Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 25.11.2023
Share:

By Village Missionary Movement

Saturday, 25-Nov-2023

ಧೈನಂದಿನ ಧ್ಯಾನ(Kannada) – 25.11.2023

 

ಯೋಸೇಫನು 

 

"…ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಹೀಗಾದರೆ ಅವರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು" - ಮತ್ತಾಯ 5:16

 

ಪರಿಶುದ್ಧ ಗ್ರಂಥದಲ್ಲಿ ಮೂವರು ಯೋಸೇಫರನ್ನು ಕುರಿತು ಕಾಣಬಹುದು. ಮೊದಲನೆಯದು ಹಳೆಯ ಒಡಂಬಡಿಕೆಯಲ್ಲಿ ಕಾಣಲ್ಪಡುವ ಯೋಸೇಫನು. ನಂತರ ಯೇಸುವಿನ ತಾಯಿಯಾದ ಮರಿಯಳ ಗಂಡನಾದ ಯೋಸೇಫನು. (ಮತ್ತಾಯ 1: 9-20) ಮೂರನೆಯದಾಗಿ, ಅರಿಮಥಾಯದ ಯೋಸೇಫನು (ಮತ್ತಾಯ 27:57) ಯೋಸೇಫನೆಂಬ ಇಬ್ರಿಯ ಪದದ ಅರ್ಥ "ಅವರು ಸೇರಿಸಿಕೊಳ್ಳುತ್ತಾರೆ" ಎಂಬುದಾಗಿದೆ.

 

ಮೊದಲನೆಯದಾಗಿ, ಆದಿಕಾಂಡದಲ್ಲಿ ಯೋಸೇಫನ ಬಗ್ಗೆ ಓದಿದಾಗ, ಅವನು ತನ್ನ ಯೌವನದಲ್ಲಿ ಹಾದುಬಂದ ಮಾರ್ಗಗಳನ್ನು ನಾವು ತಿಳಿದಿದ್ದೇವೆ. ಆದಾಗ್ಯೂ, ಅವನು ತನಗೆ ದ್ರೋಹ ಮಾಡಿದ ತನ್ನ ಸಹೋದರರನ್ನು ಬರಗಾಲದ ಸಮಯದಲ್ಲಿ ಸೇರಿಸಿಕೊಂಡು ಐಗುಪ್ತ ದೇಶದಲ್ಲಿ ಅವರು ವಾಸಿಸಲು ಗೋಷೆನ್‍ಸೀಮೆಯನ್ನು ತೆಗೆದುಕೊಟ್ಟನು. ಅವರು ತನಗೆ ಮಾಡಿದ ದೌರ್ಜನ್ಯವನ್ನು ಪರಿಗಣಿಸಿ ಅವರ ವಿರುದ್ಧ ದ್ವೇಷವನ್ನು ಸಾಧಿಸಲಿಲ್ಲ. ಬದಲಾಗಿ, ನಿಮ್ಮನ್ನು ಆದರಿಸಲು ಮತ್ತು ನಿಮ್ಮನ್ನು ಬದುಕಿಸಲು ದೇವರು ನನ್ನನ್ನು ನಿಮ್ಮ ಮುಂದೆ ಕಳುಹಿಸಿದರು ಎಂದು ಹೇಳಿ ಎಲ್ಲರನ್ನೂ ದೊಡ್ಡ ಮನಸ್ಸಿನಿಂದ ಕ್ಷಮಿಸಿ ತನ್ನೊಂದಿಗೆ ಅವರನ್ನು ಸೇರಿಸಿಕೊಂಡನು.

 

ಎರಡನೆಯದಾಗಿ, ಯೇಸುಕ್ರಿಸ್ತನ ತಾಯಿಯಾದ ಮರಿಯಳನ್ನು ಯೋಸೇಫನಿಗೆ ನಿಶ್ಚಯಿಸಿದ್ದಾಗ, ಅವಳು ಗರ್ಭಿಣಿಯಾಗಿದ್ದಾಳೆಂದು ತಿಳಿದು, ಯೋಸೇಫನು ನೀತಿವಂತನಾಗಿದ್ದದರಿಂದ, ಅವಳನ್ನು ರಹಸ್ಯವಾಗಿ ದೂರವಿಡಲು ಯೋಚಿಸಿದನು. ಆದರೆ ದೇವದೂತನು ಯೋಸೇಫನ ಬಳಿಗೆ ಬಂದು ನಿನ್ನ ಹೆಂಡತಿಯಾದ ಮರಿಯಳನ್ನು ಸೇರಿಸಿಕೋ ಎಂದು ಹೇಳಿದಾಗ, ಅವನು ಅದಕ್ಕೆ ತಕ್ಷಣವೇ ವಿಧೇಯನಾಗಿ ಮರಿಯಳನ್ನು ತನ್ನೊಂದಿಗೆ ಸೇರಿಸಿಕೊಂಡನು ಎಂದು ನೋಡುತ್ತೇವೆ.

 

ಮೂರನೆಯದಾಗಿ, ಅರಿಮಥಾಯಾದ ಯೋಸೇಫನನ್ನು ನೋಡೋಣ. ಯೇಸುಕ್ರಿಸ್ತನು ಶಿಲುಬೆಯ ಮೇಲೆ ಮರಣಹೊಂದಿದ ನಂತರ, ಅವನು ಪಿಲಾತನ ಬಳಿಗೆ ಹೋಗಿ ಧೈರ್ಯದಿಂದ ಯೇಸುವಿನ ದೇಹವನ್ನು ಕೇಳಿ ಪಡೆದು ಬಂಡೆಯಲ್ಲಿ ತೋಡಿದ್ದ ತನ್ನ ಹೊಸ ಸಮಾಧಿಯಲ್ಲಿ ಇಟ್ಟನು ಎಂದು ನೋಡುತ್ತೇವೆ. ಅಂದರೆ ಯೇಸುಕ್ರಿಸ್ತನನ್ನು ತನ್ನ ಕುಟುಂಬದಲ್ಲಿ ಒಬ್ಬರಾಗಿ ಸೇರಿಸಿಕೊಂಡನು.

 

ಯೋಸೇಫನೆಂಬ ಹೆಸರಿನ ಅರ್ಥಕ್ಕೆ ತಕ್ಕಂತೆ ಈ ಮೂವರು ಬದುಕಿದರು ಎಂಬುದನ್ನು ನಾವು ನೋಡುತ್ತೇವೆ. ನಮ್ಮ ಜೀವನ ಇಂದು ನಮ್ಮ ಹೆಸರಿಗೆ ತಕ್ಕಂತೆ ಇದೆಯೇ? ಕ್ರೈಸ್ತರು ಎಂದು ಹೇಳಿಕೊಳ್ಳುವ ನಾವು ಕ್ರಿಸ್ತನನ್ನು ಪ್ರದರ್ಶಿಸುವವರಾಗಿ ಮತ್ತು ಕ್ರಿಸ್ತನನ್ನು ಪ್ರಕಟಿಸುವವರಾಗಿರಬೇಕು. ನಮ್ಮ ಜೀವನ ಅನೇಕರಿಗೆ ಮಾದರಿಯಾಗಿ ಇರಬೇಕು. ನಾವು ಈ ಜಗತ್ತಿನಲ್ಲಿ ಜೀವಂತ ಸಾಕ್ಷಿಗಳಾಗಿ ಬದುಕಿ, ನಿತ್ಯಜೀವವನ್ನು ಸ್ವತಂತ್ರಿಸಿಕೊಳ್ಳಲು ಪ್ರತಿದಿನವೂ ಶ್ರಮಿಸೋಣ.

- Mrs. ಜೆಬಕಣಿ ಶೇಖರ್

 

ಪ್ರಾರ್ಥನಾ ಅಂಶ:

ಕ್ರಿಸ್ಮಸ್ ಶುಭ ಸಂದೇಶವನ್ನು ಹಸ್ತಪ್ರತಿಗಳ ಮೂಲಕ ಕೊಂಡೊಯ್ಯಲು 20 ಲಕ್ಷ ಹಸ್ತಪ್ರತಿಗಳು ಬೇಕಾಗಿದೆ. ಅಗತ್ಯತೆಗಳು ಪೂರೈಸಲ್ಪಡಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin