Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 10.12.2023 (Kids Special)
Share:

By Village Missionary Movement

Sunday, 10-Dec-2023

ಧೈನಂದಿನ ಧ್ಯಾನ(Kannada) – 10.12.2023 (Kids Special)

 

ಅಲಂಕಾರ

 

 "…ಕ್ರಿಸ್ತನು ನಿಮ್ಮನ್ನು ಕ್ಷಮಿಸಿದಂತೆಯೇ ನೀವು ಒಬ್ಬರಿಗೊಬ್ಬರು ಕ್ಷಮಿಸಿರಿ” - ಕೊಲೊಸ್ಸೆ 3:13

 

ಹಾಯ್ ಮುದ್ದು ಪುಟಾಣಿಗಳೇ! X-mas ಹತ್ತಿರ ಬಂದು ಬಿಡ್ತು. ತುಂಬಾ ಸಂತೋಷವಾಗಿದ್ದೀರಾ? ಮನೆಯೆಲ್ಲಾ ಅಲಂಕರಿಸಿ Star ಎಲ್ಲಾ ಕಟ್ಟಿ ಆಯ್ತಾ? ಕೆಲವರು X-mas- Tree ಇಟ್ಟು ವರ್ಣರಂಜಿತ ಸೀರಿಯಲ್ ಲೈಟ್‌ಗಳನ್ನು ಹಾಕಿ ಜಮ್ ಅಂತಾ ಅಲಂಕಾರ ಮಾಡಿರ್ತೀರ ಅಲ್ವಾ? ತುಂಬಾ ಒಳ್ಳೇದು. ಅದೇ ರೀತಿಯಲ್ಲಿ, ನಮ್ಮ ಹೃದಯವನ್ನು ಅಲಂಕರಿಸುವುದು ಸಹ ಯೇಸಪ್ಪನ ದೃಷ್ಟಿಯಲ್ಲಿ ಬಹಳ ಮುಖ್ಯವಾಗಿದೆ. ಓಕೆ, ಇಂದು ಒಂದು ಕಥೆಯನ್ನು ಕೇಳೋಣ್ವಾ?

 

ರೀಟಾ ಮತ್ತು ರಾಣಿ ಎಂಬ ಇಬ್ಬರು ಸ್ನೇಹಿತೆಯರಿದ್ದರು. ಶಾಲೆಗೆ ಹೋದರೂ ಅಥವಾ ಮನೆಗೆ ಬಂದರೂ ಇಬ್ಬರೂ ಒಟ್ಟಿಗೆ ಇದ್ದು ಆಟವಾಡುತ್ತಿದ್ದರು. ಸಣ್ಣ ಜಗಳವಾದರೂ ತಕ್ಷಣ ಮಾತನಾಡಿಕೊಳ್ಳುತ್ತಿದ್ದರು. ಏನು ಪುಟಾಣಿಗಳೇ, ನೀವು ಜಗಳವಾಡಿದರೂ ಅದನ್ನು ಮರೆತು ಮಾತನಾಡುತ್ತೀರಾ? ವೆರಿಗುಡ್. ಹಾಗೆ ಇರಬೇಕು. ಒಂದು ದಿನ ರೀಟಾ ಹೇಳಿದಳು ನಾಳೆ ರಜೆ ತಾನೇ! ಪಾರ್ಕ್‌ಗೆ ಹೋಗಿ ಆಟವಾಡೋಣ ಎಂದು. ಸರಿ ನಾನು ಖಂಡಿತ ಬರುತ್ತೇನೆ. ನಾವು ಜಾಲಿಯಾಗಿ ಆಟವಾಡೋಣ Bye ಎಂದು ಹೇಳಿ ಬಿಟ್ಟು ಅವರವರ ಮನೆಗಳಿಗೆ ಹೋಗಿಬಿಟ್ರು.

 

ಮರುದಿನ ರೀಟಾ ಪಾರ್ಕ್‌ಗೆ ಹೋಗಿ ಬಹಳ ಹೊತ್ತು ಕಾದರೂ ರಾಣಿ ಬರಲಿಲ್ಲ. ರೀಟಾ ಕೋಪದಿಂದ ಮನೆಗೆ ಹೋದಳು. ಈ ರಾಣಿ ಜೊತೆ ಇನ್ಮುಂದೆ ಮಾತಾಡಲ್ಲ ನನ್ನ ಯಾಮಾರಿಸಿ ಬಿಟ್ಲು. ನನ್ನ ಕಾಯಿಸಿ ಬಿಟ್ಲು ಎಂದು ಅವಳನ್ನು ಬೈದು ಕೊಳ್ಳುತ್ತಾ ಇವಳೆಲ್ಲಾ ನನಗೆ ಫ್ರೆಂಡೇ ಅಲ್ಲ. ಎಂದು ಹೇಳುತ್ತಿರುವಾಗಲೇ ಅಮ್ಮ ಬಂದರು. ರೀಟಾ ಚಿನ್ನು ತುಂಬಾ ಕೋಪವಾಗಿದ್ದೀರ ಏನಾಯ್ತು. ನಿನ್ನ ಫ್ರೆಂಡ್ ರಾಣಿ ಈಗತಾನೆ ಅವರ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಂದ್ಲು. ನಾನೇ ಮಾತ್ರೆಗಳನ್ನೆಲ್ಲಾ ತೆಗೆದುಕೊಟ್ಟೆ. ಈ ಚಿಕ್ಕವಯಸ್ಸಿನಲ್ಲೇ ಅವಳ ತಾಯಿಯನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾಳೆ. ರಾಣಿಯನ್ನ ನೆನೆದರೆ ಖುಷಿಯಾಗುತ್ತೆ ಅಂದರು. ಅಮ್ಮ ಹೇಳಿದ ಮಾತುಗಳನ್ನು ಕೇಳಿದಾಗ ಕೋಪವೆಲ್ಲ ಹತ್ತಿಯಂತೆ ಹಾರಿಹೋಯಿತು. ರಾಣಿಯ ಮೇಲಿದ್ದ ಕೋಪ, ದ್ವೇಷ ಎಲ್ಲ ಬದಲಾಗಿ, ನಾನು ರಾಣಿಯನ್ನು ತಪ್ಪಾಗಿ ಅರ್ಥಮಾಡಿಕೊಂಡೆ ಈಗಲೇ ಹೋಗಿ ಅವರ ತಾಯಿಯನ್ನು ನೋಡಿ ವಿಚಾರಿಸಿ ಬರುತ್ತೇನೆ ಎಂದು ಹೇಳಿ ಜೆಟ್ ಸ್ಪೀಡ್‌ನಲ್ಲಿ ಹೊರಟಳು ರೀಟಾ.

 

ಏನು ಪುಟಾಣಿಗಳೇ, ನೀವು ಸಹ ಮತ್ತೊಬ್ಬರ ಮೇಲೆ ಕಹಿ, ದ್ವೇಷ ಹೀಗೆ ಅರ್ಥ ಮಾಡಿಕೊಳ್ಳದೇ ಕೋಪದಿಂದ ಇದ್ದೀರಾ? ಏನೇ ಆಗಲಿ ಕ್ಷಮೆಯೇ ಉತ್ತಮವಾದದ್ದು. ಅದೇ ಯೇಸಪ್ಪ ಬಯಸುವ ಅಲಂಕಾರ. Jesus -ಅನ್ನು ಸಂತೋಷಪಡಿಸಿ. ಅರ್ಥವುಳ್ಳ X-mas, ಆಚರಣೆಯ ಶುಭಾಶಯಗಳು ಮುದ್ದು ಮಕ್ಕಳೇ. HAPPY CHRISTMAS!

- Mrs. ಜ್ಯೋತಿ ಸ್ಟಾಲಿನ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş holiganbet casibom bets10 extrabet royalbet süperbetin casibom giriş casibom jojobet giriş casibom milanobet piabellacasino betpas bahiscasino atlasbet betpas casinoroyal bahiscasino ngsbahis betplay holiganbet jojobet casibom holiganbet jojobet casibom vaycasino romabet