By Village Missionary Movement
Tuesday, 28-Nov-2023ಧೈನಂದಿನ ಧ್ಯಾನ(Kannada) – 28.11.2023
ಕೃತಜ್ಞತೆಯಿಂದ ಬದುಕೋಣವೇ?
"ನಾನು ಯೆಹೋವನನ್ನು ಎಡೆಬಿಡದೆ ಕೊಂಡಾಡುವೆನು; ಆತನ ಸ್ತೋತ್ರವು ಯಾವಾಗಲೂ ನನ್ನ ಬಾಯಲ್ಲಿ ಇರುವದು" - ಕೀರ್ತನೆ 34:1
"ಗಾರಿ" ಎಂಬ ಒಂದು ಜನಾಂಗೀಯ ಜನರು ಆಫ್ರಿಕಾದಲ್ಲಿ ವಾಸಿಸುತ್ತಿದ್ದಾರೆ. ಅವರಲ್ಲಿ ಒಂದು ವ್ಯತ್ಯಾಸವಾದ ಅಭ್ಯಾಸವಿದೆ. ಅದೇನೆಂದರೆ ಪರಸ್ಪರ ಕೃತಜ್ಞತೆ ಸಲ್ಲಿಸುವ ವಿಧಾನವಾಗಿದೆ! ಅದು ತುಂಬಾ ಸ್ವಾರಸ್ಯಕರವಾಗಿದೆ. ಕೃತಜ್ಞತೆ ಸಲ್ಲಿಸುವ ವ್ಯಕ್ತಿ, ಕೃತಜ್ಞತೆ ಹೇಳಲು ಬಯಸುತ್ತಾರೋ, ಅವರ ಮನೆಗೆ ಹೋಗಿ ಅವರೊಂದಿಗೆ ಮೌನವಾಗಿ ಕುಳಿತುಕೊಳ್ಳುತ್ತಾರೆ. ಸ್ವಲ್ಪ ಹೊತ್ತು ಏನೂ ಮಾತನಾಡದೆ ಹಾಗೇ ಕುಳಿತು ತನ್ನ ಕೃತಜ್ಞತೆ ಸಲ್ಲಿಸುತ್ತಿದ್ದರು.
ಹೌದು, ನಾವು ಪರಲೋಕ ದೇವರಿಗೆ ಕೃತಜ್ಞತೆ ಸಲ್ಲಿಸಲು ಬಯಸಿದರೆ, ಅವರ ಸಮ್ಮುಖದಲ್ಲಿ ಮನಃಪೂರ್ವಕವಾಗಿ ಕುಳಿತುಕೊಳ್ಳುವುದೇ ಸರಿಯಾದ ಮಾರ್ಗ. ಬೇಥಾನ್ಯದ ಮರಿಯಳು ಹಾಗೆಯೇ ಮಾಡಿದಳು. ದೇವರ ಸಮ್ಮುಖದಲ್ಲಿ ನಮ್ಮ ವಿಜ್ಞಾಪನೆಗಳನ್ನು ಪಟ್ಟಿ ಮಾಡದೆ ದೇವರು ಮಾಡಿದ ಉಪಕಾರಗಳನ್ನು ನೆನೆಸಿ ದೇವರಿಗೆ ಕೃತಜ್ಞತೆ ಸಲ್ಲಿಸುತ್ತಾ ಮೌನವಾಗಿ ಅವರ ಸಮ್ಮುಖದಲ್ಲಿ ಕುಳಿತಿರಬೇಕು. ಆಗ ಮಾತ್ರ ದೇವರ ಬಗ್ಗೆ ತಿಳಿಯಬಹುದು. ಮರಿಯಳ ಸಹೋದರನಾದ ಲಾಜರನು ಸತ್ತ ನಾಲ್ಕು ದಿನಗಳ ನಂತರ ಯೇಸು ಬಂದಾಗ, ಮರಿಯಳು ಯೇಸುವಿನ ಪಾದಗಳಲ್ಲಿ ಬಿದ್ದು, "ಸ್ವಾಮೀ, ನೀನು ಇಲ್ಲಿ ಇರುತ್ತಿದ್ದರೆ ನನ್ನ ತಮ್ಮನು ಸಾಯುತ್ತಿರಲಿಲ್ಲ" ಅಂದಳು. ಯೇಸು ಅವಳನ್ನು ಅವನನ್ನು ಎಲ್ಲಿ ಇಟ್ಟಿದ್ದೀರಿ ಎಂದು ಕೇಳಿದ ಕೂಡಲೇ, ನಂಬಿಕೆಯಿಂದ "ಬಂದು ನೋಡು" ಅಂದಳು. ಯೆಹೂದ್ಯರಿಗೆ ಇನ್ನೊಂದು ಮಾತನ್ನೂ ಹೇಳಲಿಲ್ಲ. ಆ ಕಲ್ಲನ್ನು ತೆಗೆದುಹಾಕಿರಿ ಅನ್ನಲು ಮಾರ್ಥಳು ಮಾತ್ರ "ನಾತ ಹುಟ್ಟಿದೆ" ಅಂದಳು. ಮರಿಯಳು ಅದೇ ಸ್ಥಳದಲ್ಲಿ ದೇವರ ಸಮ್ಮುಖದಲ್ಲಿ ನಂಬಿಕೆಯೊಂದಿಗೆ ಮೌನವಾಗಿದ್ದಾಳೆ. ತನ್ನ ಸಹೋದರನನ್ನು ಜೀವಂತವಾಗಿ ಪಡೆದುಕೊಂಡಳು.
ಇದನ್ನು ಓದುತ್ತಿರುವ ಪ್ರಿಯರೇ! ನಿಮ್ಮ ಕಾರ್ಯವು ಸತ್ತದ್ದಾಗಿದ್ದರೂ ದೇವರ ಸಮ್ಮುಖದಲ್ಲಿ ಮೌನವಾಗಿ, ಅವರ ಬಳಿ ಪ್ರಶ್ನೆ ಕೇಳದೆ ಕುಳಿತರೆ ಸಾಕು. ನಿಮ್ಮ ತೋರಿಕೆಯಲ್ಲಿ ಅಸಾಧ್ಯವೆಂದು ತೋರುವ ಕಾರ್ಯಕ್ಕೂ ಜೀವ ಬರುತ್ತದೆ. ನೀವು ಕೃತಜ್ಞತೆ ಸಲ್ಲಿಸಲು ದೇವರ ಬಳಿಗೆ ಬಂದರೆ, ದೇವರ ಸಮ್ಮುಖದಲ್ಲಿ ಕುಳಿತು ಪ್ರಶ್ನೆಗಳನ್ನು ಕೇಳದೆ ಮತ್ತು ವಿಜ್ಞಾಪನೆಗಳನ್ನು ಪಟ್ಟಿ ಮಾಡದೆ ಮೌನವಾಗಿ ದೇವರ ಸಮ್ಮುಖದಲ್ಲಿ ಕುಳಿತು ಕೃತಜ್ಞತೆ ಸಲ್ಲಿಸಿ ನೋಡಿ. ಇದು ನಿಮ್ಮ ಜೀವನವನ್ನು ಬದಲಾಯಿಸುತ್ತದೆ.
- Bro. ಕಾಮರಾಜ್
ಪ್ರಾರ್ಥನಾ ಅಂಶ:
ನಮ್ಮ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ನಿರ್ಮಾಣ ಕಾರ್ಯಕ್ಕಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482