Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 08.12.2023
Share:

By Village Missionary Movement

Friday, 08-Dec-2023

ಧೈನಂದಿನ ಧ್ಯಾನ(Kannada) – 08.12.2023

 

ಕ್ರಿಸ್ಮಸ್ ಮತ್ತು ಏಕತೆ

 

"…ಮನುಷ್ಯರೊಳಗೆ ಸಮಾಧಾನದೇವರು ಅವರಿಗೆ ಒಲಿಯುತ್ತಾನೆಎಂದು ದೇವರನ್ನು ಕೊಂಡಾಡುತ್ತಾ ಹೇಳಿದರು" - ಲೂಕ 2:14

 

ಕ್ರಿಸ್ಮಸ್ ಎಂಬುದು ಒಂದು ಏಕತೆಯ ಆಚರಣೆ! ಕ್ರಿಸ್ಮಸ್ ನಮಗೆ ಇತರರೊಂದಿಗೆ ಒಂದಾಗಲು ಉತ್ತಮ ಅವಕಾಶವನ್ನು ನೀಡುತ್ತದೆ. ಹೇಗೆ, ಯಾರೊಂದಿಗೆಲ್ಲಾ ನಮ್ಮ ಪ್ರೀತಿಯನ್ನು ಹಂಚಿಕೊಳ್ಳಬೇಕು ಎಂದು ನೋಡೋಣ್ವಾ?

 

ಒಂಟಿಯಾಗಿ ಇರುವವರೊಂದಿಗೆ ಒಗ್ಗಟ್ಟು: ಮನೆಯಿಂದ ಹೊರಬರಲು ಸಾಧ್ಯವಾಗದ ವೃದ್ಧರನ್ನು ಭೇಟಿಮಾಡಿ, ಕ್ರಿಸ್ಮಸ್ ಶುಭಾಶಯಗಳೊಂದಿಗೆ ನಮ್ಮ ಮನೆಯ ತಿಂಡಿತಿನಿಸುಗಳನ್ನು ಕೆಲವು ಹಣ್ಣುಗಳನ್ನು ನೀಡಿ ಅವರನ್ನು ಹುರಿದುಂಬಿಸಬಹುದು.

 

ಸಭೆಯ ವಿಶ್ವಾಸಿಗಳೊಂದಿಗೆ ಏಕತೆ: ವರ್ಷವಿಡೀ ನಮ್ಮ ಸಭೆಯಲ್ಲಿ ಕಾಣುವ ಕಷ್ಟಪಡುವ ಒಂದಿಷ್ಟು

ಕುಟುಂಬಗಳಿಗೆ ಹೊಸ ಬಟ್ಟೆಗಳನ್ನು ತೆಗೆದುಕೊಟ್ಟು ಅವರನ್ನೂ ಸಂತೋಷಪಡಿಸಬಹುದು.

 

ನೆರೆಹೊರೆಯವರೊಂದಿಗೆ ಒಗ್ಗಟ್ಟು: ನೀವು ಬಹುಶಃ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದರೆ ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಕೆಲವು ಕ್ರಿಸ್ಮಸ್ ಉಡುಗೊರೆಗಳನ್ನು ಎತ್ತಿಕೊಂಡು ಅದರೊಂದಿಗೆ ಕ್ರಿಸ್ತನ ಜನನದ ಉದ್ದೇಶವನ್ನು ಸ್ಪಷ್ಟವಾಗಿ ಹೇಳುವ ಹಸ್ತಪ್ರತಿಯನ್ನು ಕೊಟ್ಟು ನಿಮ್ಮ ಪ್ರೀತಿಯನ್ನು ಹಂಚಿಕೊಳ್ಳುವ ಮೂಲಕ ಸುವಾರ್ತೆಯನ್ನು ಪ್ರಕಟಿಸಬಹುದು.

 

ಕೆಲಸದ ಸ್ಥಳದಲ್ಲಿ ಏಕತೆ: ನೀವು ಕೆಲಸ ಮಾಡುವ ಕಚೇರಿಯಲ್ಲಿ ಕ್ರಿಸ್‌ಮಸ್ ದಿನದಂದು ಮಾತ್ರವಲ್ಲದೆ ಎಲ್ಲಾ ದಿನಗಳೂ ನಿಮ್ಮ ನಡವಳಿಕೆ ಇತರರಿಗೆ ಸಾಕ್ಷಿಯಾಗಿದ್ದರೆ, ಆ ದಿನ ನೀವು ನೀಡುವ ಸಣ್ಣ ಬಹುಮಾನವು ಸಹ ದೇವರ ಪ್ರೀತಿಯನ್ನು ಪ್ರಕಟಿಸುವಂತದ್ದಾಗಿರುತ್ತದೆ.

 

ಗ್ರಾಮಸ್ಥರೊಂದಿಗೆ ಒಗ್ಗಟ್ಟು: ಕ್ರಿಸ್‌ಮಸ್ ದಿನಗಳನ್ನು ಹಳ್ಳಿಗಳಲ್ಲಿ ಸುವಾರ್ತೆ ಸಾರಲು ಬಳಸಬಹುದು. ನೀವು ಸಾಂಟಾ ಕ್ಲಾಸ್ ಜೊತೆ ಅಲ್ಲಿಗೆ ಹೋದರೆ, ನೀವು ಜನಸಂದಣಿಯನ್ನು ಪಡೆಯುವುದು ಖಚಿತ. ಅವರಿಗೆ ಸುವಾರ್ತೆಯನ್ನು ಸಾರುವ ಮೂಲಕ ಮತ್ತು ಸಿಹಿತಿಂಡಿಗಳನ್ನು ನೀಡುವ ಮೂಲಕ ಅವರೊಂದಿಗೆ ಒಂದಾಗಬಹುದು.

 

ಪ್ರಿಯರೇ! ವೇಗದ ಜಗತ್ತಿನಲ್ಲಿ, ನಾವು ಯಾಂತ್ರಿಕವಾಗಿ ಕೆಲಸ ಮಾಡಬೇಕು. ಇತರರೊಂದಿಗಿನ ಸಂಬಂಧವು ಹಾಯ್, ಬೈ ಎಂಬ ಮಟ್ಟದಲ್ಲಿದೆ. ಆದರೆ ಕನಿಷ್ಠ ಈ ಕ್ರಿಸ್ಮಸ್ ದಿನಗಳಲ್ಲಾದರೂ ಇತರರೊಂದಿಗೆ ಫೆಲೋಶಿಪ್ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳೋಣ. ಕೆಲವು ಶಾಪಿಂಗ್ ಮತ್ತು ಪಾರ್ಟಿಗಳನ್ನು "ಕಟ್" ಮಾಡಿದರೇನೆ ಕಾಲ ಮತ್ತು ಸಮಯ ಉಳಿಯುವುದನ್ನು ಕಾಣುವಿರಿ. ಮೊದಲ ಕ್ರಿಸ್ಮಸ್, ಯೋಸೇಫ ಮತ್ತು ಮರಿಯಳೊಂದಿಗೆ 

ಕುರುಬರು, ಶಾಸ್ತ್ರಿಗಳು, ದೂತರು ಒಂದಾದಂತೆಯೇ ಈ ಕ್ರಿಸ್ಮಸ್ ನಲ್ಲಿ ನೀವು ಅನೇಕರೊಂದಿಗೆ ಐಕ್ಯವಾಗಿರಿ. ನಿಮ್ಮ ಕೈಲಾದಷ್ಟು ಮಾಡಿ ಅವರನ್ನು ಸಂತೋಷಪಡಿಸಿ. ಆಗ ದೇವರು ಮಹಿಮೆ ಹೊಂದುತ್ತಾರೆ.

- T. ರಾಜನ್

 

ಪ್ರಾರ್ಥನಾ ಅಂಶ:

ನಮ್ಮ ಮಾಧ್ಯಮ ಸೇವೆಯಲ್ಲಿರುವ ಪ್ರತಿಯೊಂದು ಸೇವಕರಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş jojobet giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/ grandpashabet