Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 30.03.2021
Share:

By Village Missionary Movement

Tuesday, 30-Mar-2021

ಧೈನಂದಿನ ಧ್ಯಾನ(Kannada) – 30.03.2021

ವೈರಾಗ್ಯ

"...ಗೌರವವನ್ನು ಕಾಪಾಡಿದ್ದರಿಂದ ಇಸ್ರಾಯೇಲ್ಯರ ಮೇಲಿದ್ದ ನನ್ನ ಕೋಪವನ್ನು ತೊಲಗಿಸಿದ್ದಾನೆ." - ಅರಣ್ಯಕಾಂಡ 25:11

ಪ್ರಖ್ಯಾತಿಗೊಂಡ ಸಿನಿಮಾ ಹಾಡುಗಾರರೊಬ್ಬರು ಕಾಲೇಜಿನ ಸಮಾರಂಭಕ್ಕೆ ಕರೆಯಲ್ಪಟ್ಟಿದ್ದರು. ಅವರನ್ನು ನೋಡಿದ ಸಂತೋಷದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಅವರ ಬಳಿ ಮಾತನಾಡಲು ಪ್ರಯತ್ನಿಸಿದರು. ಆದರೆ ಅವರು ಅವರ ಬಳಿ ಮಾತನಾಡಲು ಬಯಸಲಿಲ್ಲ.  ಅದರ ಬಗ್ಗೆ ಆ ವಿದ್ಯಾರ್ಥಿಗಳು ಅವರ ಬಳಿ ಕೇಳಿದಾಗ ಅವರು, "ನೀವೆಲ್ಲರೂ ನನ್ನ ಬಳಿ ಮಾತನಾಡಲು ಬಯಸುತ್ತಿದ್ದೀರ ಎಂದು ನನಗೆ ಅರ್ಥವಾಗುತ್ತಿದೆ. ಆದರೆ ಸುಮ್ಮ ಸುಮ್ಮನೆ ಮಾತಾಡಿ ನನ್ನ ಸ್ವರದ ಬಲವು ಕಡಿಮೆಯಾಗದಂತೆ ಇದನ್ನು ಸಿನಿಮಾರಂಗಕ್ಕೆ ಸಮರ್ಪಿಸಿ ಬಿಟ್ಟಿದ್ದೇನೆ. ನಿಮ್ಮ ಬಳಿ ಅಧಿಕವಾಗಿ ಮಾತಾಡಿ ನನ್ನ ಮಧುರವಾದ ಸ್ವರದ ಮಾಧುರ್ಯವನ್ನು ಕಳೆದುಕೊಳ್ಳಲಾರೆನು" ಎಂದು ಹೇಳಿದರಂತೆ. ಲೋಕದ ಹೆಸರು ಹೊಗಳಿಕೆಗಾಗಿ ಸಿನಿಮಾ ಹಾಡುಗಳನ್ನು ಹಾಡುವ ಇವರಿಗೆ ಎಷ್ಟು ವೈರಾಗ್ಯ ನೋಡಿರಿ.

ಆದರೆ ಸತ್ಯವೇದದಲ್ಲಿ ಫೀನೆಹಾಸನೆಂಬ ಯೌವನಸ್ಥನು ದೇವರಿಗಾಗಿ ಭಕ್ತಿವೈರಾಗ್ಯವನ್ನು ತೋರಿಸಿ ಇಸ್ರಾಯೇಲ್ ಜನರ ಮೇಲೆ ಕರ್ತನಿಂದುಟಾದ ಕೇಡನ್ನು ನಿಲ್ಲಿಸಿದನು ಎಂದು ಓದುತ್ತಿದ್ದೇವೆ. ಈತನಿಂದ ಜನರು ಕಾಪಾಡಲ್ಪಟ್ಟರು.  ಈತನು ದೇವರಿಂದ ಹೊಗಳಲ್ಪಟ್ಟ ವ್ಯಕ್ತಿಯಾಗಿ ಇದ್ದಾರೆ. ಈತನ ಸಂತತಿಯಲ್ಲಿ ನಿತ್ಯವಾದ ಯಾಜಕರ ಪದವಿಯು ದೇವರಿಂದ ಕೊಡಲ್ಪಟ್ಟಿತು ಇದು ಎಷ್ಟು ದೊಡ್ಡ ಘನತೆಯೋ ನೋಡಿರಿ. ದೇವರು ಒಂದು ಮನುಷ್ಯನನ್ನು ಹೊಗಳುವುದು ಎಂಬುದು ಎಷ್ಟು ದೊಡ್ಡ ಕಾರ್ಯ. ಮನುಷ್ಯನು ನಮ್ಮನ್ನು ಹೊಗಳಿದರೇನೆ ಸಂತೋಷ ಪಡುತ್ತಿದ್ದೇವೆ ಆದರೆ ಫೀನೆಹಾಸನಲ್ಲಿ ಇರುವ ಭಕ್ತಿಯೊಂದಿಗೆ ಕೂಡಿದ ವೈರಾಗ್ಯವನ್ನು ನೋಡಿ ದೇವರೇ ಹೊಗಳುತ್ತಿದ್ದಾರೆ.

ಪ್ರಿಯರೇ! ಈಗಲೇ ನಾವು ಯೋಚಿಸೋಣ. ನಾವು ಎಂತಹ ವೈರಾಗ್ಯವುಳ್ಳವರಾಗಿ ಇದ್ದೇವೆ ಲೋಕಕ್ಕಾ? ಅಥವಾ ಮಹೋನ್ನತನಾದ ದೇವರಿಗಾಗಿ ಯಾ? ಮೊದಲು ನಾನು ದೇವರಲ್ಲಿ ಬಹಳ ಭಕ್ತಿಯುಳ್ಳವನಾಗಿದ್ದೆನು ಈಗಲಾದರೋ ನನ್ನಲ್ಲಿ  ದೇವರಿಗಾಗಿ ಬೆಂಕಿ ಇಲ್ಲದೆ ಇದ್ದೇನೆ ಎಂದು ಹೇಳಬಹುದು. ದುಃಖ ಪಡಬೇಡಿರಿ ಮತ್ತೆ ನಿಮ್ಮ ಪ್ರಾರ್ಥನೆಯಲ್ಲಿ, ಪರಿಶುದ್ಧ ಜೀವನದಲ್ಲಿ ವೈರಾಗ್ಯದಿಂದ ಜೀವಿಸಲು ಸಾಧ್ಯ. ದೇವರ ಬಳಿಯಿದ್ದ ಫೀನೆಹಾಸನ ಹಾಗೆ ಅಂಗೀಕಾರವನ್ನು ಹೊಂದಿಕೊಳ್ಳುವುದು ಖಂಡಿತ. ಪ್ರಯತ್ನಿಸೋಣ ಮುಂದಕ್ಕೆ ಸಾಗೋಣ.
-    Bro.ಮನೋಜ್ ಕುಮಾರ್

ಪ್ರಾರ್ಥನಾ ಅಂಶ:-
ನಮ್ಮ ಮಿಷಿನರಿ ದಂಪತಿಗಳಲ್ಲಿ ಇನ್ನೂ ಸಂತಾನವಿಲ್ಲದವರಿಗೆ ದೇವರು ಸಂತಾನ ಭಾಗ್ಯವನ್ನು ದಯಪಾಲಿಸುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al