Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 26.11.2023
Share:

By Village Missionary Movement

Sunday, 26-Nov-2023

ಧೈನಂದಿನ ಧ್ಯಾನ(Kannada) – 26.11.2023

 

ಗುಲಾಬಿ ಹೂವು

 

"ನಾನು ಕರ್ತನಿಗೆ ಹಾಡುವೆನು; ಆತನು ನನಗೆ ಮೇಲು ಮಾಡಿದ್ದಾನೆ" - ಕೀರ್ತನೆ 13:6

 

ಹಾಯ್ ಪುಟಾಣಿಗಳೇ! ಸರಿಯಾಗಿ ಸ್ಕೂಲ್ ಗೆ ಹೋಗ್ತಾ ಇದ್ದೀರಾ? ನಿಮಗೆಲ್ಲಾ ವಿಧವಿಧವಾದ ಗಿಡಗಳನ್ನು ಬೆಳೆಸುವುದು, ಮನೆಯಲ್ಲಿ ತೋಟವನ್ನು ಮಾಡುವುದೆಲ್ಲಾ ಇಷ್ಟಾನಾ? ನಿಮ್ಮಂತೆಯೇ, ಜೆಲೀನಾಗೆ ಹೂವುಗಳು ಅಂದ್ರೆ ತುಂಬಾ ಇಷ್ಟ. ಅದರ ಬಗ್ಗೆ ಒಂದು ಕಥೆಯನ್ನು ಕೇಳೋಣ್ವಾ?

 

ಜೆಲೀನಾ ಎಂಬ ಪುಟ್ಟ ಹುಡುಗಿಗೆ ಗುಲಾಬಿಗಳು ಎಂದರೆ ತುಂಬಾ ಇಷ್ಟ. ಹಾಗಾಗಿ ಆಕೆಯ ತಾಯಿ ಅವಳಿಗೆ ಗುಲಾಬಿ ಗಿಡಗಳನ್ನು ತೆಗೆದು ಕೊಟ್ಟರು. ಬಣ್ಣಬಣ್ಣದ ಹೂವುಗಳು ಅರಳುತ್ತಿದ್ದದರಿಂದ ಪ್ರತಿದಿನ ತನ್ನ ತಲೆಯಲ್ಲಿ ಮುಡಿದುಕೊಂಡು ಹ್ಯಾಪಿಯಾಗಿ ಶಾಲೆಗೆ ಹೋಗುತ್ತಿದ್ದಳು. ಅವಳು ತನ್ನ ಸ್ನೇಹಿತೆ ಜೆಸ್ಸಿಗೂ ಹೂವು ತಂದುಕೊಡುತ್ತಿದ್ದಳು. ಜೆಲೀನಾ ಅವರ ತಾಯಿ ಪ್ರತಿದಿನ ಗಿಡಗಳಿಗೆ ನೀರು ಹಾಕುತ್ತಿದ್ದರು. ಕಳೆಗಳನ್ನು ಸ್ವಚ್ಛಗೊಳಿಸುತ್ತಿದ್ದರು.

 

ಒಂದು ದಿನ, "ಜೆಸ್ಸಿ, ಜೆಲೀನಾಳನ್ನು ನೀನು ಪ್ರತಿದಿನ ಸುಂದರವಾದ ಗುಲಾಬಿಯನ್ನು ಮುಡಿದುಕೊಂಡು ಬರುತ್ತಿದ್ದೀಯಲ್ಲಾ! ನಿನಗೆ ಹೂವುಗಳನ್ನು ನೀಡುವ ಗುಲಾಬಿ ಗಿಡಕ್ಕೆ ನೀನು ಏನು ಕೊಡುತ್ತೀಯ" ಎಂದು ಕೇಳಿದಳು. ಜೆಲೀನಾಗೆ ಏನು ಹೇಳಬೇಕೆಂದು ಗೊತ್ತಾಗಲಿಲ್ಲ, ಗಿಡಕ್ಕೆ ನೀರು ಸಹ ಅಮ್ಮ ತಾನೇ ಹಾಕುತ್ತಾರೆ. ನಾನು ಏನೂ ಮಾಡಿಲ್ಲವೇ ಎಂದು ನೆನೆಸಿದಳು. ಶಾಲೆ ಮುಗಿಸಿ ಮನೆಗೆ ಹೋಗಿ ಗುಲಾಬಿ ಗಿಡಕ್ಕೆ ನೀರು ಹಾಕಿದಳು. ಇದನ್ನು ನೋಡಿ ತಾಯಿಗೆ ತುಂಬಾ ಸಂತೋಷವಾಯಿತು. ದಿನವೂ ನನಗೆ ಹೂ ಕೊಡುವ ಗಿಡಕ್ಕೆ ನಾನೇನಾದರೂ ಮಾಡಬೇಕಲ್ವಾ ಅಮ್ಮಾ ಎಂದಳು. ಹೌದು, ನನ್ನ ಮುದ್ದು ಮಗು! ನೀನು ಹೇಳಿದ್ದು ನಿಜವೇ. ಇದೇ ರೀತಿ ಯೇಸಪ್ಪ ನಮಗೆ ತುಂಬಾ ಮೇಲು ಮಾಡಿದ್ದಾರೆ, ನಾವೂ ಸಹ ಅವರಿಗೆ ಏನಾದರೂ ಮಾಡಬೇಕಲ್ವಾ? ನಮ್ಮ ಬೀದಿಯಲ್ಲಿರುವ ಮಕ್ಕಳಿಗೆ Sunday school ನಡೆಸೋಣ ಎಂದು ಅಮ್ಮ ಹೇಳಿದಕೂಡಲೇ ಜೆಲೀನಾ" ಜಾಲಿ, ಜಾಲಿ" ಎಂದು ಕುಣಿದಾಡಿದಳು.

 

ಆಮೆನ್ ವಿಲೇಜ್ ಟಿವಿಯಲ್ಲಿ ಕೂಡ Children's program ಸೂಪರ್ ಆಗಿದೆ. ಅದನ್ನು ನೋಡಿ ಕಲಿಸಿಕೊಡೋಣ ಎಂದು ಅಮ್ಮ ಹೇಳುತ್ತಲೇ ಟಿವಿ ಹಾಕಿದರು. ಯೇಸುವಿನ ಸಂತತಿ ಕಾರ್ಯಕ್ರಮ ಬರುತ್ತಿರುವುದನ್ನು ನೋಡಿ ಸಮಯ ಕಳೆದದ್ದೇ ಗೊತ್ತಾಗದೆ 1 ಗಂಟೆ ಕಾರ್ಯಕ್ರಮವನ್ನು ವೀಕ್ಷಿಸಿ ಕಲಿತುಕೊಂಡರು.

 

ಓಕೆ, ನಮಗಾಗಿ ತನ್ನ ಪ್ರಾಣವನ್ನೇ ಕೊಟ್ಟ ಯೇಸುವಿಗಾಗಿ ನಾವು ಏನನ್ನಾದರೂ ಮಾಡಬೇಕು ಎಂದು ಜೆಲೀನಾ ತೀರ್ಮಾನಿಸಿಬಿಟ್ಟಳು. ಏನು ಮುದ್ದು ಪುಟಾಣಿಗಳೇ, ನೀವು ಸಹ ಯೇಸುವಿಗಾಗಿ ಏನಾದರೂ ಮಾಡಲು ಸಿದ್ಧರಿದ್ದೀರಾ? ಓಹ್ ... Super!

- ಶ್ರೀಮತಿ. ಬ್ಯೂಲಾ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş