Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 17.12.2023
Share:

By Village Missionary Movement

Sunday, 17-Dec-2023

ಧೈನಂದಿನ ಧ್ಯಾನ(Kannada) – 17.12.2023

 

ಏಂಜೆಲ್ಸ್

 

"ಆ ದೂತನು ಅವರಿಗೆ - ಹೆದರಬೇಡಿರಿ, ಕೇಳಿರಿ; ಜನರಿಗೆಲ್ಲಾ ಮಹಾ ಸಂತೋಷವನ್ನುಂಟುಮಾಡುವ ಶುಭಸಮಾಚಾರವನ್ನು ನಿಮಗೆ ತಿಳಿಸುತ್ತೇನೆ" - ಲೂಕ 2:10

 

ಮುದ್ದು ಪುಟಾಣಿಗಳೇ, ಹೇಗಿದ್ದೀರಾ, ಚೆನ್ನಾಗಿದ್ದೀರಾ? ಹೌದು, ಪುಟಾಣಿಗಳೇ ಇದು ಕ್ರಿಸ್ಮಸ್ ದಿನಗಳು! ಕ್ರಿಸ್ಮಸ್ ಎಂದರೇನು? 2000 ವರ್ಷಗಳ ಹಿಂದೆ, ಯೇಸುಕ್ರಿಸ್ತನು ಈ ಭೂಮಿಯಲ್ಲಿ ಬಾಲಕನಾಗಿ ಜನಿಸಿದರು! ನಮ್ಮ ಪಾಪಗಳನ್ನು ಕ್ಷಮಿಸಲು ಮತ್ತು ನಮ್ಮನ್ನು ಬಿಡಿಸಲು ಅವರು ಜನಿಸಿದ ದಿನವೇ ಕ್ರಿಸ್ಮಸ್. ಕ್ರಿಸ್ಮಸ್ ಎಂದರೆ ಹೊಸ ಉಡುಗೆ, ಸಿಹಿ, ಕ್ರಿಸ್ಮಸ್ ಮರ, ಸಾಂಟಾ ಕ್ಲಾಸ್, ಹೀಗೆ ತುಂಬಾ ಜಾಲಿಯಾಗಿ ಇರ್ತೀರ ಅಲ್ವಾ!

 

ನಿಮ್ಮಂತೆಯೇ ಜೆಮಿ ಎಂಬ ಪುಟ್ಟ ಹುಡುಗಿ ಇದ್ದಳು. ಅವಳು ತನ್ನ ಅಮ್ಮನ ಹತ್ತಿರ ಹೋಗಿ, ಅಮ್ಮ ನನಗೆ ಏಂಜೆಲ್ (ದೂತನು) ನಂತೆ ಡ್ರೆಸ್, ರೆಕ್ಕೆಗಳು, ಕಿರೀಟ, ಎಲ್ಲವನ್ನೂ ತೆಗೆದುಕೊಡಿ ನಾನು ಕೂಡ ಏಂಜೆಲ್ ನಂತೆ ಹೊಳೆಯಬೇಕು ಅಂದಳು. ತಕ್ಷಣ ಅಮ್ಮ, ಜೆಮಿ ಆ ಏಂಜೆಲ್ ಬಗ್ಗೆ ನಿನಗೇನಾದರೂ ಗೊತ್ತಾ, ಅವರು ಕ್ರಿಸ್ಮಸ್ ನಂದು ಏನು ಕಾರ್ಯ ಮಾಡುದ್ರು ಗೊತ್ತಾ ಎಂದು ಕೇಳಿದರು. ತಕ್ಷಣ ಜೆಮಿ ಅಂಥಾ ದೊಡ್ಡ ಕಾರ್ಯ ಏನು ಮಾಡಿಬಿಟ್ರು ಎಂದು ಕೇಳಿದಳು. ಅಮ್ಮ ಏಂಜೆಲ್ ಬಗ್ಗೆ ಹೇಳಲು ಪ್ರಾರಂಭಿಸಿದರು.

