Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 21.11.2023
Share:

By Village Missionary Movement

Tuesday, 21-Nov-2023

ಧೈನಂದಿನ ಧ್ಯಾನ(Kannada) – 21.11.2023

 

ನಮ್ಮನ್ನು ಅರಿತಿರುವ ದೇವರು 

 

"ಮನುಷ್ಯಕುಮಾರನು ಕೆಟ್ಟುಹೋಗಿರುವದನ್ನು ಹುಡುಕಿ ರಕ್ಷಿಸುವದಕ್ಕೆ ಬಂದನು ಎಂದು ಹೇಳಿದನು" - ಲೂಕ 19:10

 

ಇಂದು ನಾವು ನೋಡಲು ಹೊರಟಿರುವ ವ್ಯಕ್ತಿಯ ಹೆಸರು ಜಕ್ಕಾಯ. ಅವನು ಸುಂಕದ ಗುತ್ತಿಗೆದಾರನು ಮತ್ತು ಐಶ್ವರ್ಯವಂತನು. ಅವನು ಅನ್ಯಾಯವಾಗಿ ಆಸ್ತಿಯನ್ನು ಸಂಗ್ರಹಿಸಿದ್ದರಿಂದ ಜನರು ಅವನನ್ನು ದ್ವೇಷಿಸುತ್ತಿದ್ದರು. ಪಾಪದ ಮನುಷ್ಯನಂತೆ ಕಾಣುತ್ತಿದ್ದನು. ಇಂತಹ ಮನುಷ್ಯನಾದ ಜಕ್ಕಾಯನು ಯೇಸು ಎಂಥವನೆಂದು ನೋಡಲಪೇಕ್ಷಿಸಿ ಅವಕಾಶಕ್ಕಾಗಿ ಹುಡುಕುತ್ತಿದ್ದನು. ಅವನು ಗಿಡ್ಡನಾಗಿದ್ದದರಿಂದ ಯೇಸು ಬರುತ್ತಿದ್ದ ಮಾರ್ಗದಲ್ಲಿ ಮುಂದೆ ಓಡಿಹೋಗಿ ಅವರನ್ನು ನೋಡಲು ತನ್ನ ಪದವಿ, ಹೆಮ್ಮೆ ಮತ್ತು ಅಂತಸ್ತು ಎಲ್ಲವನ್ನು ಮರೆತು ಕಷ್ಟಪಟ್ಟು ಒಂದು ಆಲದ ಮರವನ್ನು ಹತ್ತಿದನು. ಜಕ್ಕಾಯನಿಗೆ ಮರವನ್ನು ಹತ್ತಲು ಅಭ್ಯಾಸವೆಲ್ಲಾ ಇದ್ದಿರುವುದಿಲ್ಲ. ಆದರೆ ಯೇಸು ಕ್ರಿಸ್ತನನ್ನು ನೋಡುವ ಬಯಕೆಯಿಂದ ಹತ್ತಿಬಿಟ್ಟನು. ಯೇಸು ಅಲ್ಲಿಗೆ ಬಂದು ನಿಂತು ಮೇಲಕ್ಕೆ ನೋಡಿ "ಜಕ್ಕಾಯನೇ, ತಟ್ಟನೆ ಇಳಿದು ಬಾ, ನಾನು ಈಹೊತ್ತು ನಿನ್ನ ಮನೆಯಲ್ಲಿ ಇಳುಕೊಳ್ಳಬೇಕು" ಎಂದು ಹೇಳಿದರು.

 

ಜಕ್ಕಾಯನು ತಕ್ಷಣ ಮರದಿಂದ ಕೆಳಗಿಳಿದು ಸಂತೋಷದಿಂದ ತನ್ನ ಮನೆಗೆ ಕರೆದೊಯ್ದನು. “ಯೇಸು ಅವನಿಗೆ ನಿನ್ನ ಬಳಿ ಇರುವುದನ್ನೆಲ್ಲಾ ಮಾರಿ ಕೊಟ್ಟುಬಿಡು” ಎಂದೆಲ್ಲಾ ಏನೂ ಹೇಳಲಿಲ್ಲ. ದೇವರನ್ನು ಕಂಡ ಜಕ್ಕಾಯನಿಗೆ ಪಾಪದ ಅರಿವಾಯಿತು. ಪಾಪ ಕ್ಷಮಾಪಣೆಯನ್ನು ಪಡೆಯುವುದು ಮಾತ್ರವಲ್ಲ, ಅದನ್ನು ಕ್ರಿಯೆಯಲ್ಲಿಯೂ ತೋರಿಸುತ್ತಾನೆ.

 

ಪಾಪವು ದೇವರನ್ನು ಮತ್ತು ಮನುಷ್ಯನನ್ನು ಬೇರ್ಪಡಿಸುತ್ತದೆ. ಪ್ರಪಂಚದಾದ್ಯಂತ ಜನರು ಪಾಪ ಕ್ಷಮಾಪಣೆಯನ್ನು ಪಡೆಯಲು ವಿವಿಧ ಮಾರ್ಗಗಳನ್ನು ಅನುಸರಿಸುತ್ತಾರೆ. ಯೇಸುಕ್ರಿಸ್ತನ ರಕ್ತದ ಮೂಲಕ ಮಾತ್ರವೇ ಪಾಪದಿಂದ ವಿಮೋಚನೆ ಎಂಬುದು ಜನರಿಗೆ ಗೊತ್ತಿಲ್ಲ. ಪಾಪ ಎಂದರೇನು? ಮಾರ್ಕನು 7: 20-23 ರಲ್ಲಿ ಮನುಷ್ಯನೊಳಗಿಂದ ಹೊರಡುವಂಥದೇ ಮನುಷ್ಯನನ್ನು ಹೊಲೆಮಾಡುವದು ಎಂದು ಓದುತ್ತೇವೆ. ಮನುಷ್ಯರ ಮನಸ್ಸಿನೊಳಗಿಂದ ಸೂಳೆಗಾರಿಕೆ ಕಳ್ಳತನ ಕೊಲೆ ಹಾದರ ದ್ರವ್ಯಾಶೆ ಕೆಡುಕುತನ ಮೋಸ ಬಂಡತನ ಹೊಟ್ಟೇಕಿಚ್ಚು ಬೈಗಳು ಸೊಕ್ಕು ಬುದ್ಧಿಗೇಡಿತನ ಇಂಥವುಗಳು . ನಮ್ಮ ಪಾಪಗಳನ್ನು ನಾವು ಅರಿಕೆಮಾಡಿ ಬಿಟ್ಟುಬಿಟ್ಟರೆ ಅವುಗಳನ್ನು ಕ್ಷಮಿಸಿ ಎಲ್ಲಾ ಅನ್ಯಾಯವನ್ನು ನೀಗಿಸಿ ನಮ್ಮನ್ನು ಶುದ್ಧೀಕರಿಸಲು ಆತನು ನಂಬಿಗಸ್ತನೂ ನೀತಿವಂತನೂ ಆಗಿದ್ದಾರೆ.

 

ಸ್ನೇಹಿತರೇ, ನಾವೂ ಸಹ ಒಂದು ವೇಳೆ ಪಾಪದಲ್ಲಿ ಜೀವಿಸುತ್ತಿದ್ದರೆ, ಜಕ್ಕಾಯನಂತೆಯೇ ದೇವರನ್ನು ಹುಡುಕೋಣ. ಆತನು ನಮ್ಮ ಪಾಪಗಳನ್ನು ಕ್ಷಮಿಸಲು ಮತ್ತು ನಮಗೆ ಹೊಸ ಜೀವನವನ್ನು ನೀಡಲು ಆಸಕ್ತಿಯುಳ್ಳವರಾಗಿದ್ದಾರೆ. ನಾವು ಪಡೆದ ಪಾಪಕ್ಷಮಾಪಣೆಯ ನಿಶ್ಚಿತತೆಯನ್ನು ಇತರರಿಗೆ ತಿಳಿಸೋಣ. ಹಲ್ಲೇಲೂಯಾ!

- Bro. ಮುರಳಿ ಗಿದ್ಯೋನ್

 

ಪ್ರಾರ್ಥನಾ ಅಂಶ:

"ಡ್ರಗ್ ಅಡಿಟ್" ಸೆಂಟರ್ ಯೋಜನೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş