Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 15.12.2023
Share:

By Village Missionary Movement

Friday, 15-Dec-2023

ಧೈನಂದಿನ ಧ್ಯಾನ(Kannada) – 15.12.2023

 

ಭೂಮಿಯಲ್ಲಿ ಸಮಾಧಾನ 

 

"ಮೇಲಣಲೋಕಗಳಲ್ಲಿ ದೇವರಿಗೆ ಮಹಿಮೆ,ಭೂಲೋಕದಲ್ಲಿ ಮನುಷ್ಯರೊಳಗೆ ಸಮಾಧಾನದೇವರು ಅವರಿಗೆ ಒಲಿಯುತ್ತಾನೆಎಂದು ದೇವರನ್ನು ಕೊಂಡಾಡುತ್ತಾ ಹೇಳಿದರು" - ಲೂಕ 2:14

 

ಮತ್ತೊಂದು ಕ್ರಿಸ್‌ಮಸ್‌ ಕಾಲ ಬಂದುಬಿಟ್ಟಿತು. ಕ್ರಿಸ್‌ಮಸ್ ಗೀತೆಗಳನ್ನು ಭಕ್ತಿಯಿಂದ ಗ್ರಹಿಸಿ ಅಥವಾ ಯಾವುದೇ ಗ್ರಹಿಕೆ ಇಲ್ಲದೆಯೂ ಹಾಡಬಹುದು. ಯೇಸುವಿಗೆ ಛತ್ರದಲ್ಲಿ ಸ್ಥಳವಿಲ್ಲದೆ ಹೋದಂತೆಯೇ, ಕ್ರಿಸ್ಮಸ್ ಆಚರಣೆಗಳಿಂದ ನಮ್ಮ ಹೃದಯಗಳಲ್ಲೂ ಮತ್ತು ಮನೆಗಳಲ್ಲೂ ಸ್ಥಳವಿಲ್ಲದೆ ಹೋಗಬಹುದು; ಅಥವಾ ಯೇಸು ಹುಟ್ಟಿದ ದನದ ಕೊಟ್ಟಿಗೆಯಾಗಿ ನಮ್ಮ ಹೃದಯವಿದ್ದು ದೇವರು ಇಮ್ಮಾನುವೇಲನಾಗಿ ಎಂದೆಂದಿಗೂ ನಮ್ಮೊಂದಿಗಿರಲು ಜನಿಸಿದ್ದಾರೆ ಎಂಬ ನಂಬಿಕೆಯೊಂದಿಗೆ ನಾವು ಆಚರಿಸಬಹುದು. ಅನ್ಯಜನರಂತೆ ಆಟ, ನಾಟ್ಯ, ಕೊಂಡಾಟಗಳೊಂದಿಗೆ ಮಾತ್ರವೇ ಅರ್ಥಹೀನ ಕ್ರಿಸ್ಮಸ್ ಅನ್ನು ಆಚರಿಸಬಹುದು. ಕೆಲವರು ಕಷ್ಟ, ನಷ್ಟಗಳಿಂದಾಗಿ ಕ್ರಿಸ್ಮಸ್ ದಿನದಂದು ದುಃಖಿಸುತ್ತಿರಬಹುದು.

 

ಕಾರ್ಯಗಳು ಹೀಗಿರಲು, ಈ ದಿನಗಳಲ್ಲಿ ಎಲ್ಲಿಯೂ ಇಲ್ಲಿಯವರೆಗೂ ಕಂಡಿರದಂಥಹ ಉಗ್ರಗಾಮಿಗಳು, ಹಿಂಸೆ, ಕೊಲೆಗಳು, ವಿಚ್ಛೇದನಗಳು, ಯುದ್ಧಗಳು, ಅಪಘಾತಗಳು, ಪ್ರಕೃತಿ ವಿಕೋಪಗಳು, ಎಲ್ಲೆಡೆ ಕಣ್ಣೀರು, ಸಮಾಧಾನದ ಕೊರತೆ, ಎಲ್ಲಾದರಲ್ಲೂ ಅನಿಶ್ಚಿತತೆ, ಎಲ್ಲೆಡೆ ಭಯಾನಕತೆಗಳು! ಮಾನವಕುಲವು ಸಮಾಧಾನವನ್ನು ಹುಡುಕುತ್ತಾ ಅಲೆದಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸಮಾಧಾನದ ಪ್ರಭುವಾಗಿ ಅವತರಿಸಿದ ಯೇಸುವಿನ ಜನನವನ್ನು ನಾವು ಹೇಗೆ ಆಚರಿಸಬೇಕೆಂದು ದೇವರು ಬಯಸುತ್ತಿದ್ದಾರೆ ಎಂದು ನೋಡೋಣ!

