Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 19.12.2023
Share:

By Village Missionary Movement

Tuesday, 19-Dec-2023

ಧೈನಂದಿನ ಧ್ಯಾನ(Kannada) – 19.12.2023

 

ಆಚರಣೆ

 

"ಹಬ್ಬದ ದಿವಸಗಳನ್ನು ತೀರಿಸಿಕೊಂಡು… ಬಾಲಕನಾದ ಯೇಸು ಯೆರೂಸಲೇವಿುನಲ್ಲಿಯೇ ಉಳುಕೊಂಡನು;" - ಲೂಕ 2:43

 

ಹಬ್ಬ ಎಂದರೇನೆ ಎಲ್ಲರಿಗೂ ಒಂದು ಸಂಭ್ರಮ. ಅದರಲ್ಲೂ ಕ್ರಿಸ್‌ಮಸ್ ಎಂದರೆ ಕೇಕ್, ಹೊಸ ಉಡುಗೆ, ಸ್ಟಾರ್, ಕ್ರಿಸ್‌ಮಸ್ ಟ್ರೀ, ಹೀಗೆ ಹಲವು ಹೇಳಬಹುದು. ಮತ್ತೊಂದೆಡೆ ಅವರ ಮನೆಯನ್ನು ಬಣ್ಣಬಣ್ಣದ ದೀಪಗಳಿಂದ ಅಲಂಕರಿಸುವುದು, ಸಂಬಂಧಿಕರಿಗೆ ಕ್ರಿಸ್ಮಸ್ ಶುಭಾಶಯಗಳನ್ನು ಕಳುಹಿಸುವುದು ಮತ್ತು ಇನ್ನೂ ಅನೇಕ ವಿಷಯಗಳು ಇವೆ! ಒಂದೆಡೆ ಹೀಗಿದ್ದರೆ, ಮತ್ತೊಂದೆಡೆ, ಕ್ರಿಸ್‌ಮಸ್ ಕ್ಯಾರೋಲ್‌ಗಳು, ಕ್ರಿಸ್‌ಮಸ್ ಹಾಡುಗಳು ಕ್ರಿಸ್‌ಮಸ್‌ ತಾತ ಎಂಬ ಬಹಿರಂಗವಾದ ಕಾರ್ಯಗಳು ಯೇಸುವಿನ ಜನನವನ್ನು ಬಹಿರಂಗಪಡಿಸುತ್ತಿವೆ.

 

ಇದೇ ರೀತಿ ಯೇಸುಕ್ರಿಸ್ತನು ಜೀವಿಸಿದ ದಿನಗಳಲ್ಲಿಯೂ ಸಹ, ಪ್ರತಿ ವರ್ಷ ಯೆರೂಸಲೇಮಿನಲ್ಲಿ ಪಸ್ಕಾ ಹಬ್ಬವನ್ನು ಆಚರಿಸಲಾಗುತ್ತಿತ್ತು. ಈ ಹಬ್ಬಕ್ಕೆ ಯೇಸು ಮತ್ತು ಅವರ ತಾಯಿ, ತಂದೆ ಮತ್ತು ಎಲ್ಲಾ ಸಂಬಂಧಿಕರು ಹಾದುಹೋದರು. ಹಬ್ಬದ ದಿವಸಗಳನ್ನು ಮುಗಿಸಿ ಕೊಂಡು ಹಿಂದಿರುಗುವಾಗ ಬಾಲಕನಾದ ಯೇಸುವು ಯೆರೂಸಲೇಮಿನಲ್ಲಿಯೇ ಉಳಿದನು. ಇದು ಆತನ ತಂದೆ, ತಾಯಿಗೂ ತಿಳಿದಿರಲಿಲ್ಲ. ಆತನು ಗುಂಪಿನಲ್ಲಿ ಇದ್ದಿರಬಹುದೆಂದು ಅವರು ಭಾವಿಸಿ ಒಂದು ದಿನದ ಪ್ರಯಾಣವನ್ನು ಮಾಡಿದ ಮೇಲೆ ತಮ್ಮ ಬಳಗದವರಲ್ಲಿಯೂ ಪರಿ ಚಯವಾದವರಲ್ಲಿಯೂ ಆತನನ್ನು ಹುಡುಕಿದರು. ಅವರು ಆತನನ್ನು ಕಂಡುಕೊಳ್ಳದೆ ಹೋದದರಿಂದ ಆತನನ್ನು ಹುಡುಕುತ್ತಾ ಮತ್ತೆ ಯೆರೂಸಲೇಮಿಗೆ ಹಿಂತಿರುಗಿ ಬಂದರು. ಕಾರಣ, ಹಬ್ಬದ ಸಂಭ್ರಮದಲ್ಲಿ ಯೇಸುವನ್ನು ಮರೆತುಬಿಟ್ಟರು.

 

ಪ್ರಿಯರೇ, ಯೇಸುವಿನ ತಾಯಿ ಮತ್ತು ತಂದೆ ಅವರನ್ನು ಮರೆತರು. ನಾವು ಕೂಡ ನಮ್ಮ ಕ್ರಿಸ್ಮಸ್ ಆಚರಣೆಗಳಲ್ಲಿ ಕ್ರಿಸ್ತನ ಜನನದ ಉದ್ದೇಶವನ್ನು ಮರೆತುಬಿಡುತ್ತಿದ್ದೇವೆ. ಸಾಂಪ್ರದಾಯಿಕ ಅಭ್ಯಾಸವಾಗಿ, ಸಾಮಾನ್ಯವಾಗಿ ಅನೇಕ ವಿಷಯಗಳಲ್ಲಿ ಮುಳುಗಿಹೋಗಿ ನನ್ನ ಹೃದಯದಲ್ಲಿ ಜನಿಸಿರುವ ಯೇಸು ಇತರರ ಹೃದಯದಲ್ಲಿ ಹುಟ್ಟಲು ನಾನು ಏನು ಮಾಡಬೇಕೆಂದು ಮರೆತು ನಮ್ಮ ಅಕ್ಕಪಕ್ಕದಲ್ಲಿ ಇರುವವರಿಗೆ ಕೇಕ್ ಮತ್ತು ತಿಂಡಿತಿನಿಸುಗಳನ್ನು ಕೊಟ್ಟು, ಯೇಸುವನ್ನು ಕೊಡದೇ ಮರೆತುಬಿಡುವ ಸಾಧ್ಯತೆಯೂ ಇದೆ. ಮತ್ತು ನಿರ್ಗತಿಕರು, ವೈವಿಧ್ಯಮಯ ಜನರು ಹಾಗೂ ಅನಾಥರು, ದಿಕ್ಕಿಲ್ಲದವರು ಇಂತವರನ್ನು ಮರೆಯದೆ ಅವರಿಗೂ ಸಹಾಯ ಮಾಡೋಣ. ಈ ಹಬ್ಬ ಹರಿದಿನಗಳಲ್ಲಿ ಸುವಾರ್ತೆ ಸೇವೆಯ ಮಹತ್ವವನ್ನು ಮರೆತುಬಿಡದೇ ತೀವ್ರವಾಗಿ ಪ್ರಕಟಿಸೋಣ. 

- Mrs. ಗ್ರೇಸ್ ಜೀವಮಣಿ

 

ಪ್ರಾರ್ಥನಾ ಅಂಶ:

ಕಣ್ಮಣಿಯೆ ಕೇಳ್ ಪ್ರಾರ್ಥನಾ ಯೋಜನೆಯಲ್ಲಿ ಭಾಗವಹಿಸುವ ಮಕ್ಕಳು ಮತ್ತು ಹದಿಹರೆಯದವರಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al