Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 29.11.2023
Share:

By Village Missionary Movement

Wednesday, 29-Nov-2023

ಧೈನಂದಿನ ಧ್ಯಾನ(Kannada) – 29.11.2023

 

ಕೋಪ ಬೇಡ

 

"ಮನುಷ್ಯನ ಕೋಪವು ದೇವರ ನೀತಿಯನ್ನು ನಡಿಸುವದಿಲ್ಲ" - ಯಾಕೋಬ 1:20

 

ಒಬ್ಬ ಯುವಕನಿಗೆ ಅಧಿಕವಾಗಿ ಕೋಪ ಬರುತ್ತಲೇ ಇತ್ತು. ಅವನಿಗೆ ಕೋಪಬಂದಾಗ ಭಯಂಕರವಾಗಿ ಕಿರುಚಾಡಿಬಿಡುತ್ತಿದ್ದನು. ಒಂದು ದಿನ ಅವನ ತಂದೆ ಅವನಿಗೆ ಸುತ್ತಿಗೆ ಮತ್ತು ಅನೇಕ ಮೊಳೆಗಳನ್ನು ಕೊಟ್ಟರು. "ಇನ್ನು ಮುಂದೆ ಕೋಪ ಬಂದಾಗ ಎಲ್ಲಾ ಮನೆಯ ಹಿಂಬದಿಯಲ್ಲಿರುವ ಗೋಡೆಗೆ ಮೊಳೆ ಹೊಡೆಯುವಂತೆ ಹೇಳಿದರು". ಮೊದಲ ದಿನ 10 ಮೊಳೆಗಳು, ಮರುದಿನ 7, ನಂತರ 5, 2 ಮೊಳೆಗಳು ಹೊಡೆಯುತ್ತಾ ಕ್ರಮೇಣವಾಗಿ ಕೋಪ ಕಡಿಮೆಯಾಯಿತು. ಒಂದು ದಿನ ಅವನು ಒಂದೇ ಒಂದು ಮೊಳೆಯನ್ನು ಹೊಡೆದನು. "ಅವನು ತನ್ನ ತಂದೆಯ ಬಳಿ ಒಟ್ಟು 45 ಮೊಳೆಗಳನ್ನು ಹೊಡೆದಿದ್ದೇನೆ, ಇನ್ನು ಮುಂದೆ ನನಗೆ ಕೋಪ ಬರುವುದಿಲ್ಲ" ಎಂದು ಹೇಳಿದನು. ಅಪ್ಪ ಅವನಿಗೆ ಹೇಳಿದರು, ಇನ್ನು ಮುಂದೆ ನಿನಗೆ ಕೋಪಬರದ ದಿನದಂದು ಪ್ರತಿಯೊಂದು ಮೊಳೆಯನ್ನು ಕಿತ್ತುಬಿಡು ಎಂದರು. ಹೆಮ್ಮೆಯಿಂದ ತಂದೆಯನ್ನು ಕರೆದು 45 ದಿನಗಳಲ್ಲಿ ಹೊಡೆದ ಮೊಳೆಗಳನ್ನು ಕಿತ್ತುಬಿಟ್ಟೆನು ಎಂದು ತೋರಿಸಿದನು. ಕೂಡಲೇ ಅಪ್ಪ ಹೇಳಿದರು ಮೊಳೆಗಳನ್ನು ಕಿತ್ತುಬಿಟ್ಟೆ ಗೋಡೆಯಲ್ಲಿರುವ ರಂಧ್ರಗಳನ್ನು ಏನು ಮಾಡುತ್ತೀಯ? ನಿನ್ನ ಕೋಪ ಇದರಂತೆ ಎಷ್ಟೋ ಜನರನ್ನು ನೋಯಿಸಿರುತ್ತದೆ ಅಲ್ವಾ? ಆ ಯುವಕನು ನಾಚಿಕೆಯಿಂದ ತಲೆ ತಗ್ಗಿಸಿದನು. ಇಸ್ರಾಯೇಲ್ ಜನರನ್ನು ಮುನ್ನಡೆಸಲು ದೇವರಿಂದ ಆರಿಸಲ್ಪಟ್ಟು ಮೊದಲೇ ಸೂಚಿಸಲ್ಪಟ್ಟ ಅತ್ಯುತ್ತಮ ನಾಯಕನೇ ಮೋಶೆ. ಮೋಶೆಯು ಕಾನಾನ್ ದೇಶವನ್ನು ಪ್ರವೇಶಿಸಲು ಇಸ್ರಾಯೇಲ್ ಜನರನ್ನು ಮುನ್ನಡೆಸುತ್ತಿರುವಾಗ, ಅನೇಕ ಸಮಸ್ಯೆಗಳು ಮತ್ತು ಅಗತ್ಯಗಳು ಉದ್ಭವಿಸಿದವು. ಮೋಶೆ ದೇವರ ಸನ್ನಿಧಾನದಲ್ಲಿ ಅವರ ಅಗತ್ಯಗಳಿಗಾಗಿ ಕಾಯುತ್ತಾ ದೇವರು ಹೇಳುವ ಆಲೋಚನೆಗಳನ್ನು ಕೇಳಿ ಇವರ ಅಗತ್ಯಗಳನ್ನು ಪೂರೈಸುತ್ತಿದ್ದರು. ಹಾಗೆಯೇ ಒಂದು ಸಾರಿ ಜನರಿಗೆ ನೀರಿನ ಅಗತ್ಯವಿದ್ದಾಗ ಕರ್ತನು ಮೋಶೆಗೆ ಅವರ ಕಣ್ಣೆದುರಿಗೆ ಬಂಡೆಯನ್ನು ನೋಡಿ ಮಾತನಾಡು, ಆಗ ಅದು ತನ್ನಲ್ಲಿರುವ ನೀರನ್ನು ಕೊಡುತ್ತದೆ ಎಂದರು. ಆದರೆ ಮೋಶೆಯು ಕೋಪದಿಂದಾಗಿ ಮಾತನಾಡುವ ಬದಲು ತನ್ನ ಕೈಯನ್ನು ಚಾಚಿ ತನ್ನ ಕೋಲಿನಿಂದ ಬಂಡೆಯನ್ನು ಎರಡು ಬಾರಿ ಹೊಡೆದನು. ಮೋಶೆಯ ಕೋಪದ ಕ್ರಿಯೆಯು ಅವನನ್ನು ಕಾನಾನ್‌ಗೆ ಪ್ರವೇಶಿಸದಂತೆ ತಡೆಯಿತು.

 

ಪ್ರಿಯರೇ, ಇತರರನ್ನು ನೋಯಿಸುವುದನ್ನು ನಿಲ್ಲಿಸಿದಾಗ ಜೀವನದಲ್ಲಿ ಹೊಸ ಅಧ್ಯಾಯವು ಹುಟ್ಟುತ್ತದೆ. ಕೋಪವನ್ನು ಬಿಟ್ಟುಬಿಡಬೇಕು. ಕೋಪವು ಇತರರ ಹೃದಯವನ್ನು ಚುಚ್ಚಿ ಹರಿದು ಗಾಯಗೊಳಿಸಿ ಬಹಳ ನೋವನ್ನು ಉಂಟುಮಾಡುತ್ತದೆ ಎಂಬುದನ್ನು ತಿಳಿದುಕೊಂಡರೆ ನಮ್ಮಲ್ಲಿ ಯಾರೂ ಕೋಪಗೊಳ್ಳುವುದಿಲ್ಲ. ಕೋಪದಲ್ಲಿ ನಾವು ಆಡುವ ಮಾತುಗಳು, ಮಾಡುವ ಕಾರ್ಯಗಳೂ ಯಾವುದೂ ಫಲ ನೀಡುವುದಿಲ್ಲ. ಆದ್ದರಿಂದ ನಾವು ಕೋಪವನ್ನು ಬಿಟ್ಟು ಬಿಡಲು ಪವಿತ್ರಾತ್ಮನ ಸಹಾಯವನ್ನು ಪಡೆದು 

ಆತನ ಕೈಗಳಿಗೆ ನಮ್ಮನ್ನು ಒಪ್ಪಿಸಿಕೊಡೋಣ.

- Mrs. ಶಕ್ತಿ ಶಂಕರರಾಜ್

 

ಪ್ರಾರ್ಥನಾ ಅಂಶ:

ಛತ್ತೀಸ್‌ಗಢ ಮತ್ತು ಗುಜರಾತ್ ಸೇವೆಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş