Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 01.12.2023
Share:

By Village Missionary Movement

Friday, 01-Dec-2023

ಧೈನಂದಿನ ಧ್ಯಾನ(Kannada) – 01.12.2023

 

ಕಥೆ ರೆಡಿ 

 

"ನಾನು ನಿನ್ನನ್ನು ಗರ್ಭದಲ್ಲಿ ರೂಪಿಸುವದಕ್ಕೆ ಮುಂಚೆ ನಿನ್ನನ್ನು ತಿಳಿದಿದ್ದೆನು;…" - ಯೆರೆಮಿಯ 1:5

 

ಒಂದು ಸಿನಿಮಾ ಚಿತ್ರೀಕರಣಕ್ಕೆ ಮೊದಲು ನಿರ್ದೇಶಕರು ಸಿದ್ಧಮಾಡುವುದು ಕಥೆ. ನಂತರವಷ್ಟೇ ನಾಯಕ, ಸಂಗೀತ, ಗೀತರಚನೆಕಾರರಾಗಿ ಯಾರ್ಯಾನ್ನು ಆಯ್ಕೆ ಮಾಡೋಣ ಎಂದು ಯೋಚಿಸುತ್ತಾರೆ. ಅದೇ ರೀತಿಯಲ್ಲಿ, ನಮ್ಮನ್ನು ಸೃಷ್ಟಿಸಿದ ನಿರ್ದೇಶಕನಾದ ದೇವರು ನಮ್ಮ ತಾಯಿಯ ಗರ್ಭದಲ್ಲಿ ನಾವು ರೂಪುಗೊಳ್ಳುವ ಮೊದಲೇ ನಮ್ಮ ಜೀವನದ ಸಂಪೂರ್ಣ ಯೋಜನೆಯನ್ನು ಸಿದ್ಧಪಡಿಸುತ್ತಾರೆ. ಏನಿದು ಆಶ್ಚರ್ಯವಾಗಿದೆಯಾ? ಹೌದು, "ನಾನು ನಿನ್ನನ್ನು ಗರ್ಭದಲ್ಲಿ ರೂಪಿಸುವದಕ್ಕೆ ಮುಂಚೆ ನಿನ್ನನ್ನು ತಿಳಿದಿದ್ದೆನು" ಎನ್ನುತ್ತಾರೆ. ಅಷ್ಟೇ ಅಲ್ಲದೆ, " ನಮ್ಮ ಅಂಗಾಂಗಗಳು ರೂಪುಗೊಳ್ಳುವ ದಿನಗಳ ಬಗ್ಗೆಯೂ ತಿಳಿದಿದ್ದಾರೆ".

 

ನಮ್ಮ ಜೀವನದಲ್ಲಿ ನಾವು ಎದುರುಗೊಳ್ಳುವ ಕಾರ್ಯಗಳು ಯಾವೂ ಸಹ ಆಕಸ್ಮಿಕವಾಗಿ ಅಥವಾ ಅಪಘಾತವಾಗಿ ದಿಢೀರನೆ ಸಂಭವಿಸುವುದಿಲ್ಲ. ಎಲ್ಲವೂ ದೇವರಿಂದ ಪೂರ್ವನಿರ್ಧರಿತವಾದವುಗಳೇ! ನಮ್ಮ ಮನೆ, ತಾಯಿ, ತಂದೆ ಮತ್ತು ಒಡಹುಟ್ಟಿದವರು ಎಲ್ಲವೂ ನಮಗೆ ಅವರ ಯೋಜನೆಯ ಪ್ರಕಾರವೇ ನೀಡಲಾಯಿತು. ನಮ್ಮ ದೇವರು ಎಲ್ಲವನ್ನೂ ಎಲ್ಲವುಗಳಿಂದ ತುಂಬಿಸುತ್ತಾನೆ; ಏಕೆಂದರೆ ಕೊರತೆಯನ್ನು ಬಯಸದಾತನು! ಮತ್ತು ಎಲ್ಲವನ್ನೂ ಅದರದರ ಕಾಲದಲ್ಲಿ ಸರಿಯಾಗಿ ಮಾಡುವವರು, ನಮ್ಮ ಜೀವನದ ಎಲ್ಲಾ ಕಾರ್ಯಗಳನ್ನೂ ಯೋಜನೆ ಹಾಕಿ ಕಳುಹಿಸಿದ್ದಾರೆ. ನಮ್ಮ ಜೀವನವು ಅವರ ಕೈಗಳಲ್ಲಿದೆ. ಹಾಗಾಗಿ ದಾರಿ ತಪ್ಪುವ ಅಥವಾ ಕೆಟ್ಟುಹೋಗುವ ಸಾಧ್ಯತೆಯೇ ಇಲ್ಲ. ಅಷ್ಟೇಕೆ ಯೇಸು ಕ್ರಿಸ್ತನೇ ದೇವರ ಯೋಜನೆಯ ಪ್ರಕಾರ ಬಂದರು. ಅವರ ಹುಟ್ಟಿನಿಂದ ಸಾಯುವವರೆಗೂ ಎಲ್ಲವೂ ದೇವರ ವಾಕ್ಯವು ನೆರವೇರುವ ಪ್ರಕಾರವೇ ನಡೆದಿರುವುದನ್ನು ಕಾಣುತ್ತೇವೆ. ಕನ್ಯೆಯ ಗರ್ಭದಲ್ಲಿ ಪವಿತ್ರಾತ್ಮದಿಂದ ಗರ್ಭಧರಿಸುವುದು, ಬೇತ್ಲೆಹೇಮಿನಲ್ಲಿ ಹುಟ್ಟುವುದು, ಎರಡು ವರ್ಷದೊಳಗಿನ ಗಂಡು ಮಕ್ಕಳನ್ನು ಕೊಲ್ಲುವುದು, ನಜರೇತಿಗೆ ಹೋಗುವುದು, ದೀಕ್ಷಾಸ್ನಾನ ಮಾಡಿಸಿಕೊಳ್ಳುವುದು ಹೀಗೆ ಎಲ್ಲವೂ ತಂದೆಯಾದ ದೇವರು ಪ್ರವಾದಿಗಳ ಮೂಲಕ ತಿಳಿಸಿದ್ದರು. ಆದ್ದರಿಂದ ಯೇಸು ಕ್ರಿಸ್ತನು ತಂದೆಯೊಂದಿಗೆ ಸಂಬಂಧವನ್ನು ಹೊಂದಿದ್ದು ಪ್ರತಿ ದಿನದ ಯೋಜನೆಯನ್ನು ಪಡೆದುಕೊಂಡು ಅದನ್ನು ಹಾಗೆಯೇ ಮಾಡಿದರು. ಅಷ್ಟೇ ಏಕೆ ಶಿಲುಬೆಯಲ್ಲಿ ನೇತಾಡುತ್ತಿರುವಾಗಲೂ ಸಹ ದೇವರ ವಾಕ್ಯವು ನೆರವೇರಲು ದಾಹದಿಂದಿದ್ದೇನೆ ಎಂದರು.

 

ಇದನ್ನು ಓದುತ್ತಿರುವ ಪ್ರಿಯರೇ, ನಾನು ಏಕೆ ಹುಟ್ಟಿದ್ದೇನೆ ಮತ್ತು ಏಕೆ ಬದುಕುತ್ತಿದ್ದೇನೆ ಎಂದು ನೀವು ಯೋಚಿಸುತ್ತಿದ್ದೀರಾ? ಹುಟ್ಟಿದ್ದಕ್ಕೆ ಒಂದು ಯೋಜನೆ ಇದೆ! ಯೇಸುಕ್ರಿಸ್ತನು ಕೂಡ ಅವರ ಕಥೆಗೆ ತಕ್ಕಂತೆ ಜೀವಿಸಿ ತಂದೆಯ ಬಲಪಾರ್ಶ್ವದಲ್ಲಿದ್ದಾರೆ. ನೀವು ಸಹ ದೇವರ ಚಿತ್ತವನ್ನು ಪೂರೈಸಿದರೆ, ನೀವೂ ಅವರೊಂದಿಗೆ ಆಳಬಹುದು. ದೇವರು ನಮ್ಮನ್ನು ಮಾತ್ರ ವಿಶೇಷವಾಗಿ ಪ್ರತ್ಯೇಕವಾಗಿ ಒಬ್ಬರೊಂದಿಗೊಬ್ಬರನ್ನು ಹೋಲಿಸಿ ನೋಡಲಾಗದಷ್ಟು ಮಟ್ಟಿಗೆ ಇಟ್ಟಿದ್ದಾರೆ. ನೀವು ಸಾಮಾನ್ಯವಾದವರಲ್ಲ! ಅವರ ಯೋಜನೆಯಲ್ಲಿರುವ ನೀವು ಪ್ರತ್ಯೇಕವಾದವರು! ಎಂಬುದನ್ನು ಎಂದಿಗೂ ಮರೆತು ಹೋಗಬೇಡಿರಿ.

- K. ಡೇವಿಡ್ ಗಣೇಶನ್

 

ಪ್ರಾರ್ಥನಾ ಅಂಶ:

ಈ ತಿಂಗಳು ಪೂರ್ತಿಯಾಗಿ ನಡೆಯುವಂತಹ ಸೇವೆಗಳಲ್ಲಿ ದೇವರ ಹಸ್ತವು ಜೊತೆಯಿದ್ದು ನಡೆಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin