Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 04.12.2023
Share:

By Village Missionary Movement

Monday, 04-Dec-2023

ಧೈನಂದಿನ ಧ್ಯಾನ(Kannada) – 04.12.2023

 

ರಕ್ಷಕನ ಬರುವಿಕೆ 

 

"ಚೀಯೋನ್ ನಗರಿಯೇ... ನಿನ್ನ ಅರಸು ನಿನ್ನ ಬಳಿಗೆ ಬರುತ್ತಾನೆ..." - ಜೆಕರ್ಯ 9:9

 

ಸುಮಾರು 500 ವರ್ಷಗಳ ಹಿಂದೆ, ಪ್ರವಾದಿಯಾದ ಜೆಕರ್ಯನು ರಕ್ಷಕನ ಮೊದಲ ಬರುವಿಕೆಯಲ್ಲಿ ಏನಾಗುತ್ತದೆ ಎಂದು ಪ್ರವಾದನೆ ನುಡಿದರು. ಬರಲಿರುವಾತನು ನ್ಯಾಯವಂತನು, ಲೋಕವನ್ನು ಪಾಪದಿಂದ ಬಿಡಿಸಿ ರಕ್ಷಿಸುವವನಾಗಿಯೂ ಅದು ಮಾತ್ರವಲ್ಲ, ಶಾಂತಗುಣವುಳ್ಳವನಾಗಿಯೂ ಇರುತ್ತಾನೆ. ಎಂದು ಹೇಳಿರುವ ಪ್ರಕಾರ ಅವರು ತನ್ನ ತಾಳ್ಮೆಯನ್ನು ತೋರಲು ಅರಮನೆಯಲ್ಲಿ ಜನಿಸದೆ ದನದ ಕೊಟ್ಟಿಗೆಯಲ್ಲಿ ಜನಿಸಿದರು.

 

ಯೇಸುಕ್ರಿಸ್ತನು ಜನಿಸಿ ಜೀವಿಸಿ ಶಿಲುಬೆಯಲ್ಲಿ ಸಾಯುವ ಮೊದಲು, ಒಂದು ಪ್ರಾಯದ ಕತ್ತೆಮರಿಯನ್ನು ಹತ್ತಿದವನಾಗಿ ಯೆರೂಸಲೇಮಿನೊಳಗೆ ಪ್ರವೇಶಿಸಿದರು. ಜೆಕರ್ಯ ನುಡಿದದ್ದು ನೆರವೇರಿದ್ದನ್ನು ಮತ್ತಾಯ 21: 4-11 ರ ವರೆಗೂ ಓದುತ್ತೇವೆ. ಜೆಕರ್ಯ (9:9) ರಲ್ಲಿ ಹೇಳಲ್ಪಟ್ಟಿತು ನಂತರ ಹಾಗೆಯೇ ನೆರವೇರಿತು ಎಂದು ನೋಡುತ್ತೇವೆ. ರಕ್ಷಕನ ಬರುವಿಕೆಯ ಬಗ್ಗೆ ಮುನ್ಸೂಚಿಸಿದವರಲ್ಲಿ ಜೆಕರ್ಯನು ಸಹ ಪ್ರಮುಖ ಪ್ರವಾದಿಯಾಗಿದ್ದರು.

 

ಮೊದಲ ಬರುವಿಕೆ ಮಾತ್ರವಲ್ಲ ಎರಡನೇ ಬರುವಿಕೆಯ ಬಗ್ಗೆಯೂ ಅವರು ಪ್ರವಾದನೆ ನುಡಿದರು. "ಯೆಹೋವನು ಹೊರಟು ಯುದ್ಧದಿನದಲ್ಲಿ ಹೇಗೋ ಹಾಗೆಯೇ ಆ ಜನಾಂಗಗಳಿಗೆ ಪ್ರತಿಭಟಿಸುವನು... (ಜೆಕರ್ಯ 14:3,4) ಹೀಗೆ ಜೆಕರ್ಯ ನಮ್ಮ ರಕ್ಷಕನ ಎರಡು ಬರುವಿಕೆಗಳ ಬಗ್ಗೆಯೂ ಪ್ರವಾದನೆ ನುಡಿದರು. ಆ ರಕ್ಷಕನಾದ ಯೇಸು ಎಂಥವರು? ಆತನು ತಾಳ್ಮೆಯುಳ್ಳವನು, ನೀತಿವಂತನು ಮತ್ತು ಅರಸನಾಗಿ ಏರಿ ಬಂದವನು; ಆದರೆ ಇನ್ನು ಮುಂದೆ ಬರಲಿರುವ ಅರಸನು, ಅಂತ್ಯಕ್ರಿಸ್ತನ ಆಳ್ವಿಕೆಯನ್ನು ನಾಶಮಾಡಿ, ಭೂಮಿಯ ಮೇಲೆ ಸಾವಿರ ವರ್ಷಗಳ ಕಾಲ ಆಳ್ವಿಕೆ ಮಾಡುವವನು. ನಮ್ಮನ್ನು ಆ ಆಳ್ವಿಕೆಗೆ ಅರ್ಹತೆಗೊಳಿಸಲು ಬಯಸುತ್ತಿದ್ದಾರೆ. "ಸಹಿಸಿಕೊಳ್ಳುವವರಾಗಿದ್ದರೆ ಆತನೊಡನೆ ಆಳುವೆವು." (2ತಿಮೊಥೆ 2:12)

 

ಮೊದಲ ಬರುವಿಕೆ ನಮಗೆ ವಿಮೋಚನೆಯನ್ನು ತಂದಿತು. ನಮ್ಮ ಪಾಪಗಳನ್ನು ಮತ್ತು ಶಾಪಗಳನ್ನು ತೊಳೆಯಲು ಯೇಸುವಿನ ಪರಿಶುದ್ಧ ರಕ್ತವು ಶಿಲುಬೆಯ ಮೇಲೆ ಚೆಲ್ಲಲ್ಪಟ್ಟಿತು. ಆ ಪರಿಶುದ್ಧ ರಕ್ತದಿಂದ ನಾವು ತೊಳೆಯಲ್ಪಟ್ಟಾಗ ನಮ್ಮ ಹೃದಯದಲ್ಲಿ ಎಷ್ಟು ಸಂತೋಷ ಮತ್ತು ಶಾಂತಿ ತುಂಬಿತ್ತು! ನಾವು ಇದೇ ರೀತಿ ಸಿದ್ಧರಾಗಿದ್ದರೆ, ಆತನ ಎರಡನೇ ಬರುವಿಕೆಯಲ್ಲಿ ಅವರನ್ನು ಭೇಟಿಯಾಗುತ್ತೇವೆ. ಹಿಂದೆಂದೂ ಕಾಣದಂತಹ ಸಂಭ್ರಮವು ನಮಗೆ ಉಂಟಾಗುತ್ತದೆ. ಆತನೊಂದಿಗೆ ಎಂದೆಂದಿಗೂ ಬದುಕಲು ಆತನು ನಮಗಾಗಿ ಸಿದ್ಧಪಡಿಸಿರುವ ಅನೇಕ ವಿಷಯಗಳಿವೆ. ದೇವರು ತನ್ನನ್ನು ಪ್ರೀತಿಸುವವರಿಗೆ ಸಿದ್ಧಮಾಡಿದ ಸಂಗತಿಗಳನ್ನು ಕಣ್ಣು ನೋಡಲಿಲ್ಲ, ಕಿವಿ ಕೇಳಲಿಲ್ಲ, ಮನುಷ್ಯರ ಹೃದಯದಲ್ಲಿ ಪ್ರವೇಶಿಸಲಿಲ್ಲ." (1 ಕೊರಿಂಥ 2:9)

 

ಹೌದು, ದೇವರು ನಮಗಾಗಿ ಸಿದ್ಧಪಡಿಸಿರುವವುಗಳು ನಾವು ಊಹಿಸಿ ನೋಡಲೂ ಸಹ ಸಾಧ್ಯವಾಗದಷ್ಟು ಮಟ್ಟಿಗೆ ಉನ್ನತವಾದವುಗಳು, ಉತ್ತಮವಾದವುಗಳು ಆದ್ದರಿಂದ ಅವುಗಳನ್ನು ಸ್ವತಂತ್ರಿಸಿಕೊಳ್ಳಲು ಸಿದ್ಧರಾಗೋಣ. ರಕ್ಷಕನ ಆಗಮನವು ಬಹಳ ಹತ್ತಿರದಲ್ಲಿದೆ. ನಾವೆಲ್ಲರೂ ಆತನ ಎರಡನೇ ಬರುವಿಕೆಗೆ ಸಿದ್ಧರಾಗೋಣ ಮತ್ತು ಕ್ರಿಸ್ಮಸ್ ಅನ್ನು ಮೊದಲ ಬರುವಿಕೆಯ ಸ್ಮರಣಾರ್ಥವಾಗಿ ಆಚರಿಸುವುದರೊಂದಿಗೆ ಸುಮ್ಮನಾಗದೇ ಆತನ ಎರಡನೇ ಬರುವಿಕೆಗೆ ನಾವೆಲ್ಲರೂ ಸಿದ್ಧವಾಗಿಗೋಣ. ಸಿದ್ಧರಾಗೋಣ; ಇತರರನ್ನೂ ತಯಾರು ಮಾಡೋಣ! ಆಮೆನ್!

- Mrs.ಭುವನಾ ಧನಪಾಲನ್ 

 

ಪ್ರಾರ್ಥನಾ ಅಂಶ:

ಹತ್ತು ಸಾವಿರ ಗ್ರಾಮಗಳಿಗೆ ಸುವಾರ್ತೆ ಸಾರಲು ಒಂದು ಗ್ರಾಮಕ್ಕೆ 1000 ರೂಗಳನ್ನು ಕೊಡುವ ಅನೇಕ ಪಾಲುದಾರರು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin