Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 12.12.2023
Share:

By Village Missionary Movement

Tuesday, 12-Dec-2023

ಧೈನಂದಿನ ಧ್ಯಾನ(Kannada) – 12.12.2023

 

ನಿಜವಾದ ಬೆಳಕು

 

"ನಿಜವಾದ ಬೆಳಕು ಲೋಕಕ್ಕೆ ಬರುವದಾಗಿತ್ತು; ಆ ಬೆಳಕೇ ಪ್ರತಿ ಮನುಷ್ಯನಿಗೂ ಬೆಳಕನ್ನು ಕೊಡುವಂಥದು." - ಯೋಹಾನ 1:9

 

ಪರಿಶುದ್ಧ ಗ್ರಂಥದಲ್ಲಿ, ದೆವ್ವಗಳ ದಂಡಿನಿಂದ ಹಿಡಿಯಲ್ಪಟ್ಟು ಕಲ್ಲುಗಳಿಂದ ತನ್ನನ್ನು ಕಡಿದುಕೊಳ್ಳುತ್ತಿದ್ದ ಹತೋಟಿಗೆ ತರಲು ಯಾರಿಂದಲೂ ಸಾಧ್ಯವಾಗದಿದ್ದ ಸಮಾಧಿಯ ಗವಿಗಳಲ್ಲಿ ವಾಸಿಸುತ್ತಿದ್ದ ಒಬ್ಬ ಮನುಷ್ಯನಿದ್ದನು. ಒಂದು ದಿನ ಯೇಸು ಆ ಮಾರ್ಗವಾಗಿ ಹೋದರು. ಅವನಲ್ಲಿದ್ದ ದೆವ್ವಗಳನ್ನು ತೊಲಗಿಸಿದರು. ಅವನು ಬಟ್ಟೆಗಳನ್ನು ಹಾಕಿಕೊಂಡು ಸ್ವಸ್ಥಬುದ್ಧಿಯಿಂದ ಕೂತಿದ್ದನು. ನಂತರ ಅನೇಕರು ದೇವರ ಬಳಿಗೆ ಬರಲು ಕಾರಣನಾಗಿ ಆ ಸಮಾಧಿಯ ಮನುಷ್ಯನನ್ನು ಕರ್ತನು ಮಾರ್ಪಡಿಸಿದರು. 

 

ಸಾಂಪ್ರದಾಯಿಕ ಕ್ರೈಸ್ತ ಕುಟುಂಬದಲ್ಲಿ ಜನಿಸಿದ ಒಬ್ಬ ವ್ಯಕ್ತಿ ಬಾಲ್ಯದಲ್ಲಿ ಭಾನುವಾರ ಶಾಲೆ ಮತ್ತು ಚರ್ಚ್ ಸೇವೆಗಳಿಗೆ ಹಾಜರಾಗುತ್ತಿದ್ದನು. ಪ್ರಾರ್ಥನೆ ಮಾಡುತ್ತಾ, ಸತ್ಯವೇದವನ್ನು ಓದುತ್ತಾ, ತನ್ನ ಹೆತ್ತವರಿಗೆ ವಿಧೇಯನಾಗುತ್ತಾ ಹೀಗೆ ಒಳ್ಳೆಯ ಮಗುವಾಗಿ ಬೆಳೆದುಬಂದನು. ಆದರೆ ಅವನು ಬೆಳೆಯುತ್ತಾ, ಬೆಳೆಯುತ್ತಾ ಕ್ರಮೇಣ ದೇವರಿಂದ ಬೇರ್ಪಟ್ಟನು. ಗೆಳೆಯರೊಂದಿಗೆ ತನಗೆ ಇಷ್ಟ ಬಂದಂತೆ ಬದುಕಿದನು. ಅವರ ಕುಟುಂಬ ಮತ್ತು ನಿಕಟ ಸಂಬಂಧಿಗಳು ಅವನ ಬಗ್ಗೆ ಗೊಂದಲಕ್ಕೊಳಗಾದರು. ಅವನಲ್ಲಿ ಸೈತಾನನ ಅನೇಕ ಗುಣಗಳಿದ್ದವು. ನಿಜವಾಗಿಯೂ ಕ್ರಿಸ್ತನಿಗೆ ದ್ರೋಹಿಯಾದನು. ಆದರೆ ಹೆಸರಿಗೆ ಕ್ರೈಸ್ತನು. ಹೀಗೆ ಅವನು ಜೀವಿಸುತ್ತಿದ್ದ ಸಮಯದಲ್ಲಿ ಕೈಯಲ್ಲಿ ಒಂದು ಗಡ್ಡೆಬಂದಾಗ ವೈದ್ಯರು ಕ್ಯಾನ್ಸರ್ ಇರಬಹುದು ಎಂದು ಹೇಳಿಬಿಟ್ಟರು ಆಗ ಅವನಿಗೆ ತುಂಬಾ ಭಯವಾಯಿತು. ಹೇಗಾದರೂ ಇದು ವಾಸಿಯಾಗಬೇಕು ಎಂದು ಯೋಚಿಸಿ, ಎಲ್ಲರಿಗಾಗಿಯೂ ಶಿಲುಬೆಯಲ್ಲಿ ರಕ್ತಸುರಿಸಿ ಮರಣಹೊಂದಿ ಸಮಾಧಿ ಮಾಡಲ್ಪಟ್ಟು ಮೂರನೇ ದಿನದಲ್ಲಿ ಜೀವಂತವಾಗಿ ಎದ್ದ ಯೇಸುಕ್ರಿಸ್ತನನ್ನು ನಂಬಿ ತನ್ನ ಪಾಪಗಳನ್ನು ಮರೆಮಾಡದೆ ಒಪ್ಪಿಕೊಂಡನು. "ಯೇಸು ಕ್ರಿಸ್ತನ ರಕ್ತವು ಎಲ್ಲಾ ಪಾಪಗಳನ್ನು ತೊಳೆದು ನಮ್ಮನ್ನು ಶುದ್ಧೀಕರಿಸುತ್ತದೆ" ಎಂಬ ಸತ್ಯವೇದದ ವಾಕ್ಯದ ಪ್ರಕಾರ, ಅವನ ಪಾಪಗಳನ್ನು ಮಾತ್ರವಲ್ಲದೆ ಅವನ ಅನಾರೋಗ್ಯವನ್ನೂ ಕರ್ತನು ಅವನಿಂದ ತೆಗೆದುಹಾಕಿದರು. ಇಂದು ಅನೇಕ ಸ್ಥಳಗಳಿಗೆ ಹೋಗಿ ಅವರಿಗಾಗಿ ಸೇವೆ ಮಾಡಲು ಆರಿಸಿಕೊಂಡಿದ್ದಾರೆ ಮತ್ತು ಅವರ ನಾಮ ಮಹಿಮೆಗಾಗಿ ಉಪಯೋಗಿಸುತ್ತಿದ್ದಾರೆ. ಇಂದು ಇದನ್ನು ಬರೆಯಲು ಕೂಡ ಸಹಾಯ ಮಾಡಿದ್ದಾರೆ.

 

ಹೌದು, ಪಾಪದಲ್ಲಿ, ಅಧರ್ಮದಲ್ಲಿ, ಅನಾರೋಗ್ಯದಿಂದ ಬಳಲುತ್ತಿದ್ದ ನನ್ನನ್ನು ಬಿಡುಗಡೆ ಮಾಡಿ ಪ್ರಕಾಶಿಸುವಂತೆ ಮಾಡಿದ ದೇವರು ಇದನ್ನು ಓದುತ್ತಿರುವ ಮತ್ತು ಕೇಳುತ್ತಿರುವ ನಿಮ್ಮನ್ನೂ ಪ್ರಕಾಶಿಸುತ್ತಾರೆ. ಯೇಸುಕ್ರಿಸ್ತನ ಜನ್ಮದಿನವನ್ನು ಆಚರಿಸುವ ಈ ಸಮಯದಲ್ಲಿ, ನಿಮ್ಮ ಹೃದಯದಲ್ಲಿ ಯೇಸುಕ್ರಿಸ್ತನು ಜನಿಸಲು ನಿಜವಾಗಿಯೂ ಸ್ಥಳಕೊಡಿ. ಸತ್ಯವೇದದ ವಾಕ್ಯದ ಪ್ರಕಾರ ಬದುಕಲು ಸಮರ್ಪಿಸಿಕೊಳ್ಳಿರಿ. ಎಷ್ಟು ಕತ್ತಲೆಯ ಬದುಕನ್ನಾದರೂ ಪ್ರಕಾಶಮಾನವಾಗಿ ಮಾರ್ಪಡಿಸುವ ಆ ನಿಜವಾದ ಬೆಳಕು ನಿಮ್ಮ ಬದುಕನ್ನೂ ಬದಲಾಯಿಸುವುದರಲ್ಲಿ ಸಂಶಯವೇ ಇಲ್ಲ. ಆಮೆನ್!

- Bro. ಸಿಮಿಯೋನ್

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್‌ನಲ್ಲಿ ನಡೆಯುವ ಟ್ಯೂಷನ್ ಸೇವೆಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al