Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 24.11.2023
Share:

By Village Missionary Movement

Thursday, 23-Nov-2023

ಧೈನಂದಿನ ಧ್ಯಾನ(Kannada) – 24.11.2023

 

ಸಮಯ ವಿಳಂಬ

 

"…ತಡಮಾಡುತ್ತಾನೆಂಬದಾಗಿ ಕೆಲವರು ಎಣಿಸುವ ಪ್ರಕಾರ…" - 2 ಪೇತ್ರ 3:9

 

D.L. ಮೂಡಿ ಒಂದು ದಿನ ಇಡೀ ದಿನದ ಕೆಲಸ ಮುಗಿಸಿ ಸುಸ್ತಾಗಿ ನಿದ್ದೆ ಮಾಡಲು ಹೊರಟು ಹೋದರು. ದೇವರು ಅವರನ್ನು ಮಧ್ಯರಾತ್ರಿಯಲ್ಲಿ ಎಬ್ಬಿಸಿ "ಹೋಗಿ ನಿನ್ನ ಅಡುಗೆಯವನಿಗೆ ಸುವಾರ್ತೆಯನ್ನು ಹೇಳು" ಎಂದು ಹೇಳಿದರು. ಆದರೆ ಡಿ.ಎಲ್. ಮೂಡಿ ಸುಸ್ತಾಗಿ ಮಲಗಿದ್ದದರಿಂದ ಆಯಾಸದಿಂದ "ನಾಳೆ ಬೆಳಗ್ಗೆ ಹೇಳುತ್ತೇನೆ" ಎಂದು ಹೇಳಿ ಮಲಗಿಬಿಟ್ಟರು. ಅಯ್ಯೋ, ಆ ದಿನ ಬೆಳಿಗ್ಗೆ ಎದ್ದು ನೋಡಿದಾಗ ಅಡುಗೆಯವನು ಆತ್ಮಹತ್ಯೆ ಮಾಡಿಕೊಂಡು ಸತ್ತು ಬಿದ್ದಿದ್ದನು. ಇದನ್ನು ನೋಡಿದ ಡಿ.ಎಲ್. ಮೂಡಿ ಇದಕ್ಕೆ ನನ್ನ ಸಮಯ ವಿಳಂಬವೇ ಕಾರಣ ಎಂದು ಭಾವಿಸಿ ಕಣ್ಣೀರಿಟ್ಟರು. 

 

ಸತ್ಯವೇದದಲ್ಲಿ ಸಮಯ ವಿಳಂಬದಿಂದಾಗಿ ಅನೇಕ ಆಶೀರ್ವಾದಗಳನ್ನು ಕಳೆದುಕೊಂಡವರ ಬಗ್ಗೆ ಓದುತ್ತೇವೆ. ಏಸಾವನು ತನ್ನ ತಂದೆಗೆ ಆಹಾರವನ್ನು ತರಲು ತಡವಾದ ಕಾರಣ ಯಾಕೋಬನು ಮೋಸ ಮಾಡಿ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ. ಲೋಟನು ಸೊದೋಮನ್ನು ಬಿಟ್ಟು ಹೊರಬರಲು ತಡಮಾಡಿದರು. ದೇವದೂತರು ಅವರನ್ನು ಕೈಹಿಡಿದು ಪಟ್ಟಣದಿಂದ ಹೊರಗೆ ತಂದು ಬಿಟ್ಟರು ಎಂದು ಓದುತ್ತೇವೆ. ತಡವಾದ ತೀವ್ರತೆಯ ಪರಿಣಾಮವು ಪ್ರಯೋಜನಕಾರಿಯಲ್ಲ ಎಂದು ನಮಗೆ ತಿಳಿದಿದೆ. ಅದೇ ಸಮಯದಲ್ಲಿ, ಎಸ್ತೇರಳು ತೀವ್ರವಾಗಿ ಕಾರ್ಯನಿರ್ವಹಿಸಿದ್ದರಿಂದ ಯೆಹೂದ್ಯರು ಉಳಿಸಲ್ಪಟ್ಟರು ಎಂದು ನಮಗೆ ತಿಳಿದಿದೆ.

 

ಪ್ರಿಯರೇ, ವಿಳಂಬವು ನಾವು ಅನೇಕ ಆಶೀರ್ವಾದಗಳನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ತಡವಾಗಿ ಮಾಡಿದ ಯಾವುದೇ ಕೆಲಸವು ಮಾಡದಿದ್ದಕ್ಕೆ ಸಮವಲ್ಲವೇ. ತಡವಾದ ವಿಧೇಯತೆ ಅವಿಧೇಯತೆಗೆ ಸಮವಲ್ಲವೇ! ಇಂದಿಗೂ ನಮ್ಮಲ್ಲಿ ಅನೇಕರು ತಡವಾಗಿ ಆಲಯಕ್ಕೆ ಹೋಗಿ ಆರಾಧನೆಯಲ್ಲಿ ಭಾಗವಹಿಸಿ ಆರಾಧನೆಯನ್ನು ನಿರ್ಲಕ್ಷಿಸುವುದರಿಂದ ಅನೇಕ ಪ್ರಯೋಜನಗಳನ್ನು ಹೊಂದಿಕೊಳ್ಳಲಾಗದೆ ಇದ್ದೇವೆ. ದೇವರ ಎರಡನೆಯ ಬರುವಿಕೆಯು ತಡವಾಗುತ್ತಿದೆ ಎಂದು ಕೆಲವರು ಕೇಳುತ್ತಾರೆ ... ಏಕೆಂದರೆ ಒಬ್ಬರೂ ಕೆಟ್ಟುಹೋಗದೆ ಮಾನಸಾಂತರ ಹೊಂದಬೇಕೆಂದು ಬಯಸಿ ನಮ್ಮ ಮೇಲೆ ದೀರ್ಘಶಾಂತಿಯುಳ್ಳವರಾಗಿದ್ದಾರೆ. ಆದುದರಿಂದ ನಾವು ತಡಮಾಡದೆ ಪರಲೋಕರಾಜ್ಯಕ್ಕಾಗಿ ತ್ವರಿತವಾಗಿ ಕಾರ್ಯನಿರ್ವಹಿಸೋಣವಾ?

- Mrs. ಜಯಂತಿ ಭಾಕ್ಯನಾಥನ್

 

ಪ್ರಾರ್ಥನಾ ಅಂಶ:

ಸುವಾರ್ತಾಬೋಧಕ ಸೇವೆಗಳ ಮೂಲಕ ಪ್ರತಿ ಆತ್ಮಕ್ಕೂ ಕ್ರಿಸ್ತನ ಜನನದ ಸುವಾರ್ತೆಯನ್ನು ಕೊಂಡೊಯ್ಯಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş