Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 02.12.2023
Share:

By Village Missionary Movement

Saturday, 02-Dec-2023

ಧೈನಂದಿನ ಧ್ಯಾನ(Kannada) – 02.12.2023

 

ಹೆಚ್ಚು-ಕಡಿಮೆ

 

"…ಬೆಳೆಯು ಬಹಳ, ಕೆಲಸದವರು ಸ್ವಲ್ಪ;" - ಮತ್ತಾಯ 9:37

 

ಒಂದು ಹಳ್ಳಿಯಲ್ಲಿ ಸುಂದರವಾದ ಕುಟುಂಬವೊಂದು ಕ್ರಿಸ್ತನಿಗಾಗಿ ಜೀವಿಸುತ್ತಿತ್ತು. ಆ ಕುಟುಂಬದಲ್ಲಿ ಮೂವರು ಹೆಣ್ಣುಮಕ್ಕಳು ಮತ್ತು ತಾಯಿಯೊಬ್ಬರು ಇದ್ದರು. ಆ ತಾಯಿಗೆ ತನ್ನ ಮೂವರು ಹೆಣ್ಣು ಮಕ್ಕಳನ್ನು ಕ್ರಿಸ್ತ ಯೇಸುವಿನ ಸೇವೆಗೆ ಕಳುಹಿಸುವ ಆಸೆ ಇತ್ತು! ಅಂತೆಯೇ ಅವರು ತಮ್ಮ ಮೊದಲ ಮಗಳನ್ನು ಅಸಂಸ್ಕೃತ ಆದಿವಾಸಿಗಳು ವಾಸಿಸುವ ಸ್ಥಳಕ್ಕೆ ಕಳುಹಿಸಿದರು. ಅವರು ಹೋದ ಕೆಲವೇ ತಿಂಗಳುಗಳಲ್ಲಿ ವಿಷ ಜ್ವರದಿಂದ ಬಾಧಿಸಲ್ಪಟ್ಟು ವೈದ್ಯಕೀಯ ಸೌಲಭ್ಯವೇ ಇಲ್ಲದ ಆ ಪ್ರದೇಶದಲ್ಲಿ ಮೃತಪಟ್ಟರು. ನಂತರ ತನ್ನ ಇಬ್ಬರು ಹೆಣ್ಣು ಮಕ್ಕಳನ್ನೂ ಕಳುಹಿಸಲು ಬಯಸುವುದಾಗಿ ಸಂಬಂಧಿಕರು ಮತ್ತು ಸ್ನೇಹಿತರಿಗೆ ತಿಳಿಸಿದರು. ಆಗ ಅವರು ಬೇಡ ಎಂದು ಹೇಳಿ ಈ ತಾಯಿಯನ್ನು ಬೈದರು. ಆದರೆ ತಾಯಿ ಯಾರ ಮಾತನ್ನೂ ಕೇಳದೆ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಕಳುಹಿಸಿದರು. ಅವರು ಹಲವು ವರ್ಷಗಳ ಕಾಲ ಉತ್ತಮವಾಗಿ ಸೇವೆ ಸಲ್ಲಿಸಿದರು. ಅವರಿಗೂ ಅದೇ ರೀತಿಯ ವೈರಸ್ ಸೋಂಕು ತಗುಲಿ ಸಾವನ್ನಪ್ಪಿದರು. ತಾಯಿಗೆ ಈ ಸುದ್ದಿ ಬಂತು. ಆಗ ತಾಯಿಯವರು ಮನಮುರಿದು ಅತ್ತರು. ನಮ್ಮ ಮಾತು ಕೇಳದೆ ಸೇವೆಗೆ ಕಳುಹಿಸಿ ಮೂವರು ಹೆಣ್ಣು ಮಕ್ಕಳನ್ನು ಕಳೆದುಕೊಂಡು ಅಳುತ್ತಿದ್ದೀಯ. ಅಳುವುದರಿಂದ ಏನು ಪ್ರಯೋಜನ ಎಂದು ಕೇಳಿದರು. ಸತ್ತ ಮಕ್ಕಳಿಗಾಗಿ ನಾನು ಅಳುತ್ತಿಲ್ಲ, ಸೇವೆಗೆ ಕಳುಹಿಸಲು ಬೇರೆ ಮಕ್ಕಳಿಲ್ಲವಲ್ಲಾ ಎಂದು ಅಳುತ್ತಿದ್ದೇನೆ ಎಂದು ತಾಯಿ ಹೇಳಿದರು.

 

ಒಬ್ಬ ಬಡ ವಿಧವೆ ತನ್ನ ಬಳಿಯಿದ್ದ ಎರಡು ನಾಣ್ಯಗಳನ್ನು ಕಾಣಿಕೆ ಪೆಟ್ಟಿಗೆಯಲ್ಲಿ ಹಾಕಿದಳು. ಆಗ ಯೇಸು ಈ ಬಡ ವಿಧವೆ ಬೇರೆ ಎಲ್ಲರಿಗಿಂತ ಹೆಚ್ಚು ಹಣವನ್ನು ಕಾಣಿಕೆ ಪೆಟ್ಟಿಗೆಯಲ್ಲಿ ಹಾಕಿದ್ದಾಳೆ ಎಂದು ಹೇಳಿದರು. ಆ ಸಂದರ್ಭದಲ್ಲಿ, ಬಡ ವಿಧವೆ ತನಗಾಗಿ ಏನನ್ನೂ ಉಳಿಸಿಕೊಳ್ಳಲಿಲ್ಲ ಮತ್ತು ತನ್ನ ಜೀವನಕ್ಕಾಗಿ ತನ್ನಲ್ಲಿದ್ದ ಎಲ್ಲವನ್ನೂ ಕೊಟ್ಟುಬಿಟ್ಟಳು.

 

ಇದನ್ನು ಓದುತ್ತಿರುವ ದೇವರ ಮಕ್ಕಳೇ, ಬಡ ವಿಧವೆ ತನ್ನಲ್ಲಿದ್ದ ಎಲ್ಲವನ್ನೂ ದೇವರಿಗಾಗಿ ಕೊಟ್ಟುಬಿಟ್ಟಳು. ಅದು ದೇವರ ದೃಷ್ಟಿಯಲ್ಲಿ ಅಮೂಲ್ಯವಾಗಿತ್ತು. ಇಂದು ವಿಶ್ವ ಕಾರ್ಯಕ್ಕಾಗಿ ಅಧ್ಯಯನ ಮಾಡಿದ ಅನೇಕ ಪದವೀಧರರಿದ್ದಾರೆ. ಆದರೆ ದೇವರ ಕೆಲಸ ಮಾಡಲು ಒಬ್ಬರೂ ಇಲ್ಲ. ಬೆಳೆಯು ಬಹಳ, ಕೆಲಸದವರು ಸ್ವಲ್ಪವಾಗಿರುವ ಈ ದಿನಗಳಲ್ಲಿ ನೀವು ಕೆಲಸಗಾರರಾಗಿ ಬರುತ್ತೀರಾ? ಕಣ್ಣೀರಿನಿಂದ ಯೇಸು ನಿಮ್ಮ ಹತ್ತಿರ ನಿಂತಿದ್ದಾರೆ. ನೀವು ಬುದ್ಧಿಹೀನರಾದರೂ ಅಥವಾ ಬಲಹೀನರಾದರೂ ಪರವಾಗಿಲ್ಲ. "ದೇವರು ಜ್ಞಾನಿಗಳನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬುದ್ಧಿಹೀನರನ್ನು ಆರಿಸಿಕೊಂಡಿದ್ದಾನೆ; ಇಂದು ನಾವು ಯಾರಾಗಿದ್ದರೂ ಪರವಾಗಿಲ್ಲ ಅಂತ್ಯದ ಬಗ್ಗೆ ಚಿಂತೆಮಾಡದೆ ದೇವರ ಸೇವೆಯನ್ನು ಮಾಡೋಣ. ನಿಮ್ಮ ಬಳಿ ಇರುವುದನ್ನು ಅವರಿಗಾಗಿ ಬಿತ್ತುತ್ತೀರಾ? ಇಂದು ನಾವು ಬಿತ್ತುವುದರ ಫಲವನ್ನು ನಮ್ಮ ಕಣ್ಣುಗಳಿಂದ ನೋಡಲು ಸಾಧ್ಯವಾಗದಿದ್ದರೂ, ಖಂಡಿತವಾಗಿಯೂ ಅದರ ಫಲವು ಒಂದು ದಿನ ಹೇರಳವಾಗಿರುತ್ತದೆ!

- Mrs. ಭುವಿತಾ ಎಬಿನೇಜರ್

 

ಪ್ರಾರ್ಥನಾ ಅಂಶ:

ಹತ್ತು ಸಾವಿರ ಹಳ್ಳಿಗಳಿಗೆ ಸುವಾರ್ತೆ ಸಾರುವ ಯೋಜನೆಯಲ್ಲಿ ನಮ್ಮೊಂದಿಗೆ ಸೇರಿರುವ ಸ್ವಯಂಸೇವಕರಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al