Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 20.11.2023
Share:

By Village Missionary Movement

Monday, 20-Nov-2023

ಧೈನಂದಿನ ಧ್ಯಾನ(Kannada) – 20.11.2023

 

ಒಗ್ಗಟ್ಟಾಗಿ ಕೈ ಎತ್ತೋಣ

 

"…ನಾನು ಯೆಹೋವನೇ ಎಂಬದು ನಿನಗೆ ಗೊತ್ತಾಗುವಂತೆ ಈಹೊತ್ತೇ ಇವರನ್ನೆಲ್ಲಾ ನಿನ್ನ ಕೈಗೆ ಒಪ್ಪಿಸುವೆನು" - 1 ಅರಸುಗಳು 20:13

 

ಇರುವೆಗಳು ಗೂಡು ಕಟ್ಟುವುದನ್ನು ಕಾಗೆಯೊಂದು ಗಮನಿಸಿತು. “ನೀವು ಎಷ್ಟು ಚಿಕ್ಕವರು, ಇಷ್ಟು ದೊಡ್ಡ ಗುಡಾರವನ್ನು ಹೇಗೆ ಕಟ್ಟಲಿದ್ದೀರಾ” ಎಂದು ಕಾಗೆ ಗೇಲಿ ಮಾಡಿತು. ಇರುವೆಗಳು ಸದ್ದಿಲ್ಲದೆ ಕೆಲಸ ಮಾಡುತ್ತಿದ್ದವು. ಕೆಲವೇ ದಿನಗಳಲ್ಲಿ, ಇರುವೆಗಳು ಮೂರು ಅಡಿ ಎತ್ತರದ ಗೂಡಿನೊಳಗೆ ತೆರಳಿದವು. ಕಾಗೆಗೆ ಒಂದೇ ಅಚ್ಚರಿ. "ನಿಮ್ಮಿಂದ ಹೇಗೆ ಸಾಧ್ಯವಾಯಿತು?" ಎಂದು ಕೇಳಿದಾಗ ಇರುವೆಗಳು "ನಾವು ಒಟ್ಟಿಗೆ ಕೆಲಸ ಮಾಡಿದೆವು" ಎಂದು ಹೇಳಿದವು. ಹೌದು, ನಾವು ಒಂಟಿಯಾಗಿ ನಿಂತು ಕಾರ್ಯ ಮಾಡುವುದಕ್ಕಿಂತ ಒಗ್ಗಟ್ಟಾಗಿ ಕೂಡಿ ಮಾಡಿದರೆ ದೊಡ್ಡ ಕಾರ್ಯಗಳನ್ನು ಸಾಧಿಸಬಹುದು.

 

ಸತ್ಯವೇದದಲ್ಲಿ ಹೀಗೆ ಕಾರ್ಯ ನಿರ್ವಹಿಸಿದ ಅರಸನೇ ಅಹಾಬನು. ಅರಾಮ್ಯರ ಅರಸನಾದ ಬೆನ್ಹದದನು ತನ್ನ ಎಲ್ಲಾ ಸೈನ್ಯವನ್ನು ಕೂಡಿಸಿಕೊಂಡು ರಥಾಶ್ವಬಲಗಳಿಂದ ಕೂಡಿದ ಮೂವತ್ತೆರಡು ಮಂದಿ ಅರಸರೊಡನೆ ಹೊರಟು ಬಂದು ಸಮಾರ್ಯಪಟ್ಟಣಕ್ಕೆ ಮುತ್ತಿಗೆ ಹಾಕಿ ಯುದ್ಧಮಾಡಿದನು. ಮೂವತ್ಮೂರು ರಾಜರು ಸುತ್ತುವರಿದಿದ್ದಾರೆ. ಒಬ್ಬ ಪ್ರವಾದಿಯು ಇಸ್ರಾಯೇಲ್ಯರ ಅರಸನಾದ ಅಹಾಬನ ಬಳಿಗೆ ಬಂದು "ಈ ಮಹಾ ಸಮೂಹವನ್ನು ನೋಡಿದಿಯಾ? ನಾನು ಯೆಹೋವನೇ ಎಂಬದು ನಿನಗೆ ಗೊತ್ತಾಗುವಂತೆ ಈಹೊತ್ತೇ ಇವರನ್ನೆಲ್ಲಾ ನಿನ್ನ ಕೈಗೆ ಒಪ್ಪಿಸುವೆನು" ಎಂದು ಹೇಳಿದನು. "ಇದು ಯಾರ ಮುಖಾಂತರವಾಗಿ ಆಗುವದು? ಎಂದು ಅಹಾಬನು ಕೇಳಿದ್ದಕ್ಕೆ "ಪ್ರದೇಶಾಧಿಪತಿಗಳ ಸೇವಕರ ಮುಖಾಂತರವಾಗಿ" ಎಂದು ಪ್ರವಾದಿ ಹೇಳುತ್ತಾರೆ. "ಯುದ್ಧಪ್ರಾರಂಭಮಾಡತಕ್ಕವರಾರು" ಎಂದನು. ಆ ಪ್ರವಾದಿ "ನೀನೇ" ಎಂದು ಹೇಳಿದರು. ಕರ್ತನು ಹೇಳಿದಂತೆಯೇ ರಾಜನು ಮಾಡಿ ಸಿರಿಯಾವನ್ನು ಸೋಲಿಸಿದನು.

 

ಪ್ರಿಯರೇ, ನಾವೂ ಕೂಡ ದೇಶವನ್ನು ಸ್ವತಂತ್ರಿಸಿಕೊಳ್ಳುವ ಪ್ರಜೆಗಳು! ನಮ್ಮ ಭಾರತ ದೇಶದಲ್ಲಿ ಲಕ್ಷಾಂತರ ಜನರು ದೇವರನ್ನು ತಿಳಿದುಕೊಳ್ಳಬೇಕು. ಎಲ್ಲಾ ಸ್ಥಳಗಳಲ್ಲೂ ಸಭೆಗಳು ತಲೆ ಎತ್ತಬೇಕು. ನಾವು ಅದಕ್ಕಾಗಿ ಏನು ಮಾಡಲಿದ್ದೇವೆ? ಒಬ್ಬರಿಂದ ಮಾತ್ರವೇ ಉಜ್ಜೀವನ ಬರುವುದಿಲ್ಲ. ನಾವು ಒಂದೇ ಮನಸ್ಸಿನಿಂದ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆಯೇ? ನಮ್ಮಲ್ಲಿ ಬುದ್ಧಿವಂತರು, ಶಕ್ತಿವಂತರು ಮತ್ತು ಪ್ರಭುಗಳು ಅನೇಕರಿಲ್ಲ. ಆದರೂ ನಾವು ಪವಿತ್ರಾತ್ಮದ ಮೂಲಕ ಸಾರುವ ಸುವಾರ್ತೆಯಿಂದ ವಿಶ್ವಾಸಿಗಳನ್ನು ರಕ್ಷಣೆಯೊಳಗೆ ಕರೆತರುವಾಗ ದೇವರಿಗೆ ಸಂತೋಷವಾಗುತ್ತದೆ. ಆದ್ದರಿಂದ ಕಲ್ವಾರಿ ಪ್ರೀತಿಯನ್ನು ಎಲ್ಲರೂ ಕಂಡುಕೊಳ್ಳುವಂತೆ ಮಾಡೋಣವಾ? ಯುಗದ ಸಮಾಪ್ತಿಯವರೆಗೂ ನಾನು ನಿಮ್ಮೊಂದಿಗೆ ಇರುತ್ತೇನೆ ಎಂಬವರ ವಾಗ್ದಾನವನ್ನು ನಂಬಿ ಹೇಳೋಣ. ದೇಶದಾದ್ಯಂತ ಸುವಾರ್ತೆಯ ಬೀಜವನ್ನು ಬಿತ್ತೋಣ. ನರಕದತ್ತ ಧಾವಿಸುವ ಜನರನ್ನು ತಡೆದು ನಿಲ್ಲಿಸೋಣ. ಆಮೆನ್!

- Sis. ಬ್ಯೂಲ

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್‌ನಲ್ಲಿ ಉಳಿದಿರುವ ನಿವೃತ್ತ ಮಿಷನರಿಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al