 

ಮಾನವಕುಲದ ಪಾಪಗಳಿಗಾಗಿ ತನ್ನ ಅಮೂಲ್ಯವಾದ ರಕ್ತವನ್ನು ಸುರಿಸಿ, ದೇವರಿಗೂ ಮತ್ತು ಮನುಷ್ಯರಿಗೂ ನಡುವೆ ಸಮಾಧಾನವನ್ನು ಸ್ಥಾಪಿಸಲು ಯೇಸು ಮನುಷ್ಯನಾದನು ಎಂಬುದೇ ಕ್ರಿಸ್ಮಸ್ ನ ಮೊದಲ ಸಂದೇಶ. (ಕೊಲೊಸ್ಸೆ 1:20) ಆತನೇ ನಮ್ಮ ಸಮಾಧಾನಕ್ಕೆ ಕಾರಣನು. (ಎಫೆಸದವರಿಗೆ 2:14) ನಾವು ಮತ್ತು ಭೂಮಿಯ ಮೇಲಿರುವ ಪ್ರತಿಯೊಬ್ಬರೂ ಈ ಸಮಾಧಾನವನ್ನು ಪಡೆದು ಮೋಕ್ಷ ಭಾಗ್ಯವನ್ನು ಪಡೆಯಬೇಕು ಎಂಬ ದೇವರ ಒಳ್ಳೆಯ ಉದ್ದೇಶವೇ ಅವರು ಮನುಷ್ಯರ ಮೇಲಿಟ್ಟಿರುವ ಪ್ರೀತಿ. ಈ ಸಮಾಧಾನವನ್ನು ಹೊಂದಿರುವವರೇ ನಿಜವಾದ ಕ್ರೈಸ್ತರು. ಅವರು ಮಾತ್ರವೇ ಈ ಸಮಾಧಾನವಿಲ್ಲದ ಜಗತ್ತಿನಲ್ಲಿ ಎಲ್ಲಿಯಾದರೂ ಯಾವ ಸಮಯದಲ್ಲಾದರೂ ಸಮಾಧಾನದಿಂದ ಇರಲು ಸಾಧ್ಯ. ಇದೇ ಬಲವಾದ ಸುವಾರ್ತೆಯಾಗಿದೆ. ನೀವು ನಿಜವಾದ ಕ್ರೈಸ್ತರಾ? ನಿಮ್ಮ ಉತ್ತರ "ಇಲ್ಲ" ಎಂದು ಅಥವಾ "ಅನುಮಾನ" ಎಂದು ಇರುವುದಾದರೆ ಈಗಲೇ ಆ ಸಮಾಧಾನವನ್ನು ಪಡೆದುಕೊಂಡು ಕ್ರಿಸ್ಮಸ್‌ಗೆ ಸಿದ್ಧರಾಗಿರಿ. ಮೊದಲ ಕ್ರಿಸ್ಮಸ್ ದಿನದಂದು ದೇವದೂತರ ಸೈನ್ಯವು ಸ್ತುತಿಸಿದಂತೆ ಮೇಲಣಲೋಕಗಳಲ್ಲಿ ದೇವರಿಗೆ ಮಹಿಮೆಯುಂಟಾಗುತ್ತದೆ. ಆಮೆನ್!

- Mrs. ಶಕ್ತಿ ಶಂಕರ್ ರಾಜ್

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್‌ನಲ್ಲಿ ತರಬೇತಿಯಲ್ಲಿರುವ ಮಿಷನರಿಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al