Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 22.11.2023
Share:

By Village Missionary Movement

Tuesday, 21-Nov-2023

ಧೈನಂದಿನ ಧ್ಯಾನ(Kannada) – 22.11.2023

 

ಹತ್ತಿರ…

 

"…ಎಲ್ಲಾ ಭಾರವನ್ನೂ ಸುಲಭವಾಗಿ ಮುತ್ತಿ ಕೊಳ್ಳುವ ಪಾಪವನ್ನೂ ನಾವು ತೆಗೆದಿಟ್ಟು…" - ಇಬ್ರಿಯ 12:1

 

ದೇವರು ನಮ್ಮನ್ನು ನೋಡುವಾಗ ಹೃದಯವನ್ನೇ ನೋಡುತ್ತಾರೆ. ಪಾಪವು ನಮ್ಮ ಹೃದಯವನ್ನು ಕೆಡಿಸುತ್ತದೆ. ಹೃದಯವು ಕೊಳಕು, ಕಳಂಕ ಮತ್ತು ಅವಲಕ್ಷಣವಾಗಿದ್ದರೆ ಹೇಗಿರುತ್ತದೆ? ಹಾಗೆಯೇ ಪಾಪವು ನಮ್ಮ ಹೃದಯವನ್ನು ಬದಲಾಯಿಸುತ್ತದೆ. ಈ ಪಾಪವು ನಮ್ಮ ಕೈಕಾಲುಗಳ ಕ್ರಿಯೆಯಿಂದ ಮಾತ್ರ ನಮ್ಮೊಳಗೆ ಬರುವುದಿಲ್ಲ. ಇವು ಕಣ್ಣುಗಳ ಮೂಲಕ, ಕಿವಿಗಳ ಮೂಲಕ ಅಷ್ಟೇ ಏಕೆ, ಆಲೋಚನೆಯ ಮೂಲಕವೂ ಬರುತ್ತದೆ.

 

ಆಲೋಚನೆ ಎಂದು ಹೇಳುವಾಗ ನಾವು ನೆನೆಸಬೇಕಾದದ್ದು "ಪಾಪ ಎಷ್ಟು ಹತ್ತಿರದಲ್ಲಿದೆ" ಎಂದು! ಲಘುವಾಗಿ ಯೋಚಿಸಲು ಪ್ರಾರಂಭಿಸಿದರೆ ಸಾಕು, ಅದು ನಮ್ಮ ನಿಯಂತ್ರಣವನ್ನು ಮೀರಿ ಹೋಗಿಬಿಡುತ್ತದೆ. ನಾವು ನೈಜ ಪ್ರಪಂಚವನ್ನು ಬಿಟ್ಟು ಕಲ್ಪನಾ ಜಗತ್ತಿನಲ್ಲಿ ಮುಳುಗಿಹೋಗುತ್ತೇವೆ. ತಪ್ಪು ಆಲೋಚನೆಯನ್ನು ಪ್ರೇರೇಪಿಸಲು ನಮ್ಮ ಕೈಯಲ್ಲಿ ಫೋನ್, ಯೂಟ್ಯೂಬ್, ಫೇಸ್-ಬುಕ್ ಮುಂತಾದ ಅನೇಕ ವಿಷಯಗಳಿವೆ. ನೆಬೂಕದ್ನೆಚ್ಚರನು ನಾನು ನನ್ನ ಪರಾಕ್ರಮದ ಬಲದಿಂದ ಕಟ್ಟಿಸಿದ ಮಹಾಬಾಬೆಲು ಇದ ಲ್ಲವೇ ಎಂದು ಯೋಚಿಸಿದನು, ಮೃಗವಾಗಿ ಮಾರ್ಪಟ್ಟನು. ದಾವೀದನು ಕಣ್ಣುಗಳಿಂದ ನೋಡಿ ಪಾಪದಲ್ಲಿ ಬಿದ್ದರು. ಸಂಸೋನನು ಎಲ್ಲವನ್ನೂ ತಿಳಿದು ಸತ್ತ ಸಿಂಹದ ದೇಹದಲ್ಲಿದ್ದ ಜೇನುಗೂಡನ್ನು ತೆಗೆದುಕೊಂಡು ಜೇನುತುಪ್ಪವನ್ನು ತಿಂದನು, ಪಾಪದಲ್ಲಿ ಬಿದ್ದನು. ನಂತರ ಇಚ್ಚೆಯಲ್ಲಿ ಬಿದ್ದನು. ಈ ರೀತಿಯಾಗಿ, ಪಾಪವು ಸಂತೋಷವಾಗಿದ್ದು ನಮ್ಮಿಂದ ಓಡಲು ಸಾಧ್ಯವಾಗದಂತೆ ಮಾಡಿ ನಾವು ಬಿದ್ದುಹೋಗುವಂತೆ ಮಾಡುತ್ತದೆ. ದೂರದಲ್ಲಿ ಕಾಣುವ ದೊಡ್ಡ ಬಂಡೆಯಲ್ಲ, ನಮ್ಮ ಕಾಲಿನ ಕೆಳಗೆ ಬಿದ್ದಿರುವ ಚಿಕ್ಕ ಕಲ್ಲೇ ನಾವು ಎಡವಿ ಬೀಳುವಂತೆ ಮಾಡುತ್ತದೆ! ಅದರಂತೆಯೇ ನಮ್ಮ ಹತ್ತಿರ ಇರುವ ಸುಳ್ಳು, ಫೋನ್ ನಂತಹ ಸಣ್ಣ ಸಣ್ಣ ಪಾಪಗಳಿಗೆ ಸಿಲುಕಿ ಬಿದ್ದುಹೋಗುವ ಅವಕಾಶವಿದೆ.

 

ಇದನ್ನು ಓದುತ್ತಿರುವ ಪ್ರಿಯರೇ! ನೀವು ಸಣ್ಣ ಸಣ್ಣ ಪಾಪಗಳ ಕುರಿತು ಅಸಡ್ಡೆಯಾಗಿದ್ದೀರಾ? ಅಥವಾ ನಾನು ಇನ್ನೂ ಸಮೀಪಿಸುತ್ತಿರುವ ಪಾಪಗಳಲ್ಲಿ ಬಿದ್ದಿಲ್ಲ ಸ್ವಲ್ಪ ಲಘುವಾಗಿ ಸವರುತ್ತಿದೆ ಅಷ್ಟೇ ಎಂದು ನೆನೆಸುತ್ತೀರಾ? ತಕ್ಷಣವೇ ತೊಲಗಿಸಿರಿ ಇಲ್ಲದಿದ್ದರೆ ಅಪಘಾತವನ್ನು ಉಂಟುಮಾಡುತ್ತದೆ. ಕೈಗೆ ಹತ್ತಿರವಾದ ಪಾಪವು ಸವರುವುದರೊಂದಿಗೆ ನಮ್ಮನ್ನು ಬಿಡುವುದಿಲ್ಲ. ಅದು ನಮ್ಮ ಮೇಲೆ ಏರಿ ನಮ್ಮನ್ನು ಮುಳುಗಿಸುತ್ತದೆ. ಜಾಗರೂಕರಾಗಿರಿ. ". . . ಎಲ್ಲಾ ಭಾರವನ್ನೂ ಸುಲಭವಾಗಿ ಮುತ್ತಿ ಕೊಳ್ಳುವ ಪಾಪವನ್ನೂ ನಾವು ತೆಗೆದಿಟ್ಟು ನಮ್ಮ ನಂಬಿಕೆಯನ್ನೂ ಹುಟ್ಟಿಸುವಾತನೂ ಅದನ್ನು ಪೂರೈಸುವಾತನೂ ಆಗಿ ರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮ್ಮ ಮುಂದೆ ಇಟ್ಟಿರುವ ಓಟವನ್ನು ತಾಳ್ಮೆಯಿಂದ ಓಡೋಣ." (ಇಬ್ರಿಯ 12:1)

- Mrs. ಅನ್ಬುಜ್ಯೋತಿ ಸ್ಟಾಲಿನ್

 

ಪ್ರಾರ್ಥನಾ ಅಂಶ:

ಸೇವಾಕ್ಷೇತ್ರಗಳಲ್ಲಿ ಪೂರ್ಣ ಬೈಬಲ್‌ಗಳನ್ನು ನೀಡಲು ತೆಗೆದುಕೊಡುವ ಜನರು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al