Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 23.11.2023
Share:

By Village Missionary Movement

Thursday, 23-Nov-2023

ಧೈನಂದಿನ ಧ್ಯಾನ(Kannada) – 23.11.2023

 

ಮಕ್ಕಳು

 

"ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು" - ಜ್ಞಾನೋಕ್ತಿ 22:6

 

ಒಂದು ವಿಧವೆ ತಾಯಿ ತನ್ನ ಮಗನನ್ನು ನೋಡಲು ಜೈಲಿಗೆ ಹೋಗುತ್ತಾಳೆ. ಅಲ್ಲಿ ಮಗ ತನ್ನ ತಾಯಿಯನ್ನು ನೋಡಲು ಇಷ್ಟವಿಲ್ಲ ಎಂದು ಹೇಳಿ ಬರಲು ನಿರಾಕರಿಸುತ್ತಾನೆ. ಮರುದಿನ ಮಗನನ್ನು ಕಳ್ಳತನದ ಅಪರಾಧಕ್ಕಾಗಿ ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು. ಅಲ್ಲಿಗೆ ಅವನ ತಾಯಿಯೂ ಬರುತ್ತಾಳೆ. ಆದರೆ ಮಗನಿಗೆ ತಾಯಿಯನ್ನು ನೋಡಲು ಇಷ್ಟವಿರಲಿಲ್ಲ. ತಾಯಿ ಬಲವಂತಮಾಡಿ ಕೇಳಿಕೊಂಡದ್ದರಿಂದ ಮಗ ನೋಡಲು ಬಂದನು. "ನನ್ನ ಈ ಸ್ಥಿತಿಗೆ ನೀವೇ ಕಾರಣ" ಎಂದು ಹೇಳಿದನು. ತಾಯಿ ಅಳುತ್ತಾ ಅವನನ್ನು ನೋಡಿದಳು. "ನಾನು ಚಿಕ್ಕವನಿದ್ದಾಗ ಸಣ್ಣಪುಟ್ಟ ವಸ್ತುಗಳನ್ನು ಕದಿಯುತ್ತಿದ್ದಾಗ ನೀವು ನನ್ನನ್ನು ಗದರಿಸಿ ಸರಿಮಾಡಲಿಲ್ಲ, ಅದಕ್ಕೇ ನಾನು ಕಳ್ಳತನವನ್ನು ಮುಂದುವರಿಸಿದೆ" ಎಂದು ಮಗ ಹೇಳಿದನು. ಆಗ ತಾಯಿ "ನೀನು ಹೇಳಿದ್ದು ಸರಿ. ನಿನ್ನ ಮೇಲಿನ ಪ್ರೀತಿಯಿಂದ ನಾನು ನಿನ್ನನ್ನು ಗದರಿಸಿಲ್ಲ. ಆದರೆ ಅದು ಎಷ್ಟು ದೊಡ್ಡ ತಪ್ಪು ಎಂದು ಈಗ ನನಗೆ ಅರ್ಥವಾಯಿತು" ಎಂದರು.

 

ಹೌದು, ಸತ್ಯವೇದದಲ್ಲಿಯೂ ಸಹ ಏಲಿ ಎಂಬ ಯಾಜಕನನ್ನು ನೋಡುತ್ತೇವೆ. ಅವರು ಆಲಯದಲ್ಲಿ ಸೇವೆ ಮಾಡುತ್ತಿದ್ದರು. ಆದರೆ ಅವರ ಮಕ್ಕಳಾದ ಹೊಫ್ನಿ, ಫೀನೆಹಾಸ್ ದೇವರಿಗೆ ಇಷ್ಟವಿಲ್ಲದೆ ಜೀವಿಸಿದರು ಎಂದು ಸತ್ಯವೇದದಲ್ಲಿ ಓದುತ್ತೇವೆ. ಪರಿಣಾಮವಾಗಿ, ಯೌವನಪ್ರಾಯದಲ್ಲಿ ಒಂದೇ ದಿನದಲ್ಲಿ ಮರಣಹೊಂದಿದರು. ಅಂತೆಯೇ, 40 ವರ್ಷಗಳ ಕಾಲ ಇಸ್ರಾಯೇಲ್‌ಗೆ ನ್ಯಾಯ ವಿಚಾರಿಸುತ್ತಿದ್ದ ಪ್ರವಾದಿಯಾದ ಸಮುವೇಲನ ಮಕ್ಕಳು ಯೋವೇಲ್, ಅಬೀಯ ಎಂಬವರು ದ್ರವ್ಯಾಶೆಯಿಂದ ಲಂಚತೆಗೆದುಕೊಂಡು ನ್ಯಾಯವಿರುದ್ಧವಾದ ತೀರ್ಪುಮಾಡುತ್ತಿದ್ದರು ಎಂದು 1ಸಮುವೇಲ. 8 ನೇ ಅಧ್ಯಾಯದಲ್ಲಿ ನೋಡುತ್ತೇವೆ. ಹೀಗಾಗಿ ನ್ಯಾಯಸ್ಥಾಪಕರಾಗಿ ಇರಬೇಕಾಗಿದ್ದವರು ತಿರಸ್ಕರಿಸಲ್ಪಟ್ಟರು.

 

ಹೌದು, ನಾವು ಕೂಡ ನಮ್ಮ ಮಕ್ಕಳನ್ನು ಹೇಗೆ ಬೆಳೆಸುತ್ತಿದ್ದೇವೆ? ಕರ್ತನ ಕೈಗಳಲ್ಲಿ ಒಪ್ಪಿಸಿಕೊಟ್ಟು ಬೆಳೆಸುತ್ತಿದ್ದೇವಾ? ಅಥವಾ ಪ್ರಾಪಂಚಿಕ ವಿಷಯಗಳಿಗೆ ಪ್ರಾಮುಖ್ಯತೆ ಕೊಟ್ಟು ಬೆಳೆಸುತ್ತಿದ್ದೇವಾ? ಯೋಚಿಸೋಣ. ಯೋಬನು ತನ್ನ ಮಕ್ಕಳ ಮುಂದೆ ಉತ್ತಮನಾಗಿದ್ದನು. ಮತ್ತು ತನ್ನ ಮಕ್ಕಳು ಒಂದು ವೇಳೆ ಹೃದಯದಲ್ಲಿ ಪಾಪ ಮಾಡಿರಬಹುದು ಎಂದು ಭಾವಿಸಿ ಅವರಿಗಾಗಿಯೂ ದೇವರ ಬಳಿ ಪ್ರಾರ್ಥಿಸುತ್ತಿದ್ದರು. ನಾವೂ ಕೂಡ ನಮ್ಮ ಮಕ್ಕಳನ್ನು ಚಿಕ್ಕಂದಿನಿಂದಲೇ ಸತ್ಯದಲ್ಲಿ ಪ್ರಾಮಾಣಿಕವಾಗಿ ಬೆಳೆಸೋಣ! ಈ ಭ್ರಮೆಯ ಜಗತ್ತಿನಲ್ಲಿ ವೇಷ ಧರಿಸದೆ ಕರ್ತನಿಗಾಗಿ ಉತ್ಸಾಹದಿಂದ ಓಡುವ ಒಂದು ಪೀಳಿಗೆಯನ್ನು ರೂಪಿಸಲು ಪ್ರಯತ್ನಿಸೋಣ! ಆಮೆನ್!

- Mrs. ದಿವ್ಯಾ ಅಲೆಕ್ಸ್

 

ಪ್ರಾರ್ಥನಾ ಅಂಶ:

ಎಲ್ಲಾ ಸೇವಾಕ್ಷೇತ್ರಗಳಲ್ಲಿ ಅಡೆತಡೆಯಿಲ್ಲದೆ 24-ಗಂಟೆಗಳ ಚೈನ್ ಪ್ರೆಯರ್ ನಡೆಯುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş