By Village Missionary Movement
Sunday, 26-Nov-2023ಧೈನಂದಿನ ಧ್ಯಾನ(Kannada) – 27.11.2023
ಹೆದರಬೇಡ
"ನೀನಂತೂ ಹೆದರಬೇಡ; ನಾನೇ ನಿನ್ನೊಂದಿಗಿದ್ದೇನೆ;…" - ಯೆಶಾಯ 41:10
ಯುವಕನೊಬ್ಬನಿಗೆ ಯಾವುದೇ ಕಾಯಿಲೆ ಇಲ್ಲದಿದ್ದರೂ ಎದೆಯಲ್ಲಿ ನಿರಂತರ ನೋವಿನ ಭಾವನೆ ಇತ್ತು. ಬೇಗ ಸತ್ತುಹೋಗುತ್ತೇನೋ ಎಂಬ ಭಯ. ಹಾಗಾಗಿ ಆಗಾಗ ಆಸ್ಪತ್ರೆಗೆ ಹೋಗಿ ECG ಮಾಡಿಸಿಕೊಂಡು ತೃಪ್ತಿಪಡುತ್ತಿದ್ದನು. ಅಲ್ಲಿರುವ ವೈದ್ಯರು ಮತ್ತು ನರ್ಸ್‌ಗಳು ಇವನು ECG ತೆಗೆಸಿಕೊಳ್ಳುವುದಕ್ಕೇ ಬರುತ್ತಿದ್ದಾನೆ ಎಂದು ಆರಂಭದಲ್ಲಿ ಕಾಳಜಿ ವಹಿಸಿದ್ದ ಅಲ್ಲಿನ ವೈದ್ಯರು ಮತ್ತು ನರ್ಸ್‌ಗಳು ಒಂದು ವರ್ಷದ ನಂತರ ಅವನನ್ನು ನಿರ್ಲಕ್ಷಿಸಿದ್ದಾರೆ. ಏಕೆಂದರೆ ಅವನ ECG ಯಾವಾಗಲೂ ನಾರ್ಮಲ್ ಆಗೇ ಇರುತ್ತದೆ ಎಂದು. ಒಂದು ದಿನ ಅವನು ನಿಜವಾಗಿಯೂ ಎದೆನೋವಿನಿಂದ ಬಂದಾಗ ಅವರು ಅವನನ್ನು ಕಂಡುಕೊಳ್ಳಲಿಲ್ಲ. ಎಲ್ಲರೂ ಇತರ ರೋಗಿಗಳೊಂದಿಗೆ ಬಿಜಿಯಾಗಿದ್ದದರಿಂದ ಅವನು ಯಾವಾಗಲೂ ಬರುವವನೇ ತಾನೇ ಎಂದು ನಿರ್ಲಕ್ಷ್ಯವಾಗಿದ್ದುಬಿಟ್ಟರು. ಆದರೆ ಅವನಿಗೆ ನಿಜವಾಗಿ ಎದೆನೋವು ಕಾಣಿಸಿಕೊಂಡು ಆ ದಿನ ಸಾವನ್ನಪ್ಪಿದನು. ಇದು ನಿಜವಾಗಿ ನಡೆದ ಘಟನೆ.
ಯೋಬನು ಹೇಳುವಂತೆ, "ನನಗೆ ಭಯವು ಹುಟ್ಟಿದೊಡನೆಯೇ ಆಪತ್ತು ಸಂಭವಿಸುವದು. ನಾನು ಯಾವದಕ್ಕೆ ಹೆದರುತ್ತೇನೋ ಅದು ತಪ್ಪದೆ ಬರುವದು" (ಯೋಬ 3:25) ಎಂಬಂತೆ ಆ ಯುವಕನಿಗೆ ಸಂಭವಿಸಿತು. ಇನ್ನೂ ಕೆಲವರಿಗೆ ಈ ಖಾಯಿಲೆ ಬಂದುಬಿಡುತ್ತದೋ, ಕ್ಯಾನ್ಸರ್ ಬಂದುಬಿಡುತ್ತದೋ, ರಕ್ತ ಪರೀಕ್ಷೆಯ ಮಟ್ಟ ಜಾಸ್ತಿಯಾದರೆ ತಕ್ಷಣ ಹೃದ್ರೋಗ ಬಂದುಬಿಡುತ್ತದೋ ಎಂಬ ಭಯಂಕರ ಭಯ. ಇದು ಕ್ರೈಸ್ತರ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ ಎಂದರೆ ಅತಿಶಯೋಕ್ತಿಯೇನಲ್ಲಾ. ದೊಡ್ಡ ಭಯವೆಂದರೆ ಅನಾರೋಗ್ಯಕ್ಕೆ ಒಳಗಾಗುವುದು ಮಾತ್ರವಲ್ಲ, ಅದು ಬಂದರೆ, ನಾನು ಬೇಗನೆ ಸತ್ತುಹೋಗುತ್ತೇನೋ ಏನೋ ಎಂಬುದೇ ದೊಡ್ಡ ಭಯ. ಸತ್ಯವೇದದಲ್ಲಿ ಅನೇಕ ಸ್ಥಳಗಳಲ್ಲಿ ದೇವರು ನಮಗೆ ಭಯಪಡಬೇಡ ಎಂದು ಹೇಳಿರುವುದನ್ನು ನಾವು ಮರೆತುಬಿಡುತ್ತೇವೆ.
ಯೋಬನು ಎಲ್ಲವನ್ನು ಕಳೆದುಕೊಂಡರೂ ಕರ್ತನನ್ನು ಕಂಡಾಗ ಆತನ ಮೇಲಿನ ನಂಬಿಕೆಯನ್ನು ಬಿಡಲಿಲ್ಲ. ಆದ್ದರಿಂದ ದಯಮಾಡಿ ನನ್ನ ಸಂಗಡ ಇದ್ದು ನಿನ್ನೊಂದಿಗೆ ನನಗೆ ಹೊಣೆಯಾಗು (ಯೋಬ 17:3) ಎನ್ನುತ್ತಾರೆ. ಮತ್ತು ದೇವರೇ ನಿನಗೆ ಎಲ್ಲಾ ಸಾಧ್ಯವಾಗಿದೆ; ನಿನಗೆ ಯಾವ ಆಲೋಚನೆಯೂ ತಡೆಯಲ್ಪಡುವದಿಲ್ಲವೆಂದು ತಿಳಿದಿದ್ದೇನೆ (ಯೋಬ 42:2) ಎನ್ನುತ್ತಾರೆ. ನಮಗೆ ಒಂದು ಕಷ್ಟ ಅಥವಾ ಭಯ ಬಂದಾಗ, ದೇವರು ನಮ್ಮನ್ನು ನಡೆಸಿದ ಮಾರ್ಗಗಳನ್ನು ಮತ್ತು ವಿಧಾನಗಳನ್ನು ಮರೆತುಬಿಡುತ್ತೇವೆ. ಯೋಬನು ಎಲ್ಲಾ ಸನ್ನಿವೇಶಗಳನ್ನು ನಿರ್ಭಯವಾಗಿ ಎದುರಿಸಿದನು. ಅದೇ ರೀತಿ ನಾವೂ ಸಹ ಯಾವುದೇ ಕಾರ್ಯದಲ್ಲೂ ನಮ್ಮ ಜೊತೆಗಿದ್ದು ನಮ್ಮನ್ನು ನಡೆಸುವ ಕರ್ತನನ್ನು ಹಿಡಿದುಕೊಳ್ಳೋಣ.
ಪ್ರಿಯರೇ, ನಿಮಗೆ ಯಾವ ಕಾರ್ಯದಲ್ಲಿ ಭಯವಿದೆಯೋ ಅದನ್ನು ದೇವರಿಗೆ ತಿಳಿಸಿ. ಲೋಕದಲ್ಲಿರುವವನಿಗಿಂತ ನಮ್ಮೊಂದಿಗಿರುವ ಯೇಸು ದೊಡ್ಡವರು. ಯಾವುದಕ್ಕೂ ಹೆದರದೆ “ದೇವರು ನಮ್ಮೊಂದಿಗಿದ್ದಾರೆ” ಎಂಬ ನಂಬಿಕೆಯಿಂದ ಬದುಕುವುದನ್ನು ಅಭ್ಯಾಸ ಮಾಡಿಕೊಳ್ಳೋಣ. ಧೈರ್ಯದಿಂದ ಬದುಕೋಣ. ಆಮೆನ್.
- Bro. ಶಿವ
ಪ್ರಾರ್ಥನಾ ಅಂಶ:
ಸೇವಾಕ್ಷೇತ್ರದ ಸೇವೆಗೆ 25 ದ್ವಿಚಕ್ರ ವಾಹನಗಳು ತುರ್ತಾಗಿ ಅಗತ್ಯವಿದೆ. ಸಹಾಯ ಮಾಡುವ ವ್ಯಕ್ತಿಗಳು ಎದ್ದೇಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482