Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 09.12.2023
Share:

By Village Missionary Movement

Saturday, 09-Dec-2023

ಧೈನಂದಿನ ಧ್ಯಾನ(Kannada) – 09.12.2023

 

ನಮ್ಮೊಂದಿಗೆ ಇರುವವರು ಯೇಸು

 

"…ಆತನಿಗೆ ಇಮ್ಮಾನುವೇಲ್ ಎಂದು ಹೆಸರಿಡುವರು ಎಂಬದು. ದೇವರು ನಮ್ಮ ಕೂಡ ಇದ್ದಾನೆಂದು ಈ ಹೆಸರಿನ ಅರ್ಥ" - ಮತ್ತಾಯ 1:23

 

ಕರ್ತನು ನಮ್ಮೊಂದಿಗೆ ಇರುವುದರೊಂದಿಗೆ, ನಮ್ಮಲ್ಲಿ ವಾಸಿಸುವಾತನು, ನಮ್ಮನ್ನು ಮುನ್ನಡೆಸುವಾತನು. ಹೌದು, "ಇಮ್ಮಾನುವೇಲ್" ಎಂಬ ಹೆಸರಿಗೆ ದೇವರು ನಮ್ಮ ಕೂಡ ಇದ್ದಾನೆ ಎಂಬದು ಅರ್ಥ. ದೇವರು ನಮ್ಮೊಂದಿಗಿದ್ದಾನೆ ಎಂದರ್ಥ. ಯೋಹಾನನು ತನ್ನ ಸುವಾರ್ತೆಯಲ್ಲಿ "ಆದಿಯಲ್ಲಿ ವಾಕ್ಯವಿತ್ತು. ವಾಕ್ಯವೆಂಬವನು ನರಾವತಾರ ಎತ್ತಿ ನಮ್ಮ ಮಧ್ಯದಲ್ಲಿ ವಾಸಮಾಡಿದನು. ನಾವು ಆತನ ಮಹಿಮೆಯನ್ನು ನೋಡಿದೆವು" ಆತನು ಕೃಪೆಯಿಂದಲೂ ಸತ್ಯದಿಂದಲೂ ತುಂಬಿದವನಾಗಿದ್ದನು. ಎಂದು ಪ್ರವಾದನೆಯಾಗಿ ಬರೆದಿದ್ದಾರೆ.

 

ಯೇಸು ಎಂಬ ಹೆಸರಿಗೆ ಇಬ್ರಿಯ ಭಾಷೆಯಲ್ಲಿ ಯೆಹೋವ ಅಥವಾ ಯೆಶೀವ ಎಂದು ಗ್ರೀಕ್ ಭಾಷೆಯಲ್ಲಿ "ರಕ್ಷಿಸುತ್ತಾನೆ" ಎಂದು ಕರೆಯಲಾಗುತ್ತದೆ. ಪಾಪಗಳು, ರೋಗಗಳು, ಅಪಾಯಗಳು, ಮಾನಸಿಕ ತೊಂದರೆಗಳು, ಹೋರಾಟಗಳು, ಬಡತನ, ನರಕ ಇತ್ಯಾದಿಗಳಿಂದ ಕಾಪಾಡುವುದನ್ನೇ ಇದು ಸೂಚಿಸುತ್ತಿದೆ. ಮನುಷ್ಯನು ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಪಾಪ ಸ್ವಭಾವಗಳನ್ನು ಬದಲಾಯಿಸಿ ರೂಪಾಂತರದ ಸ್ವಾರೂಪ್ಯಕ್ಕೆ ಅರ್ಹರನ್ನಾಗಿಸಿ ನಿತ್ಯಜೀವವನ್ನು ಕೊಡುವವರು ಯೇಸು ಮಾತ್ರವೇ. ಆತನಿಗೆ ನಮ್ಮೊಂದಿಗೆ ವಾಸಿಸುವುದು ಇಷ್ಟ. 

 

ಏದೆನ್ ತೋಟದಲ್ಲಿ ಕರ್ತನಾದ ದೇವರು ಆದಾಮ್, ಹವ್ವಳೊಂದಿಗೆ ಸಂಚರಿಸಿದ್ದನ್ನು ಸತ್ಯವೇದದಲ್ಲಿ ಓದುತ್ತೇವೆ. ಆದರೆ ಅವರು ಪಾಪದ ಕಾರಣದಿಂದ ದೇವರಿಂದ ಬೇರ್ಪಟ್ಟು, ಅಪರಾಧದ ಗ್ರಹಿಕೆ, ಭಯ ಮತ್ತು ಅವಮಾನದಿಂದಾಗಿ ತಮ್ಮನ್ನು ಮರೆಮಾಡಿಕೊಂಡರು. ಇಂದಿಗೂ, ನಮ್ಮ ಪಾಪಗಳೇ ನಮ್ಮನ್ನು ದೇವರೊಂದಿಗೆ ನಡೆಯದಂತೆ ತಡೆಯುತ್ತಿವೆ ಮತ್ತು ದೇವರು ನಮ್ಮೊಂದಿಗೆ ಇರಲು ಸಾಧ್ಯವಾಗದಂತೆ ಮಾಡುತ್ತಿವೆ!

 

ನಮ್ಮಲ್ಲಿ ಕಂಡುಬರುವ ಪಾಪದ ಅಡೆತಡೆಗಳನ್ನು ತೆಗೆದುಹಾಕಲು ಮತ್ತು ನಮ್ಮ ಸಂಬಂಧವನ್ನು ಮತ್ತೆ ನವೀಕರಿಸಲು, ದೇವರಿಗೆ ಹತ್ತಿರವಾಗಿ ಜೀವಿಸಲು, ಯೇಸು ಶಿಲುಬೆಯಲ್ಲಿ ಸುರಿಸಿದ ರಕ್ತವು ಮತ್ತು ಪಾಪ ಕ್ಷಮಾಪಣೆಯ ನಿಶ್ಚಯವು ನಮಗುಂಟು. ಪಾಪಗಳನ್ನು ಒಪ್ಪಿಕೊಂಡು ಕ್ಷಮಾಪಣೆಯನ್ನು ಪಡೆದವರಿಗೆ ಹೊಸ ಅನುಭವವು ಉಂಟಾಗುತ್ತದೆ. ಏದೇನಿನ ಅನುಭವವನ್ನು ಹೊಂದಬಹುದು. "ಇಗೋ, ದೇವರ ನಿವಾಸವು ಮನುಷ್ಯರಲ್ಲಿ ಅದೆ;ಆತನು ಅವರೊಡನೆ ವಾಸಮಾಡುವನು,ಅವರು ಆತನಿಗೆ ಪ್ರಜೆಗಳಾಗಿರುವರು;ದೇವರು ತಾನೇ ಅವರ ಸಂಗಡ ಇರುವನು. (ಪ್ರಕಟನೆ 21:3) ಎಂತಹ ಒಂದು ಅದ್ಭುತವಾದ ವಾಗ್ದಾನ!

 

ನನಗೆ ಪ್ರಿಯರಾದವರೇ, ನಮ್ಮನ್ನು ನಾವೇ ಪರೀಕ್ಷಿಸಿಕೊಂಡು ಇಮ್ಮಾನುವೇಲನ ರಕ್ತದಿಂದ ತೊಳೆಯಲ್ಪಟ್ಟು ದೇವರೊಂದಿಗೆ ಜೀವಿಸೋಣ. ದೇವರು ನಮ್ಮೊಂದಿಗಿದ್ದಾರೆ. ಆಮೆನ್!

- Mrs. ಸರೋಜಾ ಮೋಹನ್ ದಾಸ್ 

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್‌ನಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಶಾಲೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al