತಿಗಾಗಿ ತನ್ನನ್ನೇ ಅರ್ಪಿಸಲು ರಕ್ಷಕನಾಗಿ ಜನಿಸಿದ್ದಾರೆ ಎಂಬುದೇ ಆ ಶುಭವಾರ್ತೆ! "ಬಾಯಾರಿದವನಿಗೆ ತಣ್ಣೀರು ಹೇಗೋ ದೂರ ದೇಶ ದಿಂದ ಬಂದ ಒಳ್ಳೆಯ ಸಮಾಚಾರವು ಹಾಗೆಯೇ" (ಜ್ಞಾನೋ. 25:25).

 

ಪ್ರಿಯರೇ! ನಾವು ಸಹ ಶುಭವಾರ್ತೆಯನ್ನು ಪ್ರೀತಿಸೋಣ, ಪ್ರತಿದಿನ ಸತ್ಯವೇದವನ್ನು ಓದೋಣ, ಆಗ ಕ್ರಿಸ್ತನಲ್ಲಿ ನಮಗೆ ದೊರೆಯುವ ಹೇಳಲಾಗದ ಪ್ರಯೋಜನಗಳು, ಆಶೀರ್ವಾದಗಳು ಮತ್ತು ಶ್ರೇಷ್ಠತೆಗಳನ್ನು ತಿಳಿದುಕೊಳ್ಳುತ್ತೇವೆ. ಆದ್ದರಿಂದ ಸತ್ಯವೇದದ ಮೂಲಕ ಪ್ರತಿದಿನ ಪರಲೋಕದಿಂದ ಶುಭವಾರ್ತೆಯನ್ನು ನಿರೀಕ್ಷಿಸೋಣ. ಅದು ಪಾಪದಿಂದ ಸಿಗುವ ಕ್ಷಣಿಕ ಸುಖವಲ್ಲ, ಹಣ ಕೊಟ್ಟು ಕೊಳ್ಳುವ ತಾತ್ಕಾಲಿಕ ಸಮಾಧಾನವೂ ಅಲ್ಲ!

 

ಒಂದು ದಿನ ನಾವು ಸಹ ಯೇಸು ಎಂಬ ಶುಭವಾರ್ತೆ ಇಲ್ಲದೆ ಕತ್ತಲೆಯಲ್ಲಿ, ಪಾಪದಲ್ಲಿ, ಶಾಪದಲ್ಲಿ ಜೀವಿಸುತ್ತಿದ್ದೆವು. ನಮಗೆ ಈ ಶುಭವಾರ್ತೆ ಸಿಕ್ಕ ತಕ್ಷಣ ನಮ್ಮ ಜೀವನ ಸುಖಮಯವಾಯಿತು. ಆದರೆ ಇಂದಿಗೂ ಅನೇಕರಿಗೆ ಸುವಾರ್ತೆ ತಲುಪದೆ, ಸುವಾರ್ತೆಯಿಂದ ಉಂಟಾಗುವ ಆನಂದವನ್ನು ಅನುಭವಿಸದೆ ಬದುಕುತ್ತಿದ್ದಾರೆ. ಅಂತಹ ಜನರಿಗೆ ಈ ಶುಭವಾರ್ತೆಯನ್ನು ಹೊತ್ತುಕೊಂಡು ಹೋಗಿ ತಲುಪಿಸಲು ನೀವು ಸಿದ್ಧರಿದ್ದೀರಾ? ಇಂದೇ ಕಾರ್ಯನಿರ್ವಹಿಸೋಣ!

- Mrs. ಬ್ಯೂಲಾ 

 

ಪ್ರಾರ್ಥನಾ ಅಂಶ:

ಚಿಕ್ಕ ಮಕ್ಕಳಿಗಾಗಿ ಪ್ರಸಾರ ಮಾಡುತ್ತಿರುವ ಯೇಸುವಿನ ಸಂತತಿ ಎಂಬ ಕಾರ್ಯಕ್ರಮಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet jojobet jojobet jojobet jojobet holiganbet palacebet holiganbet romabet teosbet betgit cratosroyalbet cratosroyalbet gameofbet