 

ಆ ದಿನಗಳಲ್ಲಿ ಕುರಿಕಾಯುವ ಕುರುಬರನ್ನು ಯಾರೂ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ಸಮಾಜದಲ್ಲಿ ಅವರನ್ನು ಕಡೆಗಣಿಸಲಾಗಿತ್ತು ಮತ್ತು ಬಹಿಷ್ಕರಿಸಲಾಗಿತ್ತು. ಅವರು ಹೊಲದಲ್ಲಿ ಘೋರವಾದ ಚಳಿಯಲ್ಲಿ ತಮ್ಮ ಹಿಂಡುಗಳನ್ನು ಮೇಯಿಸುತ್ತಿದ್ದ ದಿನಗಳಲ್ಲಿಯೇ ಯೇಸು ಕ್ರಿಸ್ತನು ಬೇತ್ಲೆಹೇಮಿನಲ್ಲಿ ಜನಿಸಿದರು. ಈ ಏಂಜೆಲ್ ಯೇಸುಕ್ರಿಸ್ತನು ಜನಿಸಿದ ಶುಭಸಮಾಚಾರವನ್ನು ಪ್ರಕಟಿಸಲು

 

ರಾಜನ ಅರಮನೆಗೆ ಹೋಗಲಿಲ್ಲ ಅಥವಾ ಶ್ರೀಮಂತರನ್ನು ಹುಡುಕಿ ಹೋಗಲಿಲ್ಲ, ಆದರೆ ಹೊಲಕ್ಕೆ ಹೋಗಿ ಕುರುಬರಿಗೆ ಪ್ರಕಟಿಸಿತು. ನಿಮ್ಮನ್ನು ಬಿಡಿಸಲು, ನಿಮ್ಮನ್ನು ರಕ್ಷಿಸಲು ಒಬ್ಬ ರಕ್ಷಕನು ಹುಟ್ಟಿದ್ದಾನೆ ಎಂದು ಹೇಳಿದರು. ಕೂಡಲೆ ಕುರುಬರು ಆ ಚಳಿಯಲ್ಲೇ ಯೇಸುವನ್ನು ನೋಡಲು ಹೊರಟರು. ಕತ್ತಲೆಯಲ್ಲಿದ್ದ ಅವರಿಗೆ ಯೇಸು ಎಂಬ ಬೆಳಕನ್ನು ಹೊತ್ತಿಸಿಬಿಟ್ಟರು ಆ ಏಂಜೆಲ್ಸ್. ಈ ಏಂಜೆಲ್ಸ್ ಹೋಗಿ ಕುರುಬರಿಗೆ ಹೇಳದೇ ಇದ್ದಿದ್ದರೆ, ಅವರಿಗೆ ತಿಳಿಯುತ್ತಿತ್ತಾ? ಹಾಗಾಗಿ ಏಂಜೆಲ್ ನಂತೆ ಡ್ರೆಸ್ ಹಾಕಿಕೊಂಡು Crown ಹಾಕಿಕೊಂಡು ನಮ್ಮನ್ನು ನಾವೇ ಅಲಂಕರಿಸಿಕೊಂಡರೆ ಮಾತ್ರ ಸಾಕಾಗುವುದಿಲ್ಲ. ನೀನೂ ಕೂಡ ಯೇಸಪ್ಪನ ಬಗ್ಗೆ ಗೊತ್ತಿಲ್ಲದವರಿಗೆ ಹೇಳಬೇಕು ಓಕೆ ನಾ ಎಂದರು. ಕೂಡಲೇ ಜೆಮಿ ಅಮ್ಮಾ ಈ ಕ್ರಿಸ್‌ಮಸ್‌ನಲ್ಲಿ ನಾನು ಖಂಡಿತವಾಗಿಯೂ ಎಲ್ಲರಿಗೂ ಯೇಸಪ್ಪ ಬಗ್ಗೆ ಹೇಳಿ ಅವರಿಗೆ ಸಹಾಯ ಮಾಡಿ ಅರ್ಥಪೂರ್ಣವಾದ ಕ್ರಿಸ್ಮಸ್ ಅನ್ನು ಆಚರಿಸಿ ಯೇಸಪ್ಪನನ್ನು ಸಂತೋಷಪಡಿಸುತ್ತೇನೆ ಎಂದಳು. ಏನು ಪುಟಾಣಿಗಳೇ, ನೀವು ಸಹ ಜೆಮಿ ಹಾಗೆ ಈ ರೀತಿಯ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಾ?

- Mrs. ಸಾರಾಳ್ ಸುಭಾಷ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al