Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 03.12.2023 (Kids Special)
Share:

By Village Missionary Movement

Sunday, 03-Dec-2023

ಧೈನಂದಿನ ಧ್ಯಾನ(Kannada) – 03.12.2023 (Kids Special)

 

ಯೇಸುವಿನ ಸ್ವಾರೂಪ್ಯ

 

"ನಾನು ಸಾತ್ವಿಕನೂ ದೀನಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ;" - ಮತ್ತಾಯ 11:29

 

ಹಲೋ, ಮುದ್ದು ಪುಟಾಣಿಗಳೇ! ಎಲ್ಲರೂ ಸಂತೋಷವಾಗಿದ್ದೀರಾ? ನಿಮ್ಮ ಶಾಲೆಯಲ್ಲಿ ನಿಮಗೆ ತುಂಬಾ ಫ್ರೆಂಡ್ಸ್ ಇದ್ದಾರಾ? Super. ಇಂದು ನಾನು ಇಬ್ಬರು ಸ್ನೇಹಿತರ ಕಥೆಯನ್ನು ಹೇಳುತ್ತೇನೆ. ನೀವು ಕೇಳಲು ರೆಡಿ ತಾನೇ!

 

ಜೋಸೆಫ್ ಮತ್ತು ಜೋಯಲ್ ಎಂಬ ಇಬ್ಬರು ಸ್ನೇಹಿತರಿದ್ದರು. ಇಬ್ಬರು ಅಕ್ಕಪಕ್ಕದಲ್ಲಿ ವಾಸಿಸುತ್ತಿದ್ದರು. ಅವರು ಶಾಲೆಯಲ್ಲಿ ಒಂದೇ ಬೆಂಚ್ ನಲ್ಲಿ ಕುಳಿತುಕೊಳ್ಳುತ್ತಿದ್ದರು. ಆದರೆ ಜೋಸೆಫ್ ಚೆನ್ನಾಗಿ ಓದುತ್ತಿದ್ದ ಎಲ್ಲಾದಕ್ಕೂ ಯೇಸಪ್ಪನ ಬಳಿ ಪ್ರಾರ್ಥಿಸುತ್ತಿದ್ದ. ಜೋಯಲ್ ಏನು ಹೇಳ್ತಾ ಇದ್ದಾ ಗೊತ್ತಾ? ದೇವರಿಗೂ ನಮಗೂ ಸಂಬಂಧವೇ ಇಲ್ಲಪ್ಪ ಎಂದು ಹೇಳಿಬಿಡುತ್ತಿದ್ದ. ವಿದ್ಯಾಭ್ಯಾಸದಲ್ಲೂ ಹೆಚ್ಚು ಗಮನ ಹರಿಸುತ್ತಿರಲಿಲ್ಲ. ಏನು ಪುಟಾಣಿಗಳೇ ! ನೀವು ಹೇಗಿದ್ದೀರ? . . Daily Jesus ಹತ್ತಿರ ಪ್ರಾರ್ಥಿಸಬೇಕು ಸರೀನಾ? ಜೋಯಲ್ ಸರಿಯಾಗಿ ಓದದೆ ಏನೋ just pass ಆಗಿ ಯಾವುದೋ ಒಂದು ಸಣ್ಣ ಕೆಲಸಕ್ಕೆ ಹೋದನು. ದಿನಗಳು ಕಳೆದವು. ಕೆಲವೇ ವರ್ಷಗಳಲ್ಲಿ ಜೋಸೆಫ್ ತನ್ನ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿದನು. ನೌಕರಿ ಸಿಗುವವರೆಗೂ ಚಿಕ್ಕ ಚಿಕ್ಕ ಕೆಲಸಗಳನ್ನು ಕಲಿಯುತ್ತಲೇ ಇದ್ದ. ಅನಿರೀಕ್ಷಿತವಾಗಿ ಸರ್ಕಾರಿ ನೌಕರಿಯೂ ಸಿಕ್ಕಿತು. ಒಂದು ದಿನ ಜೋಸೆಫ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಸರಿಯಾಗಿ ನಡೆಯಲು ಸಾಧ್ಯವಾಗದೆ ಕೈಯಲ್ಲಿ ಕಿತ್ತು ಹೋದ ಚಪ್ಪಲಿಯನ್ನು ಹಿಡಿದುಕೊಂಡು ಒಬ್ಬರು ಬರುತ್ತಿದ್ದರು. ಯಾರೆಂದು ನೋಡಿದರೆ ಅದು ಜೋಯಲ್. ಅವನು ಜೋಯಲ್‌ನನ್ನು ಗೆಳೆಯಾ ಎಂದು ತಬ್ಬಿಕೊಂಡನು. ಜೋಯಲ್ ತನ್ನ ಬಾಲ್ಯದ ಗೆಳೆಯ ಜೋಸೆಫ್ ಎಂದು ಗುರುತಿಸಿದನು. ಇಷ್ಟು ಚೆನ್ನಾಗಿ ಟಿಪ್ ಟಾಪ್ ಆಗಿ ಇದ್ದಾನಲ್ಲಾ! ಆದರೆ ನನ್ನಂತಹ ಸಾಮಾನ್ಯವಾದವನನ್ನೂ ಪ್ರೀತಿಸುವ ಪ್ರೀತಿ ಅವನಲ್ಲಿರುವುದನ್ನು ಕಂಡು ಸಂತೋಷಪಟ್ಟನು. ಬಾ ನನ್ನ ಮನೆ ಪಕ್ಕದಲ್ಲೇ ಇದೆ ಎಂದು ಜೋಸೆಫ್ ಜೋಯಲ್ ನನ್ನು ಕರೆದುಕೊಂಡು ಹೋದನು. ಎರಡು ದಿನಗಳು ಇರಿಸಿಕೊಂಡು ಚೆನ್ನಾಗಿ ಉಪಚರಿಸಿದನು.

 

ಮರುದಿನ ಬೆಳಿಗ್ಗೆ, ನಾನು ಊರಿಗೆ ಹೊರಡುತ್ತೇನೆ. ಸುತ್ತಮುತ್ತ ಯಾರಾದರೂ ಚಪ್ಪಲಿ ಹೊಲಿಯುವವರು ಇದ್ದಾರಾ ಎಂದು ವಿಚಾರಿಸಿದನು. ಜೋಸೆಫ್ ಚಪ್ಪಲಿಯನ್ನು ಸುಂದರವಾಗಿ ಹೊಲಿದು, "ಇದೋ ನಿನ್ನ ಚಪ್ಪಲಿ" ಎಂದು ಕೊಟ್ಟನು. ಅಬ್ಬಬ್ಬಾ ನಿನಗೆ ಈ ಕೆಲಸವೂ ಗೊತ್ತಾ? ಎಂದು ಜೋಯಲ್ ಆಶ್ಚರ್ಯಪಟ್ಟನು. ಸಣ್ಣಪುಟ್ಟ ಕೆಲಸಗಳನ್ನು ಕಲಿತುಕೊಂಡೆ. ನನಗೆ ತಿಳಿದದ್ದನ್ನು ಮಾಡಿದೆ ಅಷ್ಟೇ ಅಂದನು. ಇಂತಹ ತಾಳ್ಮೆ ಮತ್ತು ಪ್ರೀತಿ ಹೇಗೆ ಬಂತು. ನೀನು ಪ್ರತಿದಿನ ಪ್ರಾರ್ಥಿಸಿ ಯೇಸಪ್ಪನ ಮಗುವಾಗಿ ಜೀವಿಸುತ್ತಿರುವುದರಿಂದಲೇ ಇಂತಹ ಉನ್ನತ ಸ್ಥಾನದಲ್ಲಿದ್ದೀಯ. ನೀನು ಹೇಳದೆಯೇ ನಿನ್ನ ಜೀವನ ನನಗೆ ಪಾಠ ಕಲಿಸಿದೆ ಗೆಳೆಯಾ, ನಿನ್ನನ್ನು ಭೇಟಿಯಾಗಿದ್ದಕ್ಕೆ ನನಗೆ ತುಂಬಾ ಸಂತೋಷವಾಯಿತು” ಎಂದು ಜೋಯಲ್ ಹೇಳಿದನು. ಯೇಸಪ್ಪ ಅವನೊಂದಿಗಿರುವುದರಿಂದ ಅವರ ಸ್ವಾರೂಪ್ಯದಂತೆಯೇ ಮಾರ್ಪಟ್ಟಿದ್ದಾನೆ ಎಂದು ಮನಸ್ಸಿನಲ್ಲಿ ಯೋಚಿಸುತ್ತಾ, ನಾನು ಸಹ ಯೇಸುವನ್ನು ನಂಬಿಕೆಯಿಂದ ಹುಡುಕಲು ಹೋಗುತ್ತೇನೆ ಎಂದು ಹೇಳಿ ನಡೆಯಲು ಪ್ರಾರಂಭಿಸಿದನು. ಪುಟಾಣಿಗಳೇ! ಯೇಸಪ್ಪನ, ಪ್ರೀತಿ, ದೀರ್ಘ ಶಾಂತಿ, ತಾಳ್ಮೆ, ದಯೆ. . . ಇನ್ನೂ ಅನೇಕ ಗುಣಗಳು ನಿಮ್ಮಲ್ಲಿ ಕಾಣಲ್ಪಡಲು ಪ್ರತಿದಿನ ಅವರೊಂದಿಗೆ ಮಾತನಾಡಬೇಕು. ಆಗ ಮಾತ್ರವೇ ನೀವು ಅವರ ಸ್ವಾರೂಪ್ಯದಲ್ಲಿ ಮಾರ್ಪಡಲು ಸಾಧ್ಯ. ಸರೀನಾ, ಪುಟಾಣಿಗಳೇ!

- Sis. ದೆಬೋರಾಳ